ಬೆಂಗಳೂರು: ಕನ್ನಡ ಸಿನಿರಂಗದ ಯುವನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರು ಇಂದಿಗೆ ೩೧ ನೇ ವಸಂತಕ್ಕೆ ಕಾಲಿಡುತ್ತಿದ್ದು, ಮದುವೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ತಮ್ಮ ಹೆಂಡತಿಯೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ನಿಖಿಲ್.
ನಟ ನಿಖಿಲ್ ಕುಮಾರಸ್ವಾಮಿ ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಮಾಡಿ ತಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿಯವರ ಆರ್ಶಿವಾದ ಪಡೆದಿದ್ದಾರೆ. ನಂತರ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂದಹಾಗೆ ನಿಖಿಲ್ ಮದುವೆಯಾದ ಬಳಿಕ ಮೊದಲ ಬಾರಿಗೆ ತಮ್ಮ ಪತ್ನಿಯೊಂದಿಗೆ ಬರ್ತಡೇ ಆಚರಣೆ ಮಾಡಿಕೊಳ್ಳುತ್ತಿರುವುದು ನಿಖಲ್ ರವರಿಗೆ ಖುಷಿಯ ವಿಚಾರವಾಗಿದೆ. ಇನ್ನೂ ನಿಖಿಲ್ ಪತ್ನಿ ರೇವತಿ ತಮ್ಮ ಗಂಡನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು, ಈ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೂ ನಿಖಿಲ್ ರವರಿಗೆ ಚಿತ್ರರಂಗ ಖ್ಯಾತ ಕಲಾವಿದರು, ರಾಜಕಾರಣಿಗಳು ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯೇ ಬರುತ್ತಿದೆ. ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ನಿಖಿಲ್ ರವರಿಗೆ ಪ್ರೀತಿಯ ಸಂದೇಶಗಳು ಹರಿದು ಬರುತ್ತಿದೆ. ಇನ್ನೂ ನಿಖಿಲ್ ಅಭಿಮಾನಿಗಳು 100 ಕೆಜಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಂದಹಾಗೆ ಈ ಸಂಭ್ರಮದಲ್ಲಿ ನಿಖಿಲ್ ಸಹ ತಮ್ಮ ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದಾರೆ.
ಇನ್ನೂ ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ಹಲವು ಕಡೆ ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೊರೋನಾ ಕಾರಣದಿಂದ ನನ್ನ ಹುಟ್ಟುಹಬ್ಬ ಆಚರಣೆ ಬೇಡ ಅಂದುಕೊಂಡಿದ್ದೆ ಆದರೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದೀರಾ ನಿವೇಲ್ಲಾ ಸುರಕ್ಷಿತವಾಗಿ ಮನೆಗೆ ಹೋಗಿ, ನನ್ನ ಹುಟ್ಟುಹಬ್ಬವನ್ನು ಮತಷ್ಟು ಸಂಭ್ರಮದಿಂದ ಆಚರಿಸಿದ ನಿಮಗೆಲ್ಲಾ ಧನ್ಯವಾದಗಳು ಎಂದಿದ್ದಾರೆ.
ಅಷ್ಟೇ ಅಲ್ಲದೇ ನಿಖಿಲ್ ಹುಟ್ಟುಹಬ್ಬದಂದು ರೈಡರ್ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಆಕ್ಷನ್ ಚಿತ್ರ ಇದಾಗಿದೆಯಂತೆ. ಇನ್ನೂ ಈ ಚಿತ್ರ ಕನ್ನಡ ಹಾಗೂ ತೆಲುಗು ೨ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕಾಶ್ಮೀರಾ ಪರದೇಶಿ ಅಭಿನಯ ಮಾಡಿದ್ದಾರೆ.
