ಶಂಕರ್ ನಿರ್ದೇಶನದ ಇಂಡಿಯನ್-2 ಸಿನೆಮಾದಿಂದ ಕಾಜಲ್ ಔಟ್ ಆದ್ರು, ಇನ್ ಆಗಿದ್ದು ಯಾರು?

ಸುಮಾರು 25 ವರ್ಷಗಳ ಹಿಂದೆ ತೆರೆ ಮೇಲೆ ಅಬ್ಬರಿಸಿ ಭಾರತಿಯುಡು ಎಂಬ ಸಿನೆಮಾದ ಸೀಕ್ವೆಲ್ ಅನ್ನು ತಯಾರು ಮಾಡಲು ಖ್ಯಾತ ನಿರ್ದೇಶಕ ಶಂಕರ್‍ ಮುಂದಾಗಿದ್ದರು. ಲೈಕಾ ಪ್ರೊಡಕ್ಷನ್, ನಿರ್ದೇಶಕ ಶಂಕರ್‍, ಖ್ಯಾತ ನಟ ಕಮಲ್ ಹಾಸನ್ ರವರುಗಳ ಕಾಂಬಿನೇಷನ್ ನಲ್ಲಿ ಸಿನೆಮಾ ಸಹ ಪ್ರಾರಂಭವಾಗಿತ್ತು. ಕಳೆದ 2019ರಲ್ಲಿ ಈ ಸಿನೆಮಾದ ಶೂಟಿಂಗ್ ಸಹ ಪ್ರಾರಂಭವಾಗಿದ್ದು, ಕೆಲವೊಂದು ಕಾರಣಗಳಿಂದ ಈ ಸಿನೆಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಈ ಸಿನೆಮಾ ಮತ್ತೆ ಸೆಟ್ಟೇರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದರ ಜೊತೆಗೆ ಈ ಸಿನೆಮಾದಿಂದ ಕಾಜಲ್ ಔಟ್ ಆಗಲಿದ್ದಾರೆ, ಹೊಸ ನಟಿ ಇನ್ ಆಗಲಿದ್ದಾರಂತೆ. ಈ ಸುದ್ದಿ ಸಹ ಜೋರಾಗಿಯೇ ಹರಿದಾಡುತ್ತಿದೆ.

ಖ್ಯಾತ ನಟ ಕಮಲ್ ಹಾಸನ್ ಹಾಗೂ ನಿರ್ದೇಶಕ ಶಂಕರ್‍ ಕಾಂಬಿನೇಷನ್ ನಲ್ಲಿ ಕಳೆದ 1996 ರಲ್ಲಿ ಇಂಡಿಯನ್ ಸಿನೆಮಾ ಬಿಡುಗಡೆಯಾಗಿತ್ತು. ಇನ್ನೂ ಈ ಸಿನೆಮಾ ಅಂದಿನ ಕಾಲದಲ್ಲಿ ಸಕ್ಸಸ್ ಕಂಡಿತ್ತು. ಬಳಿಕ ಈ ಸಿನೆಮಾದ ಸೀಕ್ವೆಲ್ ಕಳೆದ 2017 ರಲ್ಲಿ ಘೋಷಣೆ ಆಗಿತ್ತು. ಸಿನೆಮಾ ಶೂಟಿಂಗ್ ಕೆಲಸಗಳೂ ಸಹ 2019ರಲ್ಲಿ ಪ್ರಾರಂಭವಾಯಿತು. ಬಳಿಕ ಫೆಬ್ರವರಿ2020 ರಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಅವಘಡ ಸಂಭವಿಸಿ ಮೂರು ಜನ ಕಾರ್ಮಿಕರು ಜೀವ ಕಳೆದುಕೊಂಡರು. ಇದಾದ ಬಳಿಕ ಕೋವಿಡ್ ಕಾರಣಕ್ಕೆ ಸಿನೆಮಾ ಶೂಟಿಂಗ್ ಸ್ಥಗಿತಗೊಂಡಿತ್ತು. ಶೂಟಿಂಗ್ ಸ್ಥಗಿತಗೊಳ್ಳುವುದಕ್ಕೂ ಮುಂಚೆಯೇ ಶೇ.6೦ ರಷ್ಟು ಚಿತ್ರೀಕರಣ ಕಂಪ್ಲೀಟ್ ಸಹ ಆಗಿತ್ತು. ಆದರೆ ಈ ಸಿನೆಮಾ ಅನೇಕ ಕಾರಣಗಳಿಂದ ಪೋಸ್ಟ್ ಪೋನ್ ಆಗುತ್ತಲೇ ಬಂದಿದೆ. ಇನ್ನೂ ಈ ಸಿನೆಮಾ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಇಂಡಿಯನ್ -2 ಸಿನೆಮಾ ಕಮಲ್ ಹಾಸನ್ ಸಿನಿರಂಗದಲ್ಲೇ ಅತ್ಯಂತ ಬಿಗ್ ಬಜೆಟ್ ಸಿನೆಮಾ ಎನ್ನಲಾಗುತ್ತಿದೆ. ಇದೀಗ ಬಂದ ಕೆಲವೊಂದು ಮಾಹಿತಿಯಂತೆ ಇಂಡಿಯನ್-2 ಸಿನೆಮಾ ಶೂಟಿಂಗ್ ಗೆ ಸಿದ್ದವಾಗುತ್ತಿದೆಯಂತೆ. ಇನ್ನೂ ಈ ಸಿನೆಮಾವನ್ನು ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ನಿರ್ಮಾಣ ಮಾಡಲು ಸಹ ಪ್ಲಾನ್ ನಡೆಯುತ್ತಿದೆಯಂತೆ. ಈ ಸಿನೆಮಾದಲ್ಲಿ ಕಮಲ್ ಹಾಸನ್ ಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ಆಯ್ಕೆಯಾಗಿದ್ದರು. ಇದೀಗ ಈ ಸಿನೆಮಾದಿಂದ ಕಾಜಲ್ ಅಗರ್ವಾಲ್ ಬದಲಿಗೆ ಬೇರೆ ನಟಿಯರು ಬರಲಿದ್ದಾರಂತೆ. ಸದ್ಯ ಮಗುವಿನ ಹಾರೈಕೆಯಲ್ಲಿರುವ ಕಾಜಲ್ ಅಗರ್ವಾಲ್ ಬದಲಿಗೆ ಬೇರೆ ನಟಿಯರನ್ನು ಕರೆತರಲು ಚಿತ್ರತಂಡ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇಂಡಿಯನ್-2 ಸಿನೆಮಾದಲ್ಲಿ ಕಾಜಲ್ ಬದಲಿಗೆ ಬಾಲಿವುಡ್ ನ ಸ್ಟಾರ್‍ ನಟಿಯರಾದ ಕತ್ರೀನಾಕೈಫ್ ಹಾಗೂ ದೀಪಿಕಾ ಪಡುಕೋಣೆ ರವರುಗಳನ್ನು ಕರೆತರಲು ಮಾತುಕತೆ ನಡೆಸುತ್ತಿದೆಯಂತೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಎಲ್ಲೂ ತಿಳಿಸಿಲ್ಲ. ಸದ್ಯ ಕಾಲಿವುಡ್ ಖ್ಯಾತ ನಿರ್ದೇಶಕ ಮೆಗಾ ಕುಟುಂಬದ ರಾಮ್ ಚರಣ್ ತೇಜ್ ನಟಿಸುತ್ತಿರುವ RC15 ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈ ಸಿನೆಮಾ ತೆರೆಕಂಡ ಬಳಿಕ ಕಮಲ್ ಹಾಸನ್ ಅಭಿನಯಿಸುವ ಇಂಡಿಯನ್ 2 ಸಿನೆಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.  ಸದ್ಯ ಈ ಸುದ್ದಿಯಿಂದ ಕಾಜಲ್ ಅಭಿಮಾನಿಗಳೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Previous articleಶೋಭಿತಾ-ನಾಗಚೈತನ್ಯ ಡೇಟಿಂಗ್ ರೂಮರ್, ಇದರ ಬಗ್ಗೆ ಚೈತು ರಿಯಾಕ್ಷನ್ ಏನು ಗೊತ್ತಾ?
Next articleಆ ಮೂರು ನಟರೊಂದಿಗೆ ನಟಿಸುವುದಿಲ್ಲ, ಮುದುಕರೊಂದಿಗೆ ನಟಿಸಬೇಕಾ ಎಂದ ಜಾನ್ವಿ, ಆಕೆ ಹೇಳಿದ್ದು ಯಾರ ಬಗ್ಗೆ ಗೊತ್ತಾ?