ಹೈದರಾಬಾದ್: ಮೆಗಾ ಕುಟುಂಬದ ನಟಿ ನಿಹಾರಿಕಾ ಕೊನಿದೆಲಾ ಮದುವೆ ಇತ್ತೀಚಿಗಷ್ಟೆ ನಡೆದಿದ್ದು, ಮದುವೆ ಬಳಿಕ ಉಡುಗೆ ತೊಡುಗೆಯಲ್ಲಿ ಸಾಕಷ್ಟು ಚೇಂಜ್ ಆಗಿದ್ದಾರೆ. ಇದೀಗ ಶಾರ್ಟ್ಸ್ ಡ್ರೆಸ್ ಧರಿಸಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದು, ಇಲ್ಲಿನ ಕೆಲವೊಂದು ಪೊಟೋಗಳನ್ನು ಶೇರ್ ಮಾಡಿದ್ದು ದೊಡ್ಡದಾಗಿ ವೈರಲ್ ಆಗುತ್ತಿದೆ.
ನಟಿ ನಿಹಾರಿಕಾ ಮದುವೆಗೂ ಮುನ್ನಾ ಪತಿ ಚೈತನ್ಯ ಜೊತೆಗೆ ಜಿಮ್ಗೆ ತೆರಳುತ್ತಿದ್ದರು. ಇದ್ದರೂ ಜೊತೆಯಲ್ಲೇ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಇದೀಗ ನಿಹಾರಿಕಾ ಜಿಮ್ನಲ್ಲಿ ವ್ಯಾಯಾಮ ಮಾಡಿ ಸುಸ್ತಾಗಿದ್ದು, ಬೆವರಿನೊಂದಿಗೆ ಇರುವ ಸೆಲ್ಫಿಗಳನ್ನು ಶೇರ್ ಮಾಡಿದ್ದಾರೆ. ಆದರೆ ಈ ಪೊಟೋಗಳಲ್ಲಿ ನಿಹಾರಿಕಾ ಧರಿಸಿರುವ ಡ್ರೆಸ್ನ್ನು ನೋಡಿ ಅಭಿಮಾನಿಗಳು ಹಾಗೂ ನೆಟ್ಟಿಗರು ಶಾಕ್ ಆಗಿದ್ದಾರೆ. ಪುಟ್ಟದಾದ ಡ್ರೆಸ್ನಲ್ಲಿ ದರ್ಶನ ಕೊಟ್ಟಿದ್ದು, ಎಲ್ಲರೂ ಶಾಕ್ ಆಗುತ್ತಿದ್ದಾರಂತೆ.
ಇನ್ನೂ ನಟಿ ನಿಹಾರಿಕಾ ಅಭಿನಯಿಸಿದ ಎಲ್ಲಾ ಸಿನೆಮಾಗಳಲ್ಲಾಗಲೀ, ಟೆಲೆವಿಜನ್ಗಳಲ್ಲಾಗಲೀ, ಸೋಷಿಯಲ್ ಮಿಡೀಯಾದಲ್ಲಾಗಲಿ ತುಂಬಾ ಉಡುಗೆಯನ್ನು ಧರಿಸುತ್ತಿದ್ದರು. ಮದುವೆಯಾದ ಬಳಿಕ ತುಂಬಾ ಚೇಂಜ್ ಆಗಿದ್ದು, ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮದುವೆಗೂ ಮುನ್ನಾ ಗೋವಾದಲ್ಲಿ ಬ್ಯಾಚುಲರ್ ಪಾರ್ಟಿಗಾಗಿ ಗೋವಾಗೆ ತೆರಳಿದ್ದು, ಅಲ್ಲಿ ತನ್ನ ಗ್ಯಾಂಗ್ನೊಂದಿಗೆ ಮಾಡಿದ ಪಾರ್ಟಿ, ತೊಟ್ಟ ಉಡುಪು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿತ್ತು. ಜೊತೆಗೆ ಮೆಗಾ ಕುಟುಂಬದಲ್ಲಿ ನಡೆದ ಕಾರ್ಯಕ್ರಮಗಳಲ್ಲೂ ಸಹ ನಿಹಾರಿಕಾ ಚಿಕ್ಕದಾದ ಡ್ರೆಸ್ಗಳಲ್ಲೇ ಕಾಣಿಸಿಕೊಂಡರು.
ಸದ್ಯ ನಿಹಾರಿಕಾ ಹೊಸ ವೆಬ್ಸಿರೀಸ್ ವೊಂದರ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ರಾತ್ರಿ ಹಗಲು ಶೂಟಿಂಗ್ ನಲ್ಲೇ ಇದ್ದಾರೆ. ಜೊತೆಗೆ ತುಂಬಾ ದಿನಗಳ ಬಳಿಕ ಶೂಟಿಂಗ್ ಸೆಟ್ನಲ್ಲಿ ಹೀಗೆ ಭಾಗಿಯಾಗಿರುವುದು ತುಂಬಾ ಸಂತಸವಾದ ವಿಚಾರ ಎಂದು ಇತ್ತೀಚಿಗಷ್ಟೆ ನಿಹಾರಿಕಾ ಹೇಳಿಕೊಂಡಿದ್ದರು.
