ಬೆಂಗಳೂರು: ಸ್ಯಾಂಡಲ್ವುಡ್ನ ಯುವ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ರವರು ಆರ್.ಎಕ್ಸ್ 100ಬೈಕ್ನಲ್ಲಿ ಹೆಂಡತಿಯೊಂದಿಗೆ ಜಾಲಿ ರೈಡ್ ಹೊರಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟ ನಿಖಿಲ್ ಕುಮಾರಸ್ವಾಮಿ ರವರ ಬಳಿ ಐಶಾರಾಮಿ ಕಾರುಗಳು ಬೈಕುಗಳಿದ್ದರೂ ಕೂಡ ಅವರು ಇದೀಗ ಆರ್.ಎಕ್ಸ್ 100 ಬೈಕಿನಲ್ಲಿ ರೈಡ್ ಹೋಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನಿಖಿಲ್ ಹಾಗೂ ರೇವತಿ ಇಬ್ಬರೂ ಬೈಕಿನಲ್ಲಿ ರೈಡ್ ಹೋಗುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ದುಬಾರಿ ವಾಹನಗಳಲ್ಲಿ ಓಡಾಡುವಂತಹ ನಿಖಿಲ್ ಇದೀಗ ಸಾಧಾರಣ ಬೈಕ್ ನಲ್ಲಿ ರೈಡ್ ಹೋಗುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ರಾಮನಗರದ ಬಿಡದಿಯ ಬಳಿಯ ಕೇತಿಗಾನಹಳ್ಳಿ ಬಳಿರುವ ತೋಟದ ಮನೆಯಲ್ಲಿ ನಿಖಿಲ್ ದಂಪತಿ ಬೈಕ್ ರೈಡ್ ಮಾಡಿದ್ದಾರೆ. ನಿಖಿಲ್ ರವರಿಗೆ ಆರ್.ಎಕ್ಸ್ 100 ಬೈಕ್ ಎಂದರೇ ತುಂಬಾ ಇಷ್ಟ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ಈ ಬೈಕ್ ಏರಿ ತೋಟದ ಪ್ರದೇಶದಲ್ಲೆಲ್ಲಾ ಸುತ್ತಾಡಿ ಸಂತಸ ಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಮಾಸ್ಲುಕ್ ನಲ್ಲಿ ನಿಖಿಲ್ ಕುಮಾರ್ ಸ್ವಾಮಿ ರೈಡರ್ ಚಿತ್ರದ ಮೂಲಕ ತೆರೆಮೇಲೆ ಅಬ್ಬರಿಸಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕವಾಗಿ ಮುಕ್ತಾಯವಾಗಿದ್ದು, ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಜೊತೆಗೆ ಈಗಾಗಲೇ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಇನ್ನೂ ಈ ಚಿತ್ರದಲ್ಲಿ ಕೆಜಿಎಫ್ ಖ್ಯಾತಿ ಗರುಡಾ ವಿಲನ್ ಆಗಲಿದ್ದಾರೆ.
