News

(video)ಕನ್ನಡ ನ್ಯೂಸ್ ಚಾನೆಲ್ ನಿರೂಪಕನಿಗೆ ಬಾಯಿಗೆ ಬಂದಹಾಗೆ ಏಕವಚನದಲ್ಲಿ ಮಾತಾಡಿದ ಹುಚ್ಚ ವೆಂಕಟ್! ವಿಡಿಯೋ ನೋಡಿ

huccha

ಹುಚ್ಚ ವೆಂಕಟ್ ಯಾರಿಗೆ ಗೊತ್ತಿಲ್ಲ ಹೇಳಿ! ಸದಾ ಒಂದಲ್ಲ ಒಂದು ವಿಷ್ಯ ದಿಂದ ಸಕತ್ ಸುದ್ದಿ ಯಲ್ಲಿ ಇರುತ್ತಾರೆ ಹುಚ್ಚ ವೆಂಕಟ್ ಅವರು. ಇಲ್ಲಿಯ ತನಕ ಹುಚ್ಚ ವೆಂಕಟ್ ಅವರು ಸುಮಾರು 3 ಕನ್ನಡ ಚಿತ್ರ ಗಳಲ್ಲಿ ನಟಿಸಿದ್ದಾರೆ. ಈಗ ಬಂದಿರುವ ಸ್ಪೋಟಕ ವಿಷ್ಯ ಏನಪ್ಪಾ ಅಂದರೆ, ಹುಚ್ಚ ವೆಂಕಟ್ ಅವರು ಈಗ ರಾಜಕೀಯಕ್ಕೆ ಬರಲಿದ್ದಾರೆ. ಮುಂದಿನ MLA ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾ ಇದ್ದಾರೆ! BTV ವಾಹಿನಿಯಲ್ಲಿ ಹುಚ್ಚ ವೆಂಕಟ್ ಅವರ ರಾಜಕೀಯದ ಎಂಟ್ರಿ ಬಗ್ಗೆ ಅವರನ್ನು ಸಂದರ್ಶನವನ್ನು ಮಾಡಿದ್ದಾರೆ! ಈ ಸಂದರ್ಶನದಲ್ಲಿ ಹುಚ್ಚ ವೆಂಕಟ್ ಅವರು ತಮ್ಮ ರಾಜಕೀಯ ಎಂಟ್ರಿ ಬಗ್ಗೆ, ಬೇರೆ ಕೆಟ್ಟ ರಾಜಕಾರಣಿಗಳ ಬಗ್ಗೆ, ಬೇರೆ ನಟರ ಬಗ್ಗೆ ಮಾತಾಡಿದ್ದಾರೆ! ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಹುಚ್ಚ ವೆಂಕಟ್ ಅವರು ಬಹಳ ವರ್ಷ ಗಳಿಂದ ಕನ್ನಡ ಚಿತ್ರ ರಂಗ ದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 5 ಹೆಚ್ಚು ವರ್ಷಗಳ ಕಾಲ ಹುಚ್ಚ ವೆಂಕಟ್ ಅವರು ಅಸೋಸಿಯೇಟ್ ಡೈರೆಕ್ಟರ್ ಕೆಲಸ ಮಾಡಿ, ಅದಾದ ನಂತರ ಸಣ್ಣ ಸಣ್ಣ ಪಾತ್ರಗಳನ್ನೂ ಮಾಡಿಕೊಂಡು ಬಂದಿದ್ದಾರೆ. ಕೊನೆಗೆ ಸ್ವತಃ ಹುಚ್ಚ ವೆಂಕಟ್ ಅವರೇ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಾರೆ! ಆ ಚಿತ್ರದ ಟೈಟಲ್ ಹುಚ್ಚ ವೆಂಕಟ್! ಈ ಹುಚ್ಚ ವೆಂಕಟ್ ಚಿತ್ರ, ಚಿತ್ರಮಂದಿರ ಗಳಲ್ಲಿ ಓದದೇ ಇರುವ ಕಾರಣದಿಂದ ಗರಂ ಆಗಿ ಮಾಧ್ಯಮ ದವರ ಮೂಲಕ ಕನ್ನಡಿಗರಿಗೆ ಬಾಯಿಗೆ ಬಂದಹಾಗೆ ಬೈದಿದ್ದರು ಹುಚ್ಚ ವೆಂಕಟ್! ಇದರಿಂದಾಗಿ ಹುಚ್ಚ ವೆಂಕಟ್ ಸಕತ್ ಫೇಮಸ್ ಆದರು.
ಇದಾದ ಮೇಲೆ, ಹುಚ್ಚ ವೆಂಕಟ್ ಅವರಿಗೆ ಅವರದ್ದೇ ಆದ ಅಭಿಮಾನಿಗಳು ಕೂಡ ಇದ್ದಾರೆ. ಹುಚ್ಚ ವೆಂಕಟ್ ಹೇಳುವ ಪ್ರಕಾರ ಅವರಿಗೆ ಕರ್ನಾಟಕ ಅಲ್ಲದೆ, ಆಂಧ್ರ, ತಮಿಳು ನಾಡಿ, ನಾರ್ತ್ ಇಂಡಿಯಾ, ಬೇರೆ ಬೇರೆ ದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರಂತೆ. ತಮ್ಮ ಮೊದಲ ಚಿತ್ರವಾದ ಮೇಲೆ ಬಹಳ ಫೇಮಸ್ ಆಗಿದ್ದ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಬಂದರು. ಅಲ್ಲಿ ಕೂಡ ಎಲ್ಲರನ್ನು, ಹೊಡೆದು, ಬೈದು ಭಾರಿ ಕಾಂಟ್ರೊವರ್ಸಿ ಮಾಡಿಕೊಂಡಿದ್ದರು. ಇದರ ಮಧ್ಯೆ ಯಾವುದೊ ಒಂದು ಕೇಸ್ ಮೇಲೆ ಹುಚ್ಚ ವೆಂಕಟ್ ಅವರು ಅರೆಸ್ಟ್ ಕೂಡ ಆಗಿದ್ದರು.
ಸದ್ಯ ಹುಚ್ಚ ವೆಂಕಟ್ ಅವರು ತಮ್ಮ ಹೊಸ ಚಿತ್ರ ದುರಹಂಕಾರಿ ಹುಚ್ಚ ವೆಂಕಟ್ ಎಂಬ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಪ್ರೊಮೊ ಬಿಡುಗಡೆ ಆಗಿದೆ. ದುರಹಂಕಾರಿ ಹುಚ್ಚ ವೆಂಕಟ್ ಚಿತ್ರದಲ್ಲಿ ಹುಚ್ಚ ವೆಂಕಟ್ ಪೊಲೀಸ್ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದ ಪ್ರೊಮೊ ಸದ್ಯ ಯೌಟ್ಯೂಬ್ ನಲ್ಲಿ ಅದೆಷ್ಟೋ ಸಾವಿರ ಮಂದಿ ನೋಡಿದ್ದಾರೆ. ಇದಲ್ಲದೆ ಹುಚ್ಚ ವೆಂಕಟ್ ಅವರು ತಮ್ಮ ನಿರ್ಮಾಣದ ಮತ್ತೊಂದು ಚಿತ್ರ ಕೂಡ ಮಾಡುತ್ತಿದ್ದಾರೆ. ಅದರ ಹೆಸರು ಲೂಸ್ ಹುಚ್ಚ ವೆಂಕಟ್ ಅಂತ! ಇವರ ಚಿತ್ರಗಳ ಟೈಟಲ್ ಗಳು ಬಹಳ ವಿಚಿತ್ರ ವಾಗಿ ಇರುತ್ತದೆ! ಒಂದೇನಾಪ್ಪ ಅಂದರೆ, ಹುಚ್ಚ ವೆಂಕಟ್ ಅವರು ಪ್ರತೀ ವಾರ ಒಂದೊಂದು ವಿಷ್ಯದ ಮೇಲೆ ಮಾತಾಡಿ ಅದರ ವಿಡಿಯೋಗಳನ್ನು ಯೌಟ್ಯೂಬ್ ನಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡುತ್ತಾರೆ.
ಹುಚ್ಚ ವೆಂಕಟ್ ಯಾರಿಗೆ ಗೊತ್ತಿಲ್ಲ ಹೇಳಿ! 2 ವರ್ಷಗಳಿಂದ ಹಿಂದೆ ಹುಚ್ಚ ವೆಂಕಟ್ ಅವರ ಹುಚ್ಚ ವೆಂಕಟ್ ಎಂಬ ಚಿತ್ರ ಬಿಡುಗಡೆ ಆಗಿ ಥಿಯೇಟರ್ ಗೆ ಯಾರು ಬಾರದ ಕಾರಣ ಮಾಧ್ಯಮದವರ ಮುಂದೆ ಹುಚ್ಚ ವೆಂಕಟ್ ಸಕತ್ ಆಗಿ ಗುಡುಗಿದ್ದರು. ಇದಾದ ಮೇಲೆ ಹುಚ್ಚ ವೆಂಕಟ್ ಅವರು ಕರ್ನಾಟಕದಲ್ಲಿ ಸಕತ್ ಫೇಮಸ್ ಆದರು. ಇದಲ್ಲದೆ ಬಿಗ್ ಬಾಸ್ ನಲ್ಲಿ ಕೂಡ ಬಂದು ಹುಚ್ಚ ವೆಂಕಟ್ ಅವರು ಬಹಳ ಸದ್ದು ಮಾಡಿದ್ದರು. ಇದಾದ ನಂತರ ಪೊರ್ಕಿ ಹುಚ್ಚ ವೆಂಕಟ್ ಎಂಬ ಚಿತ್ರವನ್ನು ತಾವೇ ನಿರ್ದೇಶನ , ನಿರ್ಮಾಣ, ಸಂಗೀತ ಹಾಗು ನಟನೆ ಮಾಡಿದ್ದರು. ಈಗ ಮತ್ತೊಂದು ಚಿತ್ರವನ್ನು ಮಾಡಿದ್ದಾರೆ ಹುಚ್ಚ ವೆಂಕಟ್!

Trending

To Top