Kannada Cinema News

ಫ್ಯಾಂಟಮ್ ಚಿತ್ರತಂಡಕ್ಕೆ ಹೊಸ ಕೋ-ಪ್ರೊಡ್ಯೂಸರ್

ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ “ಫ್ಯಾಂಟಮ್”. ಪ್ರತಿದಿನ ಹಲವಾರು ವಿಶೇಷತೆಗಳನ್ನು ಹೊರತರುತ್ತಿದೆ ಈ ಸಿನಿಮಾ ತಂಡ.ಎರಡು ವಾರದ ಹಿಂದೆ ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕಳೆದ ವಾರ ಫ್ಯಾಂಟಮ್ ಸಿನಿಮಾದ ಮತ್ತೊಬ್ಬ ಮುಖ್ಯಪಾತ್ರಧಾರಿ ನಿರೂಪ್ ಭಂಡಾರಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ನಿರೂಪ್ ಅಭಿಮಾನಿಗಳಿಗೆ ಸಂತಸ ನೀಡಿತ್ತು.

ಇದೀಗ ಫ್ಯಾಂಟಮ್ ತಂಡಕ್ಕೆ ಹೊಸ ಮತ್ತೊಬ್ಬ ಹೊಸ ವ್ಯಕ್ತಿಯ ಪರಿಚಯವಾಗಿದೆ. ಫ್ಯಾಂಟಮ್ ತಂಡಕ್ಕೆ ಹೊಸ ಕೋ ಪ್ರೊಡ್ಯೂಸರ್ ಬಂದಿದ್ದಾರೆ. ಈಗಾಗಲೇ ‘ದಿ ಟೆರರಿಸ್ಟ್’ ಸಿನಿಮಾ ನಿರ್ಮಾಣ ಮಾಡಿದ್ದ ಅಲಂಕಾರ್ ಪಾಂಡಿಯನ್ ಫ್ಯಾಂಟಮ್ ಸಿನಿಮಾದ ಹೊಸ ಕೋ ಪ್ರೊಡ್ಯೂಸರ್. ಫ್ಯಾಂಟಮ್ ತಂಡಕ್ಕೆ ಹೊಸ ಸದಸ್ಯನನ್ನು ಸ್ವಾಗತಿಸಿ ಪೋಸ್ಟ್ ಮಾಡಿದ್ದಾರೆ ಕಿಚ್ಚ ಸುದೀಪ್.

ಕಳೆದ ಎರಡು ತಿಂಗಳಿಗೂ ಹೆಚ್ಚಿನ ಸಮಯದಿಂದ ಹೈದರಾಬಾದ್ ನಲ್ಲಿ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈಗಾಗಲೇ ಶೇ.70 ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಕೊನೆಯ ಹಂತದ ಚಿತ್ರೀಕರಣ ನಡೆಸುತ್ತಿದೆ ಚಿತ್ರತಂಡ. ಹಲವಾರು ವಿಶೇಷತೆಗಳಿಂದ ಕೂಡಿರುವ ಫ್ಯಾಂಟಮ್ ಸಿನಿಮಾ ಫ್ಯಾಂಟಸಿ ಕಥೆಯಾಗಿದ್ದು, ಸುದೀಪ್ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

Trending

To Top