Kannada Reality Shows

ಸಿಲ್ಲಿ ಲಲ್ಲಿ ಖ್ಯಾತಿಯ NML ನಮಿತಾ ರಾವ್, ಈಗ ಎಲ್ಲಿದ್ದಾರೆ, ಹೇಗ್ ಇದ್ದಾರೆ, ಏನು ಮಾಡ್ತಾ ಇದ್ದಾರೆ ನೋಡಿ!

ಸಿಲ್ಲಿ ಲಲ್ಲಿ ಧಾರಾವಾಹಿ ಎಂದಾಕ್ಷಣ ನಮಗೆ ವಿಠ್ಠಲ್ ರಾವ್, ಲಲಿತಾಂಬ, ವಿಶಾಲೂ, NML , ಸೇರಿದಂತೆ ಹಲವಾರು ಪಾತ್ರಗಳು ನೆನಪಾಗುತ್ತೆ. ಈ ಧಾರಾವಾಹಿಯಲ್ಲಿ ವಿಠ್ಠಲ್ ರಾವ್ ಪಾತ್ರವನ್ನು ರವಿ ಶಂಕರ್ ಅವರು ಮಾಡಿದ್ದು, ಲಲಿತಾಂಬ ಪಾತ್ರವನ್ನು ಮಂಜು ಭಾಷಿಣಿ ಅವರು ಮಾಡಿದ್ದು, NML ಪಾತ್ರವನ್ನು ನಮಿತಾ ರಾವ್ ಅವರು ಮಾಡಿದ್ದಾರೆ! ಅಂದಹಾಗೆ NML ನಮಿತಾ ರಾವ್ ಅವರು ಈಗ ಎಲ್ಲಿದ್ದಾರೆ, ಅವರ ಕುಟುಂಬ ಹೇಗಿದೆ, ನಮಿತಾ ರಾವ್ ಅವರು ಏನ್ ಮಾಡುತ್ತಾ ಇದ್ದಾರೆ, ಹೇಗಿದ್ದಾರೆ ಗೊತ್ತಾ! ಈ ಸುದ್ದಿಯನ್ನು ಪೂರ್ತಿ ಓದಿರಿ, ಇಷ್ಟ ಆದರೆ ತಪ್ಪದೆ ಶೇರ್ ಮಾಡಿರಿ

ನಮ್ಮ NML ನಮಿತಾ ರಾವ್ ಅವರು ತಮ್ಮ 16 ನೇ ವ’ಯಸ್ಸಿನಲ್ಲೇ, ತಮ್ಮ ಶಾಲಾಭ್ಯಾಸದ ಜೊತೆಗೆ, ಮನೆಗೆ ಸಹಾಯ ಆಗಲಿ, ತಂದೆಗೆ ಸಹಾಯ ಆಗಲಿ ಎಂದು, ಪಾರ್ಟ್ ಟೈ’ಮ್ ನಿರೂಪಕರಾಗಿ ಸಿಟಿ ಕೇಬಲ್ ಎಂಬ ಒಂದು ಚಾನೆಲ್ ಗೆ ಕೆಲಸ ಮಾಡಲು ಶುರು ಮಾಡಿದರು. ನಂತರ, ನಮಿತಾ ಅವರು ರಂಗ ಭೂಮಿಯಲ್ಲಿ ಕೂಡ ಕೆಲಸ ಮಾಡಲು ಶುರು ಮಾಡಿ, ಡಾನ್ಸ್ ಕ್ಲಾಸ್ ಗೆ ಕೂಡ ಸೇರಿಕೊಂಡು ಬ್ಯಾ’ಲೆ ಎಂಬ ಡಾನ್ಸ್ ಶೈಲಿಯನ್ನು ಕಲಿಯಲು ಶುರು ಮಾಡಿದರು. ನಮಿತಾ ರಾವ್ ಅವರು ನಟರಂಗದಲ್ಲಿ ಅಭಿನಯಿಸಿದ ಮೊದಲ ನಾಟಕದ ಹೆಸರು ಅ’ಗ್ನಿ ವ’ರಣ! ಇದಾದಮೇಲೆ ನಮಿತಾ ರಾವು ಸಾಕಷ್ಟು ನಾಟಕಗಳಲ್ಲಿ ಬಹಳ ಒಳ್ಳೆಯ ಪಾತ್ರಗಳನ್ನೂ ಮಾಡಿದ್ದಾರೆ.

