ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟು, ಭರವಸೆಯ ನತನಹಿ ಹೊರಹೊಮ್ಮಿದರು. ನಂತರ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದರು.ಸಿನಿಮಾ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ಮಂಡ್ಯ ಕ್ಷೇತ್ರದಿಂದ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರು. ಆದರೆ ರಾಜಕೀಯದಲ್ಲಿ ಇವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಮದುವೆಯಾದ ನಿಖಿಲ್, ಪತ್ನಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ತಮ್ಮ ಮನೆಯಲ್ಲಿ ಹಾಗೂ ಬಿಡದಿ ಸಮೀಪ ಇರುವ ತಮ್ಮ ತೋಟದ ಮನೆಯಲ್ಲಿ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ನವದಂಪತಿಗಳು ವರ್ಕ್ ಔಟ್ ಕಡೆಗೂ ಗಮನ ಹರಿಸಿದ್ದಾರೆ. ನಿಖಿಲ್ ಸಹ ಫಿಟ್ನೆಸ್ ಫ್ರೀಕ್, ಇದೀಗ ಪತ್ನಿಗೂ ಸಹ ಫಿಟ್ನೆಸ್ ಬಗ್ಗೆ ಇಂಟರೆಸ್ಟ್ ಇರುವುದು ನಿಖಿಲ್ ಅವರಿಗೆ ಇನ್ನಷ್ಟು ಉತ್ತೇಜನ ನೀಡಿದೆ. ನಿಖಿಲ್, ಈ ಸಹ ಪತ್ನಿಯ ಜೊತೆ ವರ್ಕ್ ಔಟ್ ಮಾಡುವ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದರು. ಸಿನಿಮಗಾಗಿ ಸಹ ನಿಖಿಲ್ ಅವರು ಜಿಮ್ ನಲ್ಲಿ ಸಖತ್ತಾಗಿ ವರ್ಕ್ ಔಟ್ ಮಾಡುತ್ತಿದ್ದರು.
ಇದೀಗ, ಫಿಟ್ನೆಸ್ ಜೊತೆಗೆ ಯೋಗಾಭ್ಯಾಸದಲ್ಲಿ ತಲ್ಲೀನರಾಗಿದ್ದಾರೆ ನಿಖಿಲ್ ಮತ್ತು ಪತ್ನಿ ರೇವತಿ. ಪತ್ನಿಯ ಜೊತೆ ಯೋಗ, ಧ್ಯಾನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ನಿಖಿಲ್.”ಒಳ ಮನಸ್ಸಿನ ಶಾಂತಿಗೆ ಧ್ಯಾನ ಮುಖ್ಯ..” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಈಗಾಗಲೇ ಸಾಕಷ್ಟು ಲೈಕ್ಸ್ ಬಂದಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟು, ಭರವಸೆಯ ನತನಹಿ ಹೊರಹೊಮ್ಮಿದರು. ನಂತರ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದರು.ಸಿನಿಮಾ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ಮಂಡ್ಯ ಕ್ಷೇತ್ರದಿಂದ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರು. ಆದರೆ ರಾಜಕೀಯದಲ್ಲಿ ಇವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ.
