Cinema

ನಟ ಸುಶಾಂತ್ ಆತ್ಮ#ತ್ಯೆ ನಂತರ, ಮತ್ತೊಬ್ಬ ಯುವನಟ ಅದೇ ಹಾದಿ ಹಿಡಿದಿದ್ದಾನೆ! ಯಾರು ಗೊತ್ತಾ

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮ#ತ್ಯೆ ಪ್ರಕರಣವನ್ನು ಇನ್ನು ಅಭಿಮಾನಿಗಳಿಂದ ಹಾಗೂ ಸಿನಿರಂಗದವರಿಂದ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದರ ಬೆನ್ನಲೇ ಈಗ ಮತ್ತೊಬ್ಬ ನಟ ಆ#ತ್ಯೆಗೆ ಶರ#ಣಾಗಿದ್ದಾರೆ. ಖ್ಯಾತ ಮರಾಠಿ ನಟ ಆಶುತೋಶ್ ಭಕ್ರೆ ತಮ್ಮ ನಿವಾಸದಲ್ಲಿ ಆತ್ಮ#ತ್ಯೆಗೆ ಶರಣಾಗಿದ್ದಾರೆ. ಇವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ನಟ ಆಶುತೋಶ್ ಅವರ ಪತ್ನಿ ಮಯೂರಿ ಅವರು ಸಹ ಮರಾಠಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು. ಒಂದೆರಡು ತಿಂಗಳ ಹಿಂದೆಯಷ್ಟೇ ನಟ ಆಶುತೋಶ್ ತಂದೆ ತಾಯಿಯ ಮನೆಗೆ ಬಂದಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿರುವ ಮರಾಠವಾಡದ ನಂದೇಡ್ ನಗರದಲ್ಲಿರುವ ತನ್ನ ತಂದೆಯ ಮನೆಯಲ್ಲಿ ಬುಧವಾರ ನೇಣು ಹಾಕಿಕೊಂಡು ಆತ್ಮ#ತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಮರಾಠಿ ಚಿತ್ರರಂಗಕ್ಕೆ ಬಹಳ ದೊಡ್ಡ ಶಾಕ್ ನೀಡಿದೆ. ಇವರ ಸಾ#ವಿಗೆ ಕಾರಣ ಏನೆಂದು ಇನ್ನು ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಸಿಕ್ಕಿದೆ.
ಆಶುತೋಶ್ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಕೆಲ ದಿನಗಳ ಹಿಂದೆ ಒಬ್ಬ ವ್ಯಕ್ತಿ ಯಾಕೆ ಆತ್ಮ#ತ್ಯೆ ಮಾಡಿಕೊಳ್ಳುತ್ತಾನೆ ಎಂಬುದರ ಬಗ್ಗೆ ಒಂದು ವಿಡಿಯೋ ಹಂಚಿಕೊಂಡಿದ್ದರು, ಈ ವಿಡಿಯೋ ನೋಡಿದರೆ, ಆಶುತೋಶ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿಯುತ್ತದೆ. ‘ಭಕರ್’, ‘ಇಚರ್ ಥಾರ್ಲ ಪಕ್ಕಾ’ ಸೇರಿದಂತೆ ಇನ್ನು ಕೆಲವು ಮರಾಠಿ ಸಿನಿಮಾಗಳಲ್ಲಿ ನಟ ಆಶುತೋಶ್ ನಟಿಸಿದ್ದಾರೆ. ಇವರ ಅಗಲಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಶಿವಾಜಿನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಧ್ಯಕ್ಕೆ ಆಕಸ್ಮಿಕ ಪ್ರಕರಣ ಎಂದು ಬರೆದುಕೊಂಡಿದ್ದು, ತನಿಖೆ ನಡೆಸಲಿದ್ದಾರೆ.

Trending

To Top