Film News

ನೋರಾ ಫತೇಹಿ ಹಳೇಯ ಘಟನೆ ನೆನೆದು ಕಣ್ಣೀರಿಟ್ಟರು!

ಮುಂಬೈ: ಕೆನಡಾ ಮೂಲದ ನೋರಾ ಫತೇಹಿ ಇತ್ತೀಚಿಗೆ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟನೆಗಾಗಿ ತಾವು ಬಂದ ಸಂದರ್ಭದಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಹಿಂದಿ ಬರುವುದಿಲ್ಲ ಎಂದು ನನ್ನನ್ನು ಅಣುಕಿಸುತ್ತಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.

ಬಾಲಿವುಡ್ ಸ್ಟಾರ್ ಡ್ಯಾನ್ಸರ್ ಎಂದೇ ಕರೆಯುವ ನೋರಾ ಫತೇಹಿ ಬಾಲಿವುಡ್ ರಂಗದಲ್ಲಿ ನೆಲೆ ಕಂಡುಕೊಳ್ಳಲು ತುಂಬಾ ಕಷ್ಟಪಟ್ಟಿದ್ದಾರೆ. ಇದೀಗ ಬಾಲಿವುಡ್‌ನಲ್ಲಿ ಈಕೆ ಪ್ರಖ್ಯಾತಿ ಪಡೆದಿದ್ದಾರೆ ಜೊತೆಗೆ ಈಕೆಯ ಡ್ಯಾನ್ಸ್‌ಗೆ ಎಲ್ಲರೂ ಫಿದಾ ಆಗುತ್ತಿದ್ದಾರೆ. ಬಾಲಿವುಡ್ ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ ನೋರಾ ಫತೇಹಿ. ಕೆನಾಡ ಮೂಲದ ಈಕೆ ಬಾಲಿವುಡ್‌ನಲ್ಲಿ ಅವಕಾಶಕ್ಕಾಗಿ ಬಂದಾಗ ಅನೇಕ ಅವಮಾನಗಳನ್ನು ಕಂಡಿದ್ದಾರಂತೆ. ಈ ಕುರಿತು ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಬಾಲಿವುಡ್‌ಗೆ ಆಡಿಷನ್‌ಗಾಗಿ ನೋರಾ ಫತೇಹಿ ಬಂದಾಗ ಆಕೆಗೆ ದೊಡ್ಡ ಶಾಕ್ ಕಾದಿತ್ತಂತೆ. ಹಿಂದಿ ಬಲ್ಲವರಿಗೆ ಮಾತ್ರ ಪ್ರಾಮುಖ್ಯತೆಯನ್ನು ಆಡಿಷನ್‌ಗಳಲ್ಲಿ ನೀಡಲಾಗುತ್ತಿತ್ತಂತೆ. ಕೆನಡಾ ಮೂಲದ ನೋರಾ ಫತೇಹಿಗೆ ಹಿಂದೆ ಭಾಷೆ ಬರುತ್ತಿರಲಿಲ್ಲ. ಆಗ ನೋರಾ ಮಾತನಾಡುವ ಹಿಂದೆ ಭಾಷೆಯನ್ನು ಕಂಡು ಬಾಲಿವುಡ್‌ನ ಕೆಲವರು ನಗುತ್ತಾ ಅಣುಕಿಸುತ್ತಿದ್ದರಂತೆ. ಇದರಿಂದ ಮಾನಸಿಕವಾಗಿ ತುಂಬಾ ನೊಂದಿರುವುದಾಗಿ ನೋರಾ ತಿಳಿಸಿದ್ದಾರೆ.

ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಲ್ಲಿ ಐಶಾರಾಮಿ ಜೀವನ ನಡೆಸಬಹುದು ಎಂದುಕೊಂಡಿದ್ದ ನೋರಾಗೆ ಹಿಂದಿ ಭಾಷೆ ದೊಡ್ಡ ಸವಾಲಾಗಿ ಪರಿಣಮಿಸಿತು. ನಂತರ ಹಿಂದಿ ಭಾಷೆಯನ್ನು ಕಲಿಯಲು ಆರಂಭಿಸಿದರು. ಐದಾರು ವರ್ಷಗಳ ಬಳಿಕ ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಛಲ ಬಿಡದ ನೋರಾ ಹಿಂದಿ ಕಲಿತು ಇದೀಗ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ದಾರೆ. ಅಪಾರ ಸಂಖ್ಯೆಯಲ್ಲಿ ನೋರಾ ಅಭಿಮಾನಿಗಳು ಆಕೆಯ ಡ್ಯಾನ್ಸ್ ನೋಡಲು ಕಾಯುತ್ತಿರುತ್ತಾರೆ. ಛಲದಿಂದ ಏನಾದರೂ ಸಾಧಿಸಬಹುದು ಎಂಬುದಕ್ಕೆ ನೋರಾ ಸಹ ಸಾಕ್ಷಿಯಾಗಿದ್ದಾಳೆ.

Trending

To Top