ಸಲಾರ್ ಸಿನೆಮಾದ ಹೊಸ ಪೋಸ್ಟರ್ ಬಿಡುಗಡೆ… ಪ್ರಭಾಸ್ ಸಹ ವೈಲೆನ್ಸ್ ಆಗಲಿದ್ದಾರೆ….

ಬಹುನೀರಿಕ್ಷಿತ ಸಲಾರ್‍ ಸಿನೆಮಾ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತಿಚಿಗೆ ಒಬ್ಬ ಅಭಿಮಾನಿ ಸಹ ಸಲಾರ್‍ ಅಪ್ಡೇಟ್ ಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಪೋಸ್ಟ್ ಸಹ ಹಾಕಿದ್ದ. ಸಲಾರ್‍ ಸಿನೆಮಾ ಮೇಲೆ ಅಷ್ಟರ ಮಟ್ಟಿಗೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಅಭಿಮಾನಿಗಳು. ಇದೀಗ ಸಲಾರ್‍ ಸಿನೆಮಾ ಪೋಸ್ಟರ್‍ ಒಂದು ಬಿಡುಗಡೆಯಾಗಿದ್ದು, ಪೋಸ್ಟರ್‍ ನೋಡಿದರೇ, ಸಿನೆಮಾದಲ್ಲಿ ಪಕ್ಕಾ ವೈಲೆನ್ಸ್ ಇರಲಿದೆ ಎಂದು ಗೋತ್ತಾಗುತ್ತದೆ.

ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನೆಮಾದಂತೆ ಸಲಾರ್‍ ಸಿನೆಮಾದಲ್ಲೂ ಸಹ ವೈಲೆನ್ಸ್ ಮುಂದುವರೆದಿದೆ. ಅದರಲ್ಲೂ ಕೆಜಿಎಫ್-2 ಸಿನೆಮಾದಲ್ಲಿ ವೈಲೆನ್ಸ್ ವೈಲೆನ್ಸ್ ಎಂಬ ಡೈಲಾಗ್ ಸಖತ್ ವೈರಲ್ ಆಗಿತ್ತು. ಇದೀಗ ಸಲಾರ್‍ ಸಿನೆಮಾದಲ್ಲೂ ಸಹ ವೈಲೆನ್ಸ್ ಇರಲಿದೆ ಎಂಬುದ ಸಲಾರ್‍ ಸಿನೆಮಾದ ಹೊಸ ಪೋಸ್ಟರ್‍ ನಿಂದ ತಿಳಿಯಲಿದೆ. ಸಲಾರ್‍ ಸಿನೆಮಾದ ಕೆಲವೊಂದು ಪೊಟೊಗಳು ಈ ಹಿಂದೆ ಲೀಕ್ ಆಗಿತ್ತು. ಪೋಟೊಗಳ ಮೂಲಕ ಪ್ರಭಾಸ್ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ಬಿಡುಗಡೆಯಾದ ಪೋಸ್ಟರ್‍ ಇದಕ್ಕೆ ಮತಷ್ಟು ಪುಷ್ಟಿ ನೀಡುವಂತಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-2 ಸಿನೆಮಾದ ಕಾರಣದಿಂದಾಗಿ ಸಲಾರ್‍ ಸಿನೆಮಾದ ಶೂಟಿಂಗ್ ಕೆಲಸಗಳನ್ನು ನಿಲ್ಲಿಸಿದ್ದರು. ಇತ್ತೀಚಿಗಷ್ಟೆ ಸಿನೆಮಾದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿದ್ದವು. ಇನ್ನೂ ಚಿತ್ರತಂಡ ಸಲಾರ್‍ ಸಿನೆಮಾದ ಕುರಿತು ಮಾಹಿತಿ ನೀಡುವ ಸಲುವಾಗಿ ಹೊಸ ಟ್ವಿಟರ್‍ ಖಾತೆಯನ್ನು ಸಹ ತೆರೆದಿದೆ. ಈ ಖಾತೆಯ ಮೂಲಕ ಸಲಾರ್‍ ಸಿನೆಮಾದ ಮಾಹಿತಿ ಅಪ್ಡೇಟ್ ಗಳು ಅಭಿಮಾನಿಗಳಿಗೆ ದೊರೆಯಲಿದೆ. ಇದರ ಭಾಗವಾಗಿ ಸಲಾರ್‍ ನ ಹೊಸ ಪೋಸ್ಟರ್‍ ಬಿಡುಗಡೆ ಮಾಡಿದ್ದು, ಸಲಾರ್‍ ನಲ್ಲಿ ಪ್ರಭಾಸ್ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ಸಣ್ಣ ಸುಳಿವು ಕೊಟ್ಟಿದೆ ಚಿತ್ರತಂಡ.

ಇನ್ನೂ ಸಲಾರ್‍ ಸಿನೆಮಾದ ಹೊಸ ಪೋಸ್ಟರ್‍ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟರ್‍ ನಲ್ಲಿ “ದಿ ಮೋಸ್ಟ್ ವೈಲೆನ್ಸ್ ಮ್ಯಾನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆನ್ಸ್ ಎಂದು ಬರೆಯಲಾಗಿದೆ. ಇದನ್ನೆಲ್ಲಾ ಗಮನಿಸಿದರೇ ಸಲಾರ್‍ ಸಿನೆಮಾದಲ್ಲಿ ಪ್ರಭಾಸ್ ಅತ್ಯಂತ ಕ್ರೂರವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್-2 ಸಿನೆಮಾದಲ್ಲಿನ ರಾಖಿ ಭಾಯ್ ನಂತೆಯೇ ಪ್ರಭಾಸ್ ರವರ ಪಾತ್ರ ಸಹ ರಗಡ್ ಆಗಿರುತ್ತದೆ ಎಂದು ಹೇಳಲಾಗಿದೆ.  ಇನ್ನೂ ಪ್ರಭಾಸ್ ರಗಡ್ ಮಾಸ್ ಲುಕ್ ನಲ್ಲಿ ಸಖತ್ ವೈಲೆಂಟ್ ಆಗಿ ಕಾಣಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.  ಸದ್ಯ ಸಲಾರ್‍ ಚಿತ್ರತಂಡ ನೀಡಿರುವ ಈ ಅಪ್ಡೇಟ್ ಗೆ ಫ್ಯಾನ್ಸ್ ಪುಲ್ ಖುಷಿಯಾಗಿದ್ದಾರೆ.

Previous articleತಿರುಮಲದಲ್ಲಿ ಬಾಲಾಜಿ ದರ್ಶನ ಪಡೆದ ಬಾಲಿವುಡ್ ಸ್ಟಾರ್ ಕಂಗನಾ ರಾಣಾವತ್…
Next articleಹಾಟ್ ಡ್ರೆಸ್ ನೊಂದಿಗೆ ಹಾಟ್ ಲುಕ್ ಕೊಟ್ಟ ಬ್ಯೂಟಿ ದಿಶಾ ಪಟಾನಿ…..