ಜಬರ್ದಸ್ತ್ ಶೋ ನಲ್ಲಿ ಹೊಸ ಆಂಕರ್, ಅನಸೂಯ ಸ್ಥಾನ ತುಂಬಿದ ಆಕೆ ಯಾರು?

ತೆಲುಗು ಕಿರುತೆರೆಯಲ್ಲಿ ಜಬರ್ದಸ್ತ್ ಎಂಬ ಕಾಮಿಡಿ ಎಂಟರ್‍ ಟ್ರೈನರ್‍ ಕಾರ್ಯಕ್ರಮ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದರಲ್ಲೂ ಈ ಶೋ ನಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತವೆ. ಮತ್ತೊಂದು ಮುಖ್ಯ ವಿಚಾರವೆಂದರೇ, ಈ ಶೋ ನಡೆಸಿಕೊಡುತ್ತಿದ್ದ ಆಂಕರ್‍. ಈ ಶೋ ನಡೆಸುತ್ತಿದ್ದ ಆಂಕರ್‍ ಅನಸೂಯ ಭಾರದ್ವಾಜ್ ಗೆ ಈ ಶೋ ಮೂಲಕವೇ ದೊಡ್ಡ ಮಟ್ಟದ ಖ್ಯಾತಿ ಗಳಿಸಿಕೊಂಡರು. ಆಕೆಯನ್ನು ಈ ಶೋ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳೂ ಸಹ ಕಾಯುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಜಬರ್ದಸ್ತ್ ಶೋ ಗೆ ಗುಡ್ ಬೈ ಹೇಳುತ್ತಿದ್ದಾರೆ ಎಂಬ ಸುದ್ದಿ ಆಕೆಯ ಅಭಿಮಾನಿಗಳನ್ನು ತೀವ್ರ ನಿರಾಸೆಗೆ ಗುರಿ ಮಾಡಿತ್ತು.

ಜಬರ್ದಸ್ಥ್ ಕಾಮಿಡಿ ಶೋ ನಲ್ಲಿ ಅನಸೂಯ ಹೋಸ್ಟ್ ಮಾಡುತ್ತಾ, ಗ್ಲಾಮರಸ್ ಟ್ರೀಟ್ ಸಹ ನೀಡುತ್ತಿರುತ್ತಾರೆ. ಶೋ ನಲ್ಲಿ ಆಕೆ ಧರಿಸಿದ ಶಾರ್ಟ್ ಡ್ರೆಸ್ ಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿರುತ್ತಾರೆ. ಶೋ ನಲ್ಲಿ ಕಾಮಿಡಿಯನ್ ಗಳು ಹಾಕುವ ಡೈಲಾಗ್ ಗಳಿಗೆ ಆಕೆ ನೀಡುವ ಸ್ಮೈಲ್ ಸಹ ಶೋ ನಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಅನೇಕ ವರ್ಷಗಳಿಂದ ಅನಸೂಯ ಜಬರ್ದಸ್ಥ್ ಶೋ ಅನ್ನು ಹೋಸ್ಟ್ ಮಾಡುತ್ತಾ ಸಕ್ಸಸ್ ಪುಲ್ ಆಂಕರ್‍ ಆಗಿದ್ದಾರೆ. ಇನ್ನೂ ನಟಿ ಅನಸೂಯ ಹಂಚಿಕೊಂಡ ಇನ್ಸ್ಟಾಗ್ರಾಂ ಪೋಸ್ಟ್ ನಂತೆ ನನ್ನ ಕೆರಿಯರ್‍ ನಲ್ಲಿ ನಾನು ತುಂಬಾ ದೊಡ್ಡ ನಿರ್ಣಯ ತೆಗೆದುಕೊಂಡಿದ್ದೇನೆ. ತುಂಬಾ ನೆನಪುಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಅದರಲ್ಲಿ ಹೆಚ್ಚಾಗು ಒಳ್ಳೆಯ ನೆನಪುಗಳು ಇದೆ. ಕೆಲವೊಂದು ಬ್ಯಾಡ್ ಮೆಮೋರಿಸ್ ಸಹ ಇದೆ. ಎಂದಿನಂತೆ ನಿಮ್ಮ ಬೆಂಬಲ, ಪ್ರೋತ್ಸಾಹ ನನಗೆ ಇರುತ್ತದೆ ಎಂದು ಭಾವಿಸುತ್ತಿದ್ದೇನೆ ಎಂದು ಪೋಸ್ಟ್ ಮಾಡುವ ಮೂಲಕ ಜಬರ್ದಸ್ತ್ ಶೋಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದರು.

