ನಾಳೆ ಜೂನಿಯರ್ ಎನ್.ಟಿ.ಆರ್ ಹುಟ್ಟುಹಬ್ಬಕ್ಕೆ ಕೊರಟಾಲ ಶಿವ ಸಪ್ರೈಸ್…

ಟಾಲಿವುಡ್ ನ ಯಂಗ್ ಟೈಗರ್‍ ಎನ್.ಟಿ.ಆರ್‍ ಈಗಾಗಲೇ ತಮ್ಮದೇ ಆದ ಸ್ಟಾರ್‍ ಡಮ್ ಬೆಳೆಸಿಕೊಂಡಿದ್ದಾರೆ. ನಂದಮೂರಿ ಕುಟುಂಬದಲ್ಲಿ ಜನಿಸಿದರೂ ಕೂಡ ತಮ್ಮದೇ ಆದ ನಟನೆಯ ಕೌಶಲ್ಯದಿಂದ ಖ್ಯಾತಿ ಪಡೆದಿದ್ದಾರೆ. ಇನ್ನೂ ಮೇ.20 ರಂದು ಜೂನಿಯರ್‍ ಎನ್.ಟಿ.ಆರ್‍ ಹುಟ್ಟುಹಬ್ಬವಾಗಿದೆ. ಈ ನಿಟ್ಟಿನಲ್ಲಿ ನಿರ್ದೇಶಕ ಕೊರಟಾಲ ಶಿವ ಎನ್.ಟಿ.ಆರ್‍ ರವರ ಮುಂದಿನ ಸಿನೆಮಾದ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ಸಪ್ರೈಸ್ ನೀಡಿದ್ದಾರೆ.

ಜೂನಿಯರ್‍ ಎನ್.ಟಿ.ಆರ್‍ ರವರ ಮೂವತ್ತನೇ ಸಿನೆಮಾದ ಬಗ್ಗೆ ಅವರ ಅಭಿಮಾನಿಗಳು ಅನೇಕ ದಿನಗಳಿಂದ ಕಾಯುತ್ತಿದ್ದರು. ಇದೀಗ NTR30 ಸಿನೆಮಾದ ಅಪ್ಡೇಟ್ ಬಂದಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಟಾಲಿವುಡ್ ಖ್ಯಾತ ನಿರ್ದೇಶಕ ಕೊರಟಾಲ ಶಿವ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದ ಪೋಸ್ಟರ್‍ ಒಂದನ್ನು ಬಿಡುಗಡೆ ಮಾಡಲಾಗಿದೆ. ಪ್ಯೂರಿ ಆಫ್ NTR30 ಎಂಬ ಹೆಸರಿನಲ್ಲಿ ಮೋಷನ್ ಪೋಸ್ಟರ್‍ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‍ ನಲ್ಲಿ ಸಮುದ್ರ ತೀರದಲ್ಲಿ ರಕ್ತ ಹರಿಯುತ್ತಿರುವಂತೆ, ಅದರ ಮದ್ಯೆ ಹಡಗಿನಲ್ಲಿ ಒಂದು ಕೈಯಲ್ಲಿ ಕೊಡಲಿ ಮತ್ತೊಂದು ಕೈಯಲ್ಲಿ ಕತ್ತಿಯನ್ನು ಇಟ್ಟುಕೊಂಡು ಎನ್.ಟಿ.ಆರ್‍ ಸೈಡ್ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಎನ್.ಟಿ.ಆರ್‍ ಅವರ ಈ ಮಾಸ್ ಲುಕ್ ಗೆ ಅಭಿಮಾನಿಗಳು ಕೇಕೆ ಹಾಕುತ್ತಿದ್ದಾರೆ.

ಅಷ್ಟೇ ಅಲ್ಲದೇ ವಿಡಿಯೋ ಒಂದು ಸಹ ಬಂದಿದ್ದು, ವಿಡಿಯೋದಲ್ಲಿ ಡೈಲಾಗ್ಸ್ ಸಹ ಹೊರಬಂದಿದ್ದು, ಫ್ಯಾನ್ಸ್ ಗಳಿಗೆ ರಸದೌತಣ ನೀಡಿದ್ದಂತಾಗಿದೆ. ಇನ್ನೂ ಈ ಪೋಸ್ಟ್ ನಲ್ಲಿ ಆಗಾಗ ಧೈರ್ಯಕ್ಕೂ ತಿಳಿಯದು, ಅವಸರಕ್ಕೆ ಮೀರಿ ಧೈರ್ಯ ಇರಬಾರದೆಂದು, ಆ ಸಮಯದಲ್ಲಿ ಭಯಕ್ಕೆ ತಿಳಿಯಬೇಕು ಅದು ಬರಬೇಕಾದ ಸಮಯ ಬಂದಿದೆ ಎಂದು ಬರುತ್ತಿದ್ದೇನೆ ಎಂದು ಎನ್.ಟಿ.ಆರ್‍ ವಾಯ್ಸ್ ನೊಂದಿಗೆ ಬಂದ ವಿಡಿಯೋ ಶಿಳ್ಳೇ ಹೊಡೆಸುವಂತಿದೆ. ಜೊತೆಗೆ ಹಿನ್ನೆಲೆ ಸೌಂಡ್ಸ್ ಅಂತೂ ಗೂಸ್ ಬಂಪ್ಸ್ ಏರುವ ಆಗಿದೆ.  ಇನ್ನೂ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಈ ಸಿನೆಮಾ ಸಿದ್ದವಾಗಲಿದ್ದು, ಇದೀಗ ಮೋಷನ್ ಪೋಸ್ಟರ್‍ ಅನ್ನು ತೆಲುಗು ಸೇರಿದಂತೆ ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ.

ಇನ್ನೂ ಈಗಾಗಲೇ ಈ ಸಿನೆಮಾ ಬಗ್ಗೆ ನಿರ್ದೇಶಕ ಕೊರಟಾಲ ಶಿವ ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದರು. ಈ ಸಿನೆಮಾದ ಕಥೆ ರಿವೇಂಜ್ ಡ್ರಾಮಾ ಆಗಿದೆ. ದೊಡ್ಡ ಮಟ್ಟದಲ್ಲೇ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ಅಭಿಮಾನಿಗಳು ಬಯಸುವಂತಹ ಎಲ್ಲಾ ಅಂಶಗಳನ್ನು ಒಳಗೊಂಡತೆ ಚಿತ್ರೀಕರಿಸಲಾಗುತ್ತದೆ ಎಂದು ಹೇಳಿದ್ದರು. ಇದೀಗ ಪೋಸ್ಟರ್‍ ಈ ಮಟ್ಟಿಗೆ ಟ್ರೆಂಡಿಂಗ್ ಆಗಿದ್ದರೇ ಇನ್ನೂ ಟ್ರೈಲರ್‍ ರೆಕಾರ್ಡ್‌ ಬ್ರೇಕ್ ಮಾಡಬಹುದಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Previous articleಸಂಜನಾ ಗಲ್ರಾನಿಗೆ ಡಬಲ್ ಖುಷಿ, ತಂಗಿಯ ಮದುವೆ ಒಂದು ಕಡೆ, ಮತ್ತೊಂದು ಕಡೆ ಗಂಡು ಮಗುವಿಗೆ ಜನ್ಮ…
Next articleಇನ್ನೂ ಮುಂದೆ ರಶ್ಮಿಕಾರನ್ನು ರಶ್ ಎಂದು ಕರೆಯಬೇಕಂತೆ….