Film News

ದರ್ಶನ್-ರಾಕ್ ಲೈನ್ ಕಾಂಬಿನೇಷನ್ನಲ್ಲಿ ಬರಲಿದೆ ಹೊಸ ಪ್ರಾಜೆಕ್ಟ್!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ರಾಕ್‌ಲೈನ್ ವೆಂಕಟೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಾಂಬಿನೇಷನ್‌ನಲ್ಲಿ ಹೊಸ ಪ್ರಾಜೆಕ್ಟ್ ಬರಲಿದ್ದು, ಏಪ್ರಿಲ್ ಅಥವಾ ಮೇ ಮಾಹೆಯಲ್ಲಿ ಚಿತ್ರದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆ ಎನ್ನಲಾಗಿದೆ.

ಈ ಹಿಂದೆ ರಾಕ್‌ಲೈನ್ ವೆಂಕಟೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಾಂಬಿನೇಷನ್‌ನಲ್ಲಿ ರಾಜವೀರ ಮದಕರಿ ನಾಯಕ ಚಿತ್ರ ಘೋಷಣೆಯಾಗಿತ್ತು. ರಾಬರ್ಟ್ ಚಿತ್ರದ ಬಳಿಕ ಈ ಚಿತ್ರದ ಶೂಟಿಂಗ್ ಸಹ ಪ್ರಾರಂಭ ಮಾಡಿದ್ದರು. ನಂತರ ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾದರೂ ರಾಜ ವೀರ ಮದಕರಿ ನಾಯಕ ಚಿತ್ರೀಕರಣ ಪ್ರಾರಂಭವಾಗಿಲ್ಲ. ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು ಶೂಟಿಂಗ್‌ಗಾಗಿ ಲೊಕೇಷನ್ ಹುಡುಕುವ ಕೆಲಸದಲ್ಲಿದ್ದು, ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಇದೀಗ ದರ್ಶನ್ ರಾಕ್‌ಲೈನ್ ನಿರ್ಮಾಣದಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೆ ಒಪ್ಪಿಗೆ ನೀಡಿದ್ದು, ಚಿತ್ರಕ್ಕೆ ಗೋಲ್ಡನ್ ರಿಂಗ್ ಎಂಬ ಟೈಟಲ್ ಸಹ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಈ ಟೈಟಲ್ ಕೇಳಿದ ಅಭಿಮಾನಿಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಗೋಲ್ಡನ್ ರಿಂಗ್ ಎಂಬುದು ಈ ಚಿತ್ರದ ಕಥೆಗೆ ಪೂರಕವಾದ ಹೆಸರು ಎಂದು ರಾಕ್‌ಲೈನ್ ಹೇಳಿದ್ದು, ವಿಭಿನ್ನ ರೀತಿಯ ಸಿನೆಮಾ ಇದಾಗಲಿದೆ ಎನ್ನಲಾಗುತ್ತಿದೆ.

ಇನ್ನೂ ಈ ಗೋಲ್ಡನ್ ರಿಂಗ್ ಚಿತ್ರಕ್ಕೆ ರಾಕ್‌ಲೈನ್ ಬಂಡವಾಳ ಹಾಕುತ್ತಿದ್ದು, ಚಿತ್ರಕ್ಕೆ ನಿರ್ದೇಶಕರು ಹಾಗೂ ಇತರೆ ಕಲಾವಿದರು ಹಾಗೂ ಟೆಕ್ನಿಕಲ್ ಟೀಮ್ ಹುಡುಕಾಟದಲ್ಲಿ ರಾಕ್‌ಲೈನ್ ನಿರತರರಾಗಿದ್ದಾರೆ. ಇನ್ನೂ ಮೂಲಗಳ ಪ್ರಕಾರ ಶೀಘ್ರದಲ್ಲೇ ನಿರ್ದೇಶಕ ಹಾಗೂ ಕಲಾವಿದರ ವಿವರ ಬಹಿರಂಗವಾಗಲಿದೆ ಎಂದು ತಿಳಿದು ಬಂದಿದೆ.

Trending

To Top