Film News

ಅಭಿಮಾನಿಗಳಲ್ಲಿ ಮೂರು ಬೇಡಿಕೆಯಿಟ್ಟ ಬ್ಯೂಟಿಫುಲ್ ನಟಿ

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ನಿಧಿ ಅಗರ್ವಾಲ್ ರವರ ಮೂರ್ತಿಯನ್ನು ಪ್ರತಿಷ್ಟಾಪಿಸಿ ಇತ್ತೀಚಿಗಷ್ಟೆ ಪೂಜೆಯನ್ನು ಸಹ ಮಾಡಿರುವ ಘಟನೆ ವೈರಲ್ ಆಗುತ್ತಿದೆ. ಇದೀಗ ನಿಧಿ ಅಗರ್ವಾಲ್ ತಮ್ಮ ಅಭಿಮಾನಿಗಳಲ್ಲಿ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ.

ಈ ಕುರಿತು ನಿಧಿ ಅಗರ್ವಾಲ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ತಮಗೆ ಗುಡಿ ಕಟ್ಟಿರುವ ಕುರಿತು ಸಂತಸಗೊಂಡಿದ್ದು, ಅದರ ಜೊತೆ ಮೂರು ಬೇಡಿಕೆಗಳನ್ನು ಕೋರಿದ್ದಾರೆ. ತನಗಾಗಿ ಗುಡಿ ಕಟ್ಟಿರುವ ಗುಡಿಯನ್ನು ಮನೆಯಲ್ಲಿದವರಿಗೆ ಕೊಡಬೇಕೆಂದು, ಅನಾಥರಿಗೆ ಹಸಿವು ನೀಗಿಸುವುದು, ವಿದ್ಯೆಯನ್ನು ನೀಡುವುದಕ್ಕಾಗಿ ಆ ಗುಡಿಯನ್ನು ಉಪಯೋಗ ಮಾಡಬೇಕೆಂದು ಕೋರಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ನಿಧಿಯವರ ಈ ದೊಡ್ಡ ಗುಣಕ್ಕೆ ಎಲ್ಲರಿಂದ ಪ್ರಶಂಸೆಗಳು ದೊರೆಯುತ್ತಿದೆ.

ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ನಟಿ ನಿಧಿ ಅಗರ್ವಾಲ್ 2 ತಮಿಳು ಸಿನೆಮಾಗಳಲ್ಲಿ ನಟಿಸಿದ್ದು, ಎರಡು ಸಿನೆಮಾಗಳಿಂದಲೇ ತಮಿಳು ಅಭಿಮಾನಿಗಳ ಮನ ಗೆದಿದ್ದಾರೆ. ತಮಿಳುನಾಡಿನ ಅಭಿಮಾನಿಗಳು ನಟಿ ನಿಧಿ ಅಗರ್ವಾಲ್ ರವರಿಗಾಗಿ ಗುಡಿಯನ್ನು ಕಟ್ಟಿದ್ದಾರೆ. ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೆ ನಿಧಿ ಅಗರ್ವಾಲ್ ಆ ಗುಡಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುವಂತೆ ಬೇಡಿಕೆಯಿಟ್ಟಿದ್ದಾರೆ.

Trending

To Top