Film News

ನಿಹಾರಿಕಾ ಚೈತನ್ಯ ಮದುವೆಯ ಬ್ಯೂಟಿಪುಲ್ ಪೊಟೋಗಳು

ಹೈದರಾಬಾದ್: ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ಎಂಬ ಹೆಗ್ಗಳಿಕೆ ಪಾತ್ರವಾದ ನಿಹಾರಿಕಾ ಕೊನಿದೇಲಾ ಮದುವೆ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದಿದ್ದು, ಮದುವೆಯ ಕೆಲವು ಕಲರ್ ಪುಲ್ ಪೊಟೋಗಳು ಇಲ್ಲಿವೆ ನೋಡಿ…..

ಗೋಲ್ಡ್ ಬಣ್ಣದ ಸೀರೆಯಲ್ಲಿ ನಿಹಾರಿಕಾ, ಮದುಮಗ ಚೈತನ್ಯ ಕಂದು ಮತ್ತು ಗೋಲ್ಡ್ ಬಣ್ಣದ ಶೇರ್ವಾನಿ ಧರಿಸಿದ್ದರು. ಈ ಪೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್-ಚಲ್ ಸೃಷ್ಟಿಸಿದೆ.

ಇನ್ನೂ ನಿಹಾರಿಕಾ ಮದುವೆಯಲ್ಲಿ ಮೆಗಾಸ್ಟಾರ್ ಇಡೀ ಕುಟುಂಬ ಸಂತೋಷದಿಂದ ಸಂಭ್ರಮಿಸಿದೆ. ಚಿರಂಜೀವಿ ದಂಪತಿ, ಅಲ್ಲು ಅರ್ಜುನ್ ದಂಪತಿ, ರಾಮ್ ಚರಣ್ ದಂಪತಿ, ಪವನ್ ಕಲ್ಯಾಣ್, ಸಾಯಿ ಧರಮ್, ವೈಷ್ಣವ್ ತೇಜ್, ಕಲ್ಯಾಣ್ ದೇವ್ ಸೇರಿದಂತೆ ಮೆಗಾ ಕುಟುಂಬದ ಹೀರೋಗಳು ನಿಹಾರಿಕಾ ಮದುವೆಯಲ್ಲಿ ಪುಲ್ ಎಂಜಾಯ್ ಮಾಡಿದ್ದಾರೆ.

ರಾಮ್ ಚರಣ್ ಬಿಳಿ ಹಾಗೂ ಸಿಲ್ವರ್ ಬಣ್ಣದ ಶೇರ್ವಾನಿ ಹಾಗೂ ಪತ್ನಿ ಉಪಾಸನ ಕೆಂಪು ಬಣ್ಣದ ಎಂಬ್ರಾಯಿಡರಿ ಸೀರೆ ಧರಿಸಿ ಸಖತ್ ಮಿಂಚಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಸಹ ಬಿಳಿ ಮತ್ತು ಸಿಲ್ವರ್ ಬಣ್ಣದ ಶೇರ್ವಾನಿ ಹಾಗೂ ಪತ್ನಿ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಇನ್ನೂ ನಟ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ನಿಹಾರಿಕಾ ಮದುವೆಯಲ್ಲಿ ನೀಲಿ ಬಣ್ಣದ ಕುರ್ತ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದರು. ನಿಹಾರಿ ನಿಶ್ಚಿತಾರ್ಥಕ್ಕೆ ಗೈರು ಹಾಜರಿಯಾಗಿದ್ದ ಪವನ್ ಮದುವೆಗೆ ೨ ದಿನಗಳ ಮುಂಚೆಯೇ ಉದಯಪುರಕ್ಕೆ ತೆರಳಿದ್ದರು.

ಒಟ್ಟಿನಲ್ಲಿ ಮೆಗಾಸ್ಟಾರ್ ಇಡೀ ಕುಟುಂಬ ನಿಹಾರಿಕಾ ಮದುವೆಯಲ್ಲಿ ಸಖತ್ ಎಂಜಾಯ್ ಮಾಡಿದ್ದು, ಮದುವೆ ಸಂಪೂರ್ಣ ಉಸ್ತುವಾರಿಯನ್ನು ನಿಹಾರಿಕಾ ಸಹೋದರ ವರುಣ್ ತೇಜ್ ವಹಿಸಿಕೊಂಡಿದ್ದರು. ಮದುವೆಯ ದಿನಾಂಕಕ್ಕೂ ೨ ದಿನಗಳ ಮುಂಚೆಯೇ ಇಡೀ ಕುಟುಂಬ ಖಾಸಗಿ ವಿಮಾನದಲ್ಲಿ ಉದಯಪುರಕ್ಕೆ ತೆರಳಿದ್ದು, ಮದುವೆಯ ಪ್ರತಿಯೊಂದು ಗಳಿಗೆಯನ್ನು ಸಂಭ್ರಮಿಸಿದ್ದಾರೆ.

Trending

To Top