NBK107 ಸಿನೆಮಾದ ಹೊಸ ಪೋಸ್ಟರ್ ರಿಲೀಸ್…. ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್…

ಟಾಲಿವುಡ್ ನಲ್ಲಿ ಮಾಸ್ ಹಿರೋ ಸಾದ್ಯವಾಗದನ್ನು ಸಿನೆಮಾಗಳ ಮೂಲಕ ಸಾಧಿಸಿ ತೋರಿಸಿರುವ ನಟ ನಂದಮೂರಿ ಬಾಲಕೃಷ್ಣಾ ಅಖಂಡಾ ಸಿನೆಮಾದ ಸಕ್ಸಸ್ ಖುಷಿಯೊಂದಿಗೆ ಇದೀಗ NBK107 ಸಿನೆಮಾ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟರ್‍ ಸಹ ರಿಲೀಸ್ ಮಾಡಿದ್ದು ಸೋಷಿಯಲ್ ಮಿಡಿಯಾದಲ್ಲಿ ಹವಾ ಸೃಷ್ಟಿಸಿದೆ.

ಇಂದು ನಂದಮೂರಿ ತಾರಕ ರಾಮಾರಾವ್ ರವರ ಜನ್ಮದಿನದ ಅಂಗವಾಗಿ NBK107 ಸಿನೆಮಾದ ಹೊಸ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ. ಇನ್ನೂ ಈ ಸಿನೆಮಾದ ಮೇಲೆ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ ಬಾಲಕೃಷ್ಣ. ಸದ್ಯ ಈ ಸಿನೆಮಾದ ಟೈಟಲ್ ವಿಚಾರವಾಗಿ ಸಹ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಮೊದಲು ಅಣ್ಣಾಗಾರು ಎಂದು ಹೇಳಲಾಗುತ್ತಿತ್ತು. ಬಳಿಕ ಜೈ ಬಾಲಯ್ಯ ಎಂಬ ಟೈಟಲ್ ಸಹ ಚರ್ಚೆಗೆ ಬರುತ್ತಿದೆ. ಗೋಪಿಚಂದ್ ಮಲ್ಲಿನೇನಿ ನಿರ್ದೇಶಕತ್ವದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಪೋಸ್ಟರ್‍ ಮೂಲಕವೇ ದೊಡ್ಡ ಸದ್ದು ಮಾಡುತ್ತಿದೆ. ಇನ್ನೂ ಬಿಗ್ ಬಜೆಟ್ ನಲ್ಲಿ ಈ ಸಿನೆಮಾ ತಯರಾಗುತ್ತಿದ್ದು. ಮೈತ್ರಿ ಮೂವಿ ಮೇಕರ್ಸ್ ಈ ಸಿನೆಮಾಗೆ ಬಂಡವಾಳ ಹಾಕುತ್ತಿದೆ.

ಇನ್ನೂ ಟಾಲಿವುಡ್ ಮಾಸ್ ನಿರ್ದೇಶಕ ಎಂದೆ ಕರೆಯಲಾಗುವ ಗೋಪಿಚಂದ್ ಮಲ್ಲಿನೇನಿ ಈ ಭಾರಿ ಮಾಸ್ ಹಿರೋ ಬಾಲಕೃಷ್ಣ ರವರೊಂದಿಗೆ ಸಿನೆಮಾ ಮಾಡಲು ಯೋಜಿಸಿದ್ದು, ಮಾಸ್ ಕಥೆಯನ್ನು ಆಧರಿಸಿ ಸಿನೆಮಾ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ರವರಿಗೆ ಸ್ಯೂಟ್ ಆಗುವಂತಹ ಕಥೆಯನ್ನೇ ಗೋಪಿಚಂದ್ ಸಿದ್ದಮಾಡಿದ್ದಾರೆ. ಇನ್ನೂ ಇಂದು ಈ ಸಿನೆಮಾದ ಹೊಸ ಪೋಸ್ಟರ್‍ ಬಿಡುಗಡೆ ಮಾಡಿದ್ದು, ಪೋಸ್ಟರ್‍ ನಲ್ಲಿ ಬಾಲಕೃಷ್ಣ ಕೈಯಲ್ಲಿ ಹರಿತವಾದ ಕೊಡಲಿಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಕೊಡಲಿಯಿಂದ ರಕ್ತ ಸುರಿಯುತ್ತಿದ್ದು,  ರಗಡ್ ಮಾಸ್ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹಂಟ್ ಬಿಗಿನ್ಸ್ ಎಂಬ ಶೀರ್ಷಿಕೆಯನ್ನು ಸಹ ಪೋಸ್ಟರ್‍ ನಲ್ಲಿ ಬರೆದಿದ್ದಾರೆ. ಇದೀಗ ಈ ಪೋಸ್ಟರ್‍ ಎಲ್ಲೆಡೆ ವೈರಲ್ ಆಗುತ್ತಿದೆ.

NBK107 ಸಿನೆಮಾದ ಮೇಲೆ ಬಾಲಯ್ಯ ಅಭಿಮಾನಿಗಳು ದೊಡ್ಡದಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಬಾಲಯ್ಯನಿಗೆ ಜೋಡಿಯಾಗಿ ಸೌತ್ ಇಂಡಿಯಾ ಸ್ಟಾರ್‍ ನಟಿ ಶ್ರುತಿ ಹಾಸನ್ ನಟಿಸಲಿದ್ದಾರೆ. ಕಳನಾಯಕನ ಪಾತ್ರದಲ್ಲಿ ಸ್ಯಾಂಡಲ್ ವುಡ್ ನ ದುನಿಯಾ ವಿಜಯ್ ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದುನಿಯಾ ವಿಜಯ್ ಮೊದಲ ಬಾರಿಗೆ ಟಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಕಾಲಿವುಡ್ ಸ್ಟಾರ್‍ ವರಲಕ್ಷ್ಮೀ ಶರತ್ ಕುಮಾರ್‍ ಸಹ ಕಾಣಿಸಿಕೊಳ್ಳಲಿದ್ದಾರೆ.

Previous articleಭಾಯ್ ಪ್ರೆಂಡ್ ನಿಂದ ಮತ್ತೊಂದು ದುಬಾರಿ ಗಿಫ್ಟ್ ಪಡೆದುಕೊಂಡ ನಟಿ ರಾಖಿ ಸಾವಂತ್….
Next articleಕಡಲ ತೀರದಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಸೋನಾರಿಕಾ…!