ಟಾಲಿವುಡ್ ಸ್ಟಾರ್ ಗಳ ಬಗ್ಗೆ ನಯನತಾರಾ ಫನ್ನಿ ಕಾಮೆಂಟ್ಸ್, ಪ್ರಭಾಸ್, ಎನ್.ಟಿ.ಆರ್, ರವಿತೇಜ ಬಗ್ಗೆ ಫನ್ನಿ ಕಾಮೆಂಟ್…!

ಸೌತ್ ಸಿನಿರಂಗದಲ್ಲಿ ಮದುವೆಯಾದರೂ ಸಹ ಬಿಗ್ ಬಜೆಟ್ ಸಿನೆಮಾಗಳು, ಲೇಡಿ ಓರಿಯೆಂಟೆಂಡ್ ಸಿನೆಮಾಗಳ ಮೂಲಕ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಟಾಪ್ ನಲ್ಲಿರುತ್ತಾರೆ. ಸೀನಿಯರ್‍ ನಟಿಯಾಗಿ ಸೌತ್ ಸಿನಿರಸಿಕರಲ್ಲಿ ಅಳಿಸಲಾಗದಂತಹ ಮುದ್ರೆಯನ್ನು ಹಾಕಿದ್ದಾರೆ. ತೆಲುಗು ಸೇರಿದಂತೆ ತಮಿಳು, ಮಲಯಾಳಂ, ಕನ್ನಡ ಸಿನೆಮಾಗಳಲ್ಲಿ ನಟಿಸಿದ  ಈಕೆ ಇದೀಗ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಆಕೆ ಕನೆಕ್ಟ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾ ಪ್ರಮೋಷನ್ ಸಂದರ್ಶನವೊಂದರಲ್ಲಿ ಆಕೆ ತೆಲುಗು ಸ್ಟಾರ್‍ ನಟರ ಬಗ್ಗೆ ಫನ್ನಿ ಕಾಮೆಂಟ್ಸ್ ಮಾಡಿದ್ದು, ಅದು ವೈರಲ್ ಆಗುತ್ತಿವೆ.

ನಟಿ ನಯನತಾರಾ ತೆಲುಗು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೂ ತುಂಬಾ ಹತ್ತಿರವಾಗಿದ್ದಾರೆ. ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಸಾಗುತ್ತಿದ್ದಾರೆ. ಕಳೆದ ಜೂನ್ ಮಾಹೆಯಲ್ಲಿ ಆಕೆ ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ ರನ್ನು ಪ್ರೀತಿಸಿ ಮದುವೆಯಾದರು. ಕೆಲವು ದಿನಗಳ ಹಿಂದೆಯಷ್ಟೆ ಈ ದಂಪಂತಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಸಹ ಪಡೆದುಕೊಂಡರು. ಇನ್ನೂ ಮುದುವೆಯಾದ ಬಳಿಕವೂ ಸಮಂತಾ ಬಿಗ್ ಬಜೆಟ್ ಸಿನೆಮಾಗಳಲ್ಲೂ ನಟಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆಕೆ ಕೊನೆಯದಾಗಿ ಗಾಡ್ ಫಾಧರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಆಕೆ ಕನೆಕ್ಟ್ ಎಂಬ ಹಾರರ್‍ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನೆಮಾ ಡಿ.22 ರಂದು ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಇನ್ನೂ ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿ ನಡೆಯುತ್ತಿದ್ದು, ಇದರ ಅಂಗವಾಗಿ ತೆಲುಗು ಪ್ರೇಕ್ಷಕರಿಗಾಗಿ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಆಕೆ ತೆಲುಗು ಸ್ಟಾರ್‍ ನಟರಾದ ಪ್ರಭಾಸ್, ಎನ್.ಟಿ.ಆರ್‍, ರವಿತೇಜ ಬಗ್ಗೆ ಫನ್ನಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ನಯನತಾರಾ ಪ್ರಭಾಸ್ ಜೊತೆಗೆ ಯೋಗಿ ಸಿನೆಮಾದಲ್ಲಿ ನಟಿಸಿದ್ದರು. ಪ್ರಭಾಸ್ ರವರು ತುಂಬಾ ತುಂಟಾಟ ಆಡುತ್ತಿದ್ದರು, ಆತನ ತುಂಟಾಟ ತಾಳುವುದು ತುಂಬಾ ಕಷ್ಟಕರವಾಗಿತ್ತು. ಪ್ರಭಾಸ್ ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿರುವುದು ತುಂಬಾ ಸಂತೋಷದ ವಿಚಾರ ಎಂದರು. ಇನ್ನೂ ನಯನತಾರಾ ಅಭಿನಯದ ಕನೆಕ್ಟ್ ಸಿನೆಮಾದ ಟ್ರೈಲರ್‍ ಅನ್ನು ಪ್ರಭಾಸ್ ರವರೇ ರಿಲೀಸ್ ಮಾಡಿದ್ದರು. ಅಷ್ಟೇಅಲ್ಲದೇ ಜೂನಿಯರ್‍ ಎನ್.ಟಿ.ಆರ್‍ ಬಗ್ಗೆ ಸಹ ಮಾತನಾಡಿದ್ದು, ಅವರು ಶೂಟಿಂಗ್ ಸೆಟ್ಸ್ ನಲ್ಲಿ ತುಂಬಾ ಜಾಲಿಯಾಗಿರುತ್ತಾರೆ. ಅವರು ಡ್ಯಾನ್ಸ್ ಅಂದರೇ ನನಗೆ ತುಂಭಾ ಇಷ್ಟ. ರಿಹಾರ್ಸಲ್ ಇಲ್ಲದೇ ಶೂಟಿಂಗ್ ಗೆ ಹೋಗುವ ನಟ ಜೂನಿಯರ್‍ ಎನ್.ಟಿ.ಆರ್‍ ಒಬ್ಬರೇ, ಅವರು ಸೂಪರ್‍ ಟ್ಯಾಲೆಂಟ್ ಹಿರೋ ಎಂದು ಹೊಗಳಿದ್ದಾರೆ.

ರವಿತೇಜ ಬಗ್ಗೆ ಸಹ ಮಾತನಾಡಿದ್ದು, ರವಿ ಜೊತೆಗೆ ನಾನು ಸದಾ ಹಿಂದಿಯಲ್ಲೇ ಮಾತನಾಡುತ್ತೇನೆ ಎಂದಿದ್ದಾರೆ. ಬಾಲಕೃಷ್ಣ ರವರ ಜೊತೆಗೆ ಕೆಲಸ ಮಾಡಿದ್ದನ್ನು ಎಂದಿಗೂ ನಾನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಸದ್ಯ ನಯನತಾರಾ ರವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗಿದೆ. ಇನ್ನೂ ಕನೆಕ್ಟ್ ಸಿನೆಮಾದ ಪೋಸ್ಟರ್‍, ಟೀಜರ್‍, ಟ್ರೈಲರ್‍ ಈಗಾಗಲೇ ಬಿಡುಗಡೆಯಾಗಿದ್ದು ಸಿನೆಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.

Previous articleಸೋಷಿಯಲ್ ಮಿಡಿಯಾ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಜಾನ್ವಿ, ಅವರು ನೋಡಿದ್ರೆ ಸಾಕು ನನ್ನ ಸಿನೆಮಾ ಹಿಟ್ ಆಗುತ್ತಿತ್ತು ಎಂದ್ರು…!
Next articleಚಳಿಗಾಲದಲ್ಲೂ ಬೆವರು ತರಿಸುವಂತಹ ಹಾಟ್ ಟ್ರೀಟ್ ಕೊಟ್ಟ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್…!