News

ದರ್ಶನ್ ಅವರ ಯಜಮಾನ ಹಾಗು ಸುದೀಪ್ ಪೈಲ್ವಾನ್ ಅನ್ನು ಹಿಂದಿಕ್ಕಿತ್ತಾ ನಿಖಿಲ್ ಸೀತಾರಾಮ ಕಲ್ಯಾಣ?

kumaraswamy1

ನಿಮಗೆಲ್ಲ ಗೊತ್ತಿರೋ ಹಾಗೆ ಇದೆ ತಿಂಗಳು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿತ್ತು. ಶಿವನಂದಿ ಹಾಡು ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ಸದ್ದು ಮಾಡಿತ್ತು. ಇದಲ್ಲದೆ ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬರೋಬ್ಬರಿ 5 ದಿನ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿಟ್ಟು ಹಾಗು ಈ ವಿಡಿಯೋವನ್ನು ಬರೋಬ್ಬರಿ ೧ ವಾರದಲ್ಲಿ ಸುಮಾರು 60 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಇದಲ್ಲದೆ ಯಜಮಾನ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಕೂಡ ಇತ್ತೀಚಿಗೆ ಅಷ್ಟೇ ಬಿಡುಗಡೆ ಆಗಿ ಅದು ಕೂಡ ಯೌಟ್ಯೂಬ್ ನಲ್ಲಿ ಸಕತ್ ಸೌಂಡ್ ಮಾಡಿತ್ತು. ಸೋನು ನಿಗಮ್ ಹಾಡಿರುವ ಈ ಹಾಡನ್ನು ಕೂಡ ಅದೆಷ್ಟೋ ಲಕ್ಷ ಮಂದಿ ಯೌಟ್ಯೂಬ್ ನಲ್ಲಿ ನೋಡಿದ್ದಾರೆ.
ಈ ತಿಂಗಳು ಸಂಕ್ರಾಂತಿ ಹಬ್ಬದ ದಿನ ದರ್ಶನ್ ಅವರ ಯಜಮಾನ ಚಿತ್ರದ ಜೊತೆ ನಮ್ಮ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿತ್ತು. ಪೈಲ್ವಾನ್ ಚಿತ್ರದ ಟೀಸರ್ ಕೂಡ ಯೌಟ್ಯೂಬ್ ನಲ್ಲಿ ಸುಮಾರು 2 ದಿನಗಳ ಕಾಲ ಟ್ರೆಂಡಿಂಗ್ ಆಗಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಟೀಸರನ್ನು ಒಂದು ವಾರದಲ್ಲಿ ಬರೋಬ್ಬರಿ ೩೦ ಲಕ್ಷಕ್ಕೂ ಹೆಚ್ಚು ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ. ಇದಲ್ಲದೆ ನಮ್ಮ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಅನ್ನು ನೋಡಿ ಬಾಲಿವುಡ್ ದಿಗ್ಗಜರಾದ ಸಲ್ಮಾನ್ ಖಾನ್, ತಮಿಳು ನಟ ಪ್ರಭುದೇವ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಹಾಗು ಇನ್ನೂ ಹತ್ತು ಹಲವಾರು ಭಾರತದ ಕಲಾವಿದರು ಇದರ ಬಗ್ಗೆ ಟ್ವೀಟ್ ಮಾಡಿದ್ದರು, ಹಾಗು ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. ನಮ್ಮ ದರ್ಶನ್ ಅವರ ಯಜಮಾನ ಹಾಗು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳು.
ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಹಾಗು ರಚಿತಾ ರಾಮ್ ಅವರ ಅಭಿನಯದ ಮತ್ತೊಂದು ಬಹು ನಿರೀಕ್ಷೆಯ ಕನ್ನಡ ಚಿತ್ರವೆಂದರೆ ಅದು ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ. ಸೀತಾರಾಮ ಕಲ್ಯಾಣ ಚಿತ್ರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೈಲರ್ 3 ದಿನಗಳ ಹಿಂದೆ ಅಷ್ಟೇ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದೆ ಹಾಗು ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಅನ್ನು ಕೇವಲ 3 ದಿನಗಳಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಈ ಮೂಲಕ ಬಲ್ಲ ಮೂಲಗಳ ಪ್ರಕಾರ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ದರ್ಶನ್ ಅವರ ಯಜಮಾನ ಹಾಡಿನ ವಿಡಿಯೋ ವನ್ನು ಹಾಗು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರನ್ನು ಯೌಟ್ಯೂಬ್ ನಲಿ ಹಿಂದಿಕ್ಕಿದೆ ಎಂದು ತಿಳಿದು ಬಂದಿದೆ. ದರ್ಶನ್ ಅವರ ಯಜಮಾನ ಚಿತ್ರದ ಹಾಡನ್ನು ಒಂದು ವಾರದಲ್ಲಿ 60 ಲಕ್ಷ ಜನ ನೋಡಿದ್ದಾರೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರನ್ನು ಒಂದು ವಾರದಲ್ಲಿ 30 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ, ಹಾಗು ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಅನ್ನು ಕೇವಲ ಮೂರು ದಿನಕ್ಕೆ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ ಎಂದು ತಿಳಿದು ಬಂದಿದೆ.
ಏನೇ ಆಗಲಿ ನಮ್ಮ ಕನ್ನಡ ಚಿತ್ರಗಳ ಮಾರ್ಕೆಟ್ ಈಗ ಬೆಳೆದಿದೆ. ಕೆಜಿಫ್ ನಂತರ ಇಡೀ ಭಾರತದ ಜನರು ನಮ್ಮ ಕನ್ನಡ ಚಿತ್ರಗಳತ್ತ ಮುಖ ಮಾಡಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ ಎಂದೇ ಹೇಳಬಹುದು. ಕನ್ನಡ ಚಿತ್ರ ರಂಗದ ಗಳಿಕೆ ಕೂಡ ಕಳೆದ 2 ವರ್ಷಗಳಿಂದ ಹೆಚ್ಚಾಗಿದೆ. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಲಿ ಎಂದು ನಮ್ಮ ಆಸೆ, ಹಾಗು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಕೂಡ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಲಿ ಎಂದು ನಮ್ಮ ಆಸೆ. ಈ ಎರಡು ಚಿತ್ರಗಳು ಇದೆ ವರ್ಷ ಬಿಡುಗಡೆ ಆಗಲಿದೆ. ದರ್ಶನ್ ಅವರ ಯಜಮಾನ ಚಿತ್ರವನ್ನು ಬಿಡುಗಡೆ ಆಗಲು ಸಿದ್ಧವಾಗಿದೆ. ಪೈಲ್ವಾನ್ ಚಿತ್ರ ಕೂಡ feb ನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top