Film News

ಆರ್.ಆರ್.ಆರ್ ಚಿತ್ರದ ಹೊಸ ಪೋಸ್ಟರ್ ಕುರಿತು ಅರಂಭವಾಯ್ತು ಹೊಸ ಚರ್ಚೆ!

ಹೈದರಾಬಾದ್: ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾದ ಆರ್.ಆರ್.ಆರ್ ಸಿನೆಮಾ ಇತ್ತೀಚಿಗಷ್ಟೆ ಬಿಡುಗಡೆ ಮಾಡಿದ ಪೋಸ್ಟರ್ ಕುರಿತಂತೆ ಹೊಸ ಚರ್ಚೆಗಳು ನಡೆಯುತ್ತಿದೆ.

ಅಂದಹಾಗೆ ಈ ಹೊಸ ಚರ್ಚೆ ಶುರುವಾಗಿರೋದು ಸಿನೆಮಾ ಪೋಸ್ಟರ್ ಕುರಿತು. ಈ ಪೋಸ್ಟರ್ ಅನ್ನು ಹಾಲಿವುಡ್ ಚಿತ್ರವೊಂದರ ಕಾಪಿಯಾಗಿದೆ ಎಂಬ ಚರ್ಚೆಗಳು ಶುರುವಾಗಿದೆ. ನಟ ರಾಮ್ ಚರಣ್ ತೇಜ್ ಕುದುರೆ ಮೇಲೆ ಸವಾರಿ ಹಾಗೂ ಜೂನಿಯರ್ ಎನ್.ಟಿ.ಆರ್ ಬೈಕ್ ಮೇಲೆ ಸವಾರಿ ಮಾಡುತ್ತಿರುವ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರು ಥ್ರಿಲ್ ಆಗಿದ್ದರು. ಇದೀಗ ಈ ಪೊಸ್ಟರ್ ಕುರಿತಂತೆ ಹೊಸ ಚರ್ಚೆ ಎದುರಾಗಿದೆ.

2007 ರಲ್ಲಿ ತೆರೆಕಂಡ ಹಾಲಿವುಡ್‌ನ ಗೋಸ್ಟ್ ರೈಡರ್ ಎಂಬ ಚಿತ್ರದಲ್ಲಿನ ಒಂದು ದೃಶ್ಯದಲ್ಲಿರುವಂತೆಯೇ ಆರ್.ಆರ್.ಆರ್ ಪೋಸ್ಟರ್ ಅನ್ನು ಸಿದ್ದಮಾಡಲಾಗಿದೆ. ಈ ಎರಡೂ ಚಿತ್ರಗಳ ಹೋಲಿಕೆ ಬಹುತೇಕವಾಗಿ ಒಂದೆಯಾಗಿದೆ ಎಂದು ಆರೋಪ ಬಲವಾಗಿ ಕೇಳಿಬರುತ್ತಿದೆ. ಇನ್ನೂ ಚಿತ್ರ ಅ.13, 2021 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.

ಇನ್ನೂ ಚಿತ್ರದ ಬಿಡುಗಡೆ ದಿನಾಂಕದ ಕುರಿತಂತೆ ನಿರ್ಮಾಪಕ ಬೋನಿ ಕಪೂರ್ ಗರಂ ಆಗಿದ್ದಾರಂತೆ. ಇದಕ್ಕೆ ಕಾರಣ ಆರ್.ಆರ್.ಆರ್ ಚಿತ್ರದಲ್ಲಿ ಬಾಲಿವುಡ್‌ನ ಅಜಯ್ ದೇವಗನ್ ಸಹ ನಟಿಸಿದ್ದು, ಇದೇ ಅಜಯ್ ದೇವಗನ್ ನಾಯಕನಾಗಿ ಬೋನಿ ಕಪೂರ್ ನಿರ್ಮಾಣದಲ್ಲಿ ಮೈದಾನ್ ಎಂಬ ಚಿತ್ರ ಸಹ ಅ.15 ರಂದು ಬಿಡುಗಡೆಯಾಗಲಿದೆ. ಇದರಿಂದ ನಿರ್ಮಾಪಕ ಬೋನಿ ಕಪೂರ್ ಗರಂ ಆಗಿದ್ದಾರೆ.

ನಾನೂ 6 ತಿಂಗಳ ಹಿಂದಯೇ ಮೈದಾನ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದೆ, ಇದೀಗ ರಾಜಮೌಳಿ ಸಹ ತಮ್ಮ ಆರ್.ಆರ್.ಆರ್ ಸಿನೆಮಾ ೨ ದಿನ ಮುಂಚಿತವಾಗಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಚಿತ್ರರಂಗದ ಎಲ್ಲರೂ ಒಗ್ಗಟ್ಟಿನಿಂದರಬೇಕು ಆದರೆ ರಾಜಮೌಳಿ ಈ ರೀತಿ ಕೆಲಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಬೋನಿ ಕಪೂರ್.

Trending

To Top