ಸುಮಾರು ನಾಟಕಗಳಲ್ಲಿ ಪಾತ್ರ ಮಾಡಿದ್ದ NML ನಮಿತಾ ರಾವು, ಅವರಿಗೆ ನಂತರ ವಿಜಯ್ ಪ್ರಸಾದ್ ನಿರ್ದೇಶನದ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ NML ಪಾತ್ರ ಮಾಡುವ ಅವಕಾಶ ಸಿಕ್ಕಿತು! ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ NML ಪಾತ್ರ ಸಕತ್ ಫೇಮಸ್ ಆಗಿ, ನಮಿತಾ ರಾವ್ ಅವರು ಕರ್ನಾಟಕದ ಮನೆ ಮಾತಾದರು. ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಡಾಕ್ಟರ್ ವಿಠ್ಠಲ್ ರಾವ್ ಜೊತೆ ಸಾಕಷ್ಟು ಅದ್ಭುತ ಹಾಸ್ಯ ದೃಶ್ಯ ಗಳಲ್ಲಿ ನಮಿತಾ ರಾವ್ ಅವರು ಕಾಣಿಸಿಕೊಂಡಿದ್ದಾರೆ! ಇವೆಲ್ಲದರ ನಡುವೆ ನಮಿತಾ ರಾವ್, ಸಿಲ್ಲಿ ಲಲ್ಲಿ ಧಾರಾವಾಹಿ ಮುಗಿದ ಮೇಲೆ ಝೀ ಕನ್ನಡದಲ್ಲಿ ಪ್ರಸಾರ ವಾಗುತ್ತಿದ್ದ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕೂಡ ನಿರೂಪಕರಾಗಿ ಕೆಲಸ ಮಾಡಿದ್ದಾರೆ. (ಕಾಮಿಡಿ ದರ್ಬಾರ್)

NML ನಮಿತಾ ರಾವ್ ಅವರು ಸಿಲ್ಲಿ ಲಲ್ಲಿ ಹಾಗು ಮಾಯಾ ಮೃಗ ಎಂಬ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ನಂತರ ಪಾಪ ಪಾಂಡು ಖ್ಯಾತಿಯ ಗೋಪಿ ಅಂದರೆ ವಿಕ್ರಂ ಅವರ ಜೊತೆ ಮಾಡುವೆ ಆಗಿ, ಸದ್ಯ ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಸ್ವಲ್ಪ ವರ್ಷಗಳ ಕಾಲ ಕಿರುತೆರೆಯಿಂದ ದೂರ ಒಲಿದಿದ್ದ ನಮಿತ್ರ ರಾವ್ ಅವರು ಸದ್ಯ “ನವಿ ನಿರ್ಮಿತಿ” ಎಂಬ ಸಂಸ್ಥೆಯನ್ನು ಹೊಂದಿದ್ದು, ಅದರಲ್ಲಿ ಕುರಿ ಚಿತ್ರಗಳನ್ನು, ಹಾಡುಗಳನ್ನು, ವಿಡಿಯೋಗಳನ್ನು, ನಿರ್ಮಾಣ ಮಾಡುತ್ತಾರೆ! ಇದಲ್ಲದೆ ಕೆಲವೊಮ್ಮೆ ನಮಿತಾ ರಾವ್ ಅವರನ್ನು ಅಲ್ಲೊಂದು ಇಲ್ಲೊಂದು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ, ಸ್ಪರ್ದಿಯಾಗಿ ನೀವು ನೋಡಬಹುದು! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ನಮಿತಾ ರಾವ್ ಅವರು ಇನ್ನೂ ಹೆಚ್ಚು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿ ಎಂದು ನಮ್ಮ ಅನಿಸಿಕೆ! (Photos courtesy – Instagram)

Trending

To Top