Kannada Serials

ಗೆಳೆಯರ ಹಾಗು ಧಾರಾವಾಹಿ ನಟರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ‘ಲಕ್ಷ್ಮೀ ಬಾರಮ್ಮ’ ನಟಿ ನೇಹಾ ಗೌಡ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳ ವರ್ಷಗಳ ಕಾಲ ಪ್ರಸಾರಗೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ. ಈ ಧಾರಾವಾಹಿ ಮುಗಿದು ಹಲವಾರು ತಿಂಗಳುಗಳೇ ಕಳೆದಿದ್ದರೂ ಇಂದಿಗೂ ಸಹ ಜನ ಈ ಧಾರವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕಲಾವಿದರು ಸಹ ವೀಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ಅದರಲ್ಲೂ ಕಥಾನಾಯಕಿ ಶ್ರುತಿ ( ಗೊಂಬೆ ) ಪಾತ್ರ ನಿರ್ವಹಿಸಿದ ನಟಿ ನೇಹಾ ಗೌಡ ಅವರ ಜನಪ್ರಿಯತೆ ಇಂದಿಗೂ ಸಹ ಹಾಗೆಯೇ ಇದೆ. ಇವತ್ತಿಗೂ ಅವರ ಅಭಿಮಾನಿಗಳು ಅವರನ್ನು ಗೊಂಬೆ ಅಕ್ಕ ಎಂದೇ ಕರೆಯುತ್ತಾರೆ. ಕೆಲ ದಿನಗಳ ಹಿಂದೆ ಪತಿ ಹಾಗೂ ಸ್ನೇಹಿತರೊಡನೆ ಜಾಲಿ ರೈರ್ ಗೆ ಹೋಗಿ ಬಂದಿದ್ದರು ನೇಹಾ ಗೌಡ.

ಇಟ್ಟಿಚೆಗಷ್ಟೇ ನೇಹಾ ಗೌಡ ಅವರ ಹುಟ್ಟುಹಬ್ಬ ಇತ್ತು, ಪತಿ ಚಂದನ್, ಅಕ್ಕ ಸೋನು ಗೌಡ, ಸೋನು ಗೌಡ ಅವರ ಪತಿ, ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ ಗೌಡ, ನಟ ಚಂದನ್, ಸೀತಾ ವಲ್ಲಭ ಖ್ಯಾತಿಯ ನಟಿ ಸುಪ್ರೀತಾ ಸತ್ಯನಾರಾಯಣ, ನಟ ದಿಲೀಪ್ ಸೇರಿದಂತೆ ತಮ್ಮ ಆತ್ಮೀಯರೊಡನೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನೇಹಾ.

ನೇಹಾ ಗೌಡ ಬಹುಕಾಲದ ತಮ್ಮ ಬಾಲ್ಯದ ಗೆಳೆಯನನ್ನು ಮದುವೆಯಾದರು, ಅವರ ಪತಿ ಚಂದನ್ ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಹುಟ್ಟುಹಬ್ಬದಂದು ಬಾಲ್ಯದ ಗೆಳೆಯರು, ಆತ್ಮೀಯ ಮಿತ್ರರು, ಕಿರುತೆರೆ ಸ್ನೇಹಿತರು ಎಲ್ಲರ ಜೊತೆ ಸೇರಿ ಸಂತೋಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳ ವರ್ಷಗಳ ಕಾಲ ಪ್ರಸಾರಗೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ. ಈ ಧಾರಾವಾಹಿ ಮುಗಿದು ಹಲವಾರು ತಿಂಗಳುಗಳೇ ಕಳೆದಿದ್ದರೂ ಇಂದಿಗೂ ಸಹ ಜನ ಈ ಧಾರವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕಲಾವಿದರು ಸಹ ವೀಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

Trending

To Top