ಬೆಂಗಳೂರು: ಇಡೀ ಚಲನಚಿತ್ರ ರಂಗದಲ್ಲಿಯೇ ಹವಾ ಕ್ರಿಯೇಟ್ ಮಾಡಿದಂತಹ ಕೆಜಿಎಫ್ ಸಿನೆಮಾ ನಿರ್ಮಾಪಕ ಹೊಸ ಸಿನೆಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಚಿತ್ರಕ್ಕೆ ಸಲಾರ್ ಎಂಬ ಶೀರ್ಷಿಕೆಯನ್ನು ಘೋಷಣೆ ಮಾಡಿದ್ದಾರೆ.
ಬಾಹುಬಲಿ ಚಿತ್ರದ ನಂತರ ಪ್ರಭಾಸ್ ನಟಿಸಲಿರುವ ಭಾರಿ ಸಿನೆಮಾಗಳಲ್ಲಿ ಇದೂ ಸಹ ಸೇರಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಸಲಾರ್ ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಮಾಡಲಾಗಿದೆ. ಇದರಲ್ಲಿ ಪ್ರಭಾಸ್ ಖಡಕ್ ಲುಕ್ ನೀಡಿದ್ದಾರೆ. ಸಾಹಸ ಪ್ರಧಾನ ಸಿನಿಮಾ ಎಂದು ಹೇಳಲಾಗುತ್ತಿರುವ ಸಲಾರ್ ಚಿತ್ರ ಫಸ್ಟ್ ಲುಕ್ನಲ್ಲೇ ಅಭಿಮಾನಿಗಳಲ್ಲಿ ಸಕತ್ ನಿರೀಕ್ಷೆ ಹುಟ್ಟಿಸಿದೆ.
ಇನ್ನೂ 2021 ರಲ್ಲಿ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, ಈಗಾಗಲೇ ಪ್ರಭಾಸ್ ಆದಿಪುರುಷ್ ಹಾಗೂ ರಾಧೆ ಶ್ಯಾಮ್ ಮೊದಲಾದ ಚಿತ್ರಗಳಲ್ಲಿ ಪ್ರಭಾಸ್ ಬ್ಯುಸಿ ಇದ್ದರೂ ಕೂಡ ಈ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಚಿತ್ರದ ಚಿತ್ರೀಕರಣ ಸಹ ಶೀಘ್ರವಾಗಿ ಮುಗಿಸುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಇನ್ನೂ ಈ ಚಿತ್ರದಲ್ಲಿ ನಟಿಸುವ ಪಾತ್ರಧಾರಿಗಳ ವಿವರ ಶೀಘ್ರದಲ್ಲಿಯೇ ಹೊರಬೀಳಲಿದೆ. ಇನ್ನೂ ಈ ಚಿತ್ರವನ್ನು ಅನೇಕ ಭಾಷೆಗಳಲ್ಲಿ ಮೂಡಿಬರಲಿದ್ದು, ಇನ್ನೂ ಈ ಚಿತ್ರದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಹೂಡಲಿದ್ದಾರೆ.
