Film News

ಪ್ಯಾಂಟ್ ಲೆಸ್ ಅವತಾರದಲ್ಲಿ ನಿಧಿ ಸುಬ್ಬಯ್ಯ: ನೆಟ್ಟಿಗರಿಂದ ತರಾಟೆ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಟೊ ಒಂದನ್ನು ಶೇರ್ ಮಾಡಿದ್ದು, ನೆಟ್ಟಿಗರನ್ನು ಕೆರಳಿಸುವಂತೆ ಮಾಡಿದೆ. ಪ್ಯಾಂಟ್ ಲೆಸ್ ಅವತಾರದಲ್ಲಿ ನಿಧಿ ಸುಬ್ಬಯ್ಯ ಕಾಣಿಸಿಕೊಂಡಿದ್ದು ಈ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ನಿಧಿ ಸುಬ್ಬಯ್ಯ ತಮ್ಮ ಮದುವೆಯ ನಂತರ ಚಿತ್ರರಂಗದಿಂದ ದೂರವುಳಿದಿದ್ದರು. ಸ್ವಲ್ಪ ದಿನಗಳ ಬಳಿಕ ಪುನಃ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಇದೀಗ ಪ್ಯಾಂಟ್ ಲೆಸ್ ಪೋಟೊ ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇನ್ನೂ ನಟಿ ನಿಧಿ ಸುಬ್ಬಯ್ಯ ಸಾಮಾಜಿಕ ಜಾಲತಾಣದಲ್ಲಿ ಪ್ಯಾಂಟ್‌ಲೆಸ್ ಪೋಟೊ ಶೇರ್ ಮಾಡುವುದರ ಜೊತೆಗೆ Be your own kind of beautiful ಎಂದು ಬರೆದು ಶೇರ್ ಮಾಡಿದ್ದಾರೆ. ಇನ್ನೂ ಈ ಪೊಟೋ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೋಟೊಗೆ ವಿಧವಿಧದ ರೀತಿಯಲ್ಲಿ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಉದ್ದ ಚಡ್ಡಿ ಹಾಕೋಕೆ ಅಗೊದಿಲ್ವಾ? ಎಷ್ಟೋಂದು ಖರ್ಚು ಮಾಡಿತ್ತೀರಾ ಉದ್ದವಾದ ಚಡ್ಡಿ ಹಾಕೋಕೆ ಆಗಲ್ವಾ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು ಶರ್ಟ್ ಯಾಕೆ ಹಾಕಿದ್ದೀರಾ? ಅದನ್ನು ತೆಗೆದುಬಿಡಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ ಇದೇ ರೀತಿ ಡಿಫರೆಂಟ್ ಕಾಮೆಂಟ್ ಗಳ ಮೂಲಕ ನಿಧಿ ಸುಬ್ಬಯ್ಯರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

ನಟಿ ನಿಧಿ ಸುಬ್ಬಯ್ಯ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ ಹಾಡೊಂದರಲ್ಲಿ ನೃತ್ಯ ಮಾಡಿದ್ದರು. ನಂತರ ಸಿನಿಮಾರಂಗದಿಂದ ದೂರವುಳಿದ್ದರು. ಇದೀಗ ಪ್ರಸಾದ್ ಹಾಗೂ ಪವನ್ ನಿರ್ದೇಶನದ ಹಾರರ್ ಸಿನೆಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Trending

To Top