ಕಳೆದ ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ಮದುವೆಯಾದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇತ್ತೀಚಿಗಷ್ಟೆ ಹನಿಮೂನ್ ಮುಗಿಸಿ ವಾಪಸ್ಸಾಗಿದ್ದರು. ಸುಮಾರು ವರ್ಷಗಳ ಕಾಲ ಪ್ರೇಮರ ಪಯಣ ಸಾಗಿಸಿ ಮದುವೆಯಾದ ಈ ಜೋಡಿ ದೇಶದಲ್ಲಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಬಳಿಕ ಹನಿಮೂನ್ ಗೆ ತೆರಳಿದ್ದರು. ಇದೀಗ ಪ್ರಶಾಂತತೆಯನ್ನು ಕೋರಿ ಚೆನೈಗೆ ವಾಪಸ್ಸಾಗಿದ್ದಾರೆ. ಇನ್ನೂ ಜೋಡಿಯ ಹೊಸ ಪೊಟೋ ಇದೀಗ ಟ್ರೆಂಡ್ ಸೃಷ್ಟಿ ಮಾಡಿದೆ.
ಜೂನ್ 9 ರಂದು ನಯನತಾರಾ ಹಾಗೂ ವಿಘ್ನೇಶ್ ಮದುವೆ ಮಹಾಬಲಿಪುರಂ ನ ಹೊಟೆಲ್ ಒಂದರಲ್ಲಿ ನಡೆದಿತ್ತು. ಈ ಮದುವೆಗೆ ಸೂಪರ್ ಸ್ಟಾರ್ ರಜನೀಕಾಂತ್, ಬಾಲಿವುಡ್ ಶಾರುಖ್ ಖಾನ್, ದಳಪತಿ ವಿಜಯ್ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆದಿತ್ತು. ಜೊತೆಗೆ ಅವರ ಧರಿಸಿದ ಬಟ್ಟೆಗಳು, ಆಭರಣಗಳೂ ಸಹ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಮದುವೆಯಾದ ಬಳಿಕ ಮನೆಗೂ ಹೋಗದೇ ತಿರುಮಲಕ್ಕೆ ತೆರಳಿದ್ದರು. ಅಲ್ಲಿ ಒಂದು ವಿವಾದ ಸಹ ಸೃಷ್ಟಿಯಾಗಿತ್ತು. ಬಳಿಕ ಅದಕ್ಕೆ ವಿಘ್ನೇಶ್ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದರು. ಇದೆಲ್ಲ ಆದ ಬಳಿಕ ಈ ಜೋಡಿ ಹನಿಮೂನ್ ಗೆ ಥೈಲ್ಯಾಂಡ್ ಗೆ ಹಾರಿದ್ದರು. ಇದೀಗ ಹನಿಮೂನ್ ನಿಂದ ಚೆನೈಗೆ ವಾಪಸ್ಸಾಗಿದ್ದಾರೆ. ಇನ್ನೂ ಹನಿಮೂನ್ ನಲ್ಲಿನ ಕೆಲವೊಂದು ಸ್ವೀಟ್ ಮೆಮೋರಿಸ್ ಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಹಾದಿಯಲ್ಲಿ ಈ ಜೋಡಿ ಇತ್ತಿಚಿಗೆ ಒಂದು ಪೊಟೋ ಹಂಚಿಕೊಂಡಿದ್ದಾರೆ. ಅದು ಸೋಷಿಯಲ್ ಮಿಡಿಯಾದಲ್ಲಿ ಸಖಯ್ ವೈರಲ್ ಆಗುತ್ತಿದೆ.
ಇನ್ನೂ ಈ ಜೋಡಿ ಹಂಚಿಕೊಂಡ ಪೊಟೋ ಒಂದು ತುಂಬಾನೆ ಮುದ್ದಾಗಿದೆ. ಈ ಪೊಟೋದಲ್ಲಿ ನಯನತಾರಾ ಪ್ರೀತಿಯಿಂದ ತನ್ನ ಬಾಹುಬಂಧನದಲ್ಲಿ ವಿಘ್ನೇಶ್ ರನ್ನು ಬಂಧಿಸಿದ್ದಾರೆ. ವಿಘ್ನೇಶ್ ನನ್ನು ಗಟ್ಟಿಯಗಿ ತಬ್ಬಿಕೊಂಡು ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಈ ಹಿಂದೆ ಸಹ ಇಂತಹ ಅನೇಕ ಪೊಟೋಗಳನ್ನು ಈ ಜೋಡಿ ಹಂಚಿಕೊಂಡಿದ್ದರೂ ಸಹ. ಮದುವೆಯಾದ ಬಳಿಕ ಹಂಚಿಕೊಂಡ ಈ ಪೊಟೋ ತುಂಬಾನೆ ಮುದ್ದಾಗಿದೆ ಎನ್ನಲಾಗುತ್ತಿದೆ. ಮದುವೆಗೆ ಮುಂಚೆ ತಬ್ಬಿಕೊಂಡರೇ ಅನೇಕ ಗಾಸಿಫ್ ಗಳು ಹರಿದಾಡುತ್ತವೆ. ಆದರೆ ಮದುವೆಯಾದ ಬಳಿಕ ಇಂತಹುವುಗಳಿಗೆ ಜಾಗವೇ ಇರುವುದಿಲ್ಲ. ಸದ್ಯ ಈ ಜೋಡಿಯ ಈ ಪೊಟೋ ಕಡಿಮೆ ಸಮಯದಲ್ಲೇ ದೊಡ್ಡದಾಗಿಯೇ ವೈರಲ್ ಆಗುತ್ತಿದೆ.
ಇನ್ನೂ ಈ ಪೊಟೋ ಕಂಡ ಕೂಡಲೇ ಅವರ ಅಭಿಮಾನಿಗಳು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ನಯನತಾರಾ ರವರಿಗೆ ದೇಶದಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಅದರಲ್ಲೂ ತಮಿಳುನಾಡಿನಲ್ಲಂತೂ ಆಕೆಯ ಹೆಸರಿನಲ್ಲಿ ದೇವಸ್ಥಾನಗಳನ್ನು ಸಹ ಕಟ್ಟಿಸಿದ್ದಾರೆ. ಇನ್ನೂ ಸಂತೋಷವಾಗಿ ನಯನ್ ವಿಘ್ನೇಶ್ ಇರುವುದನ್ನು ಕಂಡು ಅವರ ಅಭಿಮಾನಿಗಳೂ ಸಹ ತುಂಬಾನೆ ಖುಷಿ ಪಟ್ಟಿದ್ದಾರೆ. ಇನ್ನೂ ನಯನತಾರಾ ಬಾಲಿವುಡ್ ಸೇರಿದಂತೆ ದಕ್ಷಿಣದ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.