ಜಬರ್ದಸ್ತ್ ಶೋ ಕಾಮಿಡಿ ಶೋ ತೆಲುಗಿನಲ್ಲಿ ಸಿಕ್ಕಾಪಟ್ಟೆ ಫೇಮಸ್, ಗುರುವಾರದ ದಿನ ಜಬರ್ದಸ್ತ್, ಶುಕ್ರವಾರ ಎಕ್ಸ್ಟ್ರಾ ಜಬರ್ದಸ್ತ್ ಆಗಿ ಎರಡು ಸಂಚಿಕೆಗಳ ಮೂಲಕ ಸುಮಾರು ವರ್ಷಗಳಿಂದ ಅಭಿಮಾನಿಗಳನ್ನು ಹಾಗೂ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಈ ಶೋ ಪ್ರೇರಣೆಯಿಂದಲೇ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮ ಸಹ ಶುರುವಾಯಿತು. ಇನ್ನೂ ಜಬರ್ದಸ್ತ್ ಶೋ ನಲ್ಲಿ ಹೆಚ್ಚು ಹೈಲೈಟ್ ಅಂದರೇ ಅದು ಆಂಕರ್‍ ಅನಸೂಯ. ಆಕೆ ಶೋಗೆ ಎಂಟ್ರಿ ಕೊಡುವಾಗ ಮಾಡುವ ಡ್ಯಾನ್ಸ್ ಹಾಗೂ ಆಕೆಯ ಸೌಂದರ್ಯ ನೋಡಲೆಂದೇ ಅನೇಕರು ಕಾಯುತ್ತಿರುತ್ತಾರೆ. ಇದೀಗ ಆಕೆ ಈ ಶೋನಿಂದ ಹೊರಬಂದಿದ್ದಾರೆ. ಇನ್ನೂ ಅನಸೂಯ ಕೊನೆಯ ಸಂಚಿಕೆಯಲ್ಲಿ ಕಣ್ಣಿರು ಹಾಕಿ ವಿದಾಯ ಹೇಳಿದ್ದರು. ಇನ್ನೂ ಈ ವಾರದಿಂದ ಹೊಸ ಆಂಕರ್‍ ಯಾರು ಎಂಬುದರ ಕುರಿತು ಜೋರಾಗಿಯೇ ಚರ್ಚೆಗಳು ಶುರುವಾಗಿತ್ತು.

ಇನ್ನೂ ಜಬರ್ದಸ್ತ್ ಗೆ ಹೊಸ ಆಂಕರ್‍ ಯಾರು ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ ಹೊಸ ಆಂಕರ್ ಆಗಮನವಾಗಿದೆ. ಆದರೆ ಆಕೆ ಯಾರು ಎಂಬುದು ಮಾತ್ರ ನಿಖರವಾಗಿ ಹೇಳಿಲ್ಲ. ಇನ್ನೂ ಮುಂದಿನ ಸಂಚಿಕೆ ಪ್ರೊಮೋ ಬಿಡುಗಡೆಯಾಗಿದ್ದು, ಈ ಪ್ರೊಮೋನಲ್ಲಿ ಆಂಕರ್‍ ಅನ್ನು ಪಲ್ಲಕಿಯಿಂದ ಹೊತ್ತು ತರುತ್ತಾರೆ. ಆದರೆ ಆಕೆಯ ಮುಖವನ್ನು ಮಾತ್ರ ತೋರಿಸಿಲ್ಲ. ಆದರೆ ಕೆಲವರು ಮಾತ್ರ ಆಕೆಯನ್ನು ಮಂಜುಶಾ ಎಂದು ಗೆಸ್ ಮಾಡುತ್ತಿದ್ದಾರೆ. ಎಲ್ಲದಕ್ಕೂ ಮುಂದಿನ ಸಂಚಿಕೆಯಿಂದ ತೆರೆ ಬೀಳಲಿದೆ.

Previous articleಚಿರು ಇಷ್ಟಪಟ್ಟ ಆ ಹುಡುಗಿ ಯಾರು? ಇಷ್ಟು ವರ್ಷಗಳ ಬಳಿಕ ರಿವೀಲ್ ಆಯ್ತು ಚಿರಂಜೀವಿ ಲವ್ ಫೈಯಲ್ಯೂರ್ ಸ್ಟೋರಿ…!
Next articleಪೂನಾ ಬಜ್ವಾಗೆ ನೀವು ನನ್ನ ಲವರ್ ನಂತಿದ್ದೀರಾ ಎಂದ್ರೆ, ಆಕೆ ಕೊಟ್ಟ ಉತ್ತರ ಏನು ಗೊತ್ತಾ?