Film News

ನಯನತಾರಾ ಮತ್ತು ವಿಘ್ನೇಶ್ ಶಿವನ್ ಜಂಟಿಯಾಗಿ ಕ್ರಿಸ್ ಮಸ್ ಆಚರಣೆ

ಚೆನೈ: ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲಾಗುವ ನಯನತಾರ ಮತ್ತು ವಿಘ್ನೇಶ್ ಶಿವನ್ ಜಂಟಿಯಾಗಿ ಕ್ರಿಸ್ ಮಸ್ ಹಬ್ಬವನ್ನು ಆಚರಣೆ ಮಾಡಿದ್ದು, ಅವರಿಬ್ಬರ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲವು ತೆಲುಗು-ತಮಿಳು ನಟ ನಟಿಯರು ಕ್ರಿಸ್ ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಈ ಸಾಲಿಗೆ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರು ಸಹ ಕ್ರಿಸ್ ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದು, ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಂದು ಪೊಟೋದಲ್ಲಿ ನಯನತಾರ ರವರ ಕೈಯನ್ನು ಹಿಡಿದು ಪ್ರೀತಿಯಿಂದ ವಿಘ್ನೇಶ್ ನೋಡುತ್ತಿರುವುದು ಮತ್ತೊಂದರಲ್ಲಿ ದೂರದಲ್ಲಿ ನಿಂತು ಒಬ್ಬರನ್ನೊಬ್ಬರು ನೋಡುತ್ತಿರುವ ಪೊಟೋಗಳು. ಇವನ್ನು ವಿಘ್ನೇಶ್ ತಮ್ಮ ಇನ್ಸ್ಟಾಗಾಂ ನಲ್ಲಿ ಹಂಚಿಕೊಂಡಿದ್ದಾರೆ.

ನಯನತಾರ ರವರು ರಜನಿಕಾಂತ್ ರವರ ಅಣ್ಣಾತೆ ಸಿನೆಮಾದಲ್ಲಿ ನಟಿಸಲು ಹೈದರಾಬಾದ್ ಗೆ ಬಂದಿದ್ದರು. ಇನ್ನೂ ಕೆಲವು ದಿನಗಳ ಹಿಂದೆ ಅಣ್ಣಾತೆ ಸೆಟ್ ನಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೂಟಿಂಗ್ ಸಹ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ವಿಘ್ನೇಶ್ ಸಹ ವಿಜಯ ಸೇತುಪತಿ, ನಯನತಾರಾ, ಸಮಂತಾ ನಟಿಸುತ್ತಿರುವ ಹೊಸ ಸಿನೆಮಾ ಸಹ ಹೈದರಾಬಾದ್ ನಲ್ಲಿಯೇ ಶೂಟಿಂಗ್ ನಡೆಯುತ್ತಿದೆ. ಇನ್ನೂ ಶೂಟಿಂಗ್ ನಿಂತ ಕಾರಣ ಹೈದರಾಬಾದ್ ನಿಂದ ಚೆನೈಗೆ ಹಿಂದುರಿಗಿದ ನಟಿ ನಯನತಾರ ಹಾಗೂ ವಿಘ್ನೇಶ್ ಇಬ್ಬರೂ ಅದ್ದೂರಿಯಾಗಿ ಕ್ರಿಸ್ ಮಸ್ ಹಬ್ಬವನ್ನು ಆಚರಣೆ ಮಾಡಿದ್ದಾರೆ.

Trending

To Top