Saturday, May 21, 2022
HomeFilm Newsನಯನತಾರಾ ಧೋನಿ ಸಿನೆಮಾ ಎಲ್ಲಾ ಸುಳ್ಳಂತೆ…. ಸುಳ್ಳು ವದಂತಿ ಬೇಡ ಎಂದ ಧೋನಿ ಎಂಟರ್ ಟೈನ್...

ನಯನತಾರಾ ಧೋನಿ ಸಿನೆಮಾ ಎಲ್ಲಾ ಸುಳ್ಳಂತೆ…. ಸುಳ್ಳು ವದಂತಿ ಬೇಡ ಎಂದ ಧೋನಿ ಎಂಟರ್ ಟೈನ್ ಮೆಂಟ್ ಟೀಂ…

ಇತ್ತೀಚಿಗಷ್ಟೆ ಕಾಲಿವುಡ್ ಸೂಪರ್‍ ಸ್ಟಾರ್‍ ನಯನತಾರಾ ಧೋನಿ ನಿರ್ಮಾಣದಲ್ಲಿ ಸಿನೆಮಾ ಒಂದು ಮಾಡಲಿದ್ದಾರೆ ಎಂಬ ಸುದ್ದಿ ಎಕ್ಸಪ್ರೆಸ್ ರೈಲ್ ಸ್ಪೀಡಿನಂತೆ ಹರಿದಾಡುತ್ತಿತ್ತು. ಕ್ರಿಕೆಟ್ ಗೆ ವಿಧಾಯ ಹೇಳಿದ ಬಳಿಕ ಧೋನಿ ಸಿನೆಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ನಯನತಾರ ರವರೊಂದಿಗೆ ಸಿನೆಮಾ ಮಾಡಲಿದ್ದಾರೆ ಎಂಬೆಲ್ಲಾ ಸುದ್ದಿಗಳು ಗಾಳಿಗಿಂತ ವೇಗವಾಗಿ ಹರಿದಾಡಿತ್ತು. ಆದರೆ ಇದೀಗ ಈ ಸುದ್ದಿ ಫೇಕ್ ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ರಂಗ ದಿಗ್ಗಜ ಧೋನಿ ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಉದ್ಯಮಿಯಾಗಿ ಬಂಡವಾಳ ಹಾಕುತ್ತಿದ್ದಾರೆ. ರೆಸ್ಟೋರೆಂಟ್, ಆರ್ಗಾನಿಕ ಪೌಲ್ಟ್ರಿ, ಜೊತೆಗೆ ಕಡಕ್ ನಾರ್ಥ ಕೋಳಿ ಸಾಗಾಣಿಕೆ ಇಂಡಿಯಾದಲ್ಲಿ ಇರುವ ಬಿಸಿನೆಸ್ ಕ್ರೇಜ್ ಕಾರಣದಿಂದಾಗಿ ಈ ವ್ಯಾಪಾರವನ್ನು ಸಹ ಮಾಡಲು ಮುಂದಾಗುತ್ತಿದ್ದಾರೆ. ಇದರ ಜೊತೆಗೆ ಸಿನೆಮಾ ರಂಗದಲ್ಲೂ ಬಂಡವಾಳ ಹಾಕಲು ಮುಂದಾಗಿದ್ದಾರೆ. ಬಾಲಿವುಡ್ ನಲ್ಲಿ ಸ್ವಂತ ನಿರ್ಮಾಣ ಸಂಸ್ಥೆಯನ್ನು ಸ್ಥಾಪನೆ ಮಾಡಿ ಸಿನೆಮಾ ಮಾಡಲು ಸಿದ್ದವಾಗುತ್ತಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟಡ್ ಎಂಬ ಬ್ಯಾನರ್‍ ಸಹ ಸ್ಥಾಪನೆ ಮಾಡಿದರು.

ಇನ್ನೂ ಈ ಬ್ಯಾನರ್‍ ನಡಿಯಲ್ಲೇ ಕಾಲಿವುಡ್ ನಲ್ಲಿ ಮೊದಲ ಸಿನೆಮಾ ನಿರ್ಮಾಣ ಮಾಡಲಿದ್ದಾರೆ. ಕಾಲಿವುಡ್ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಪ್ರಧಾನ ಪಾತ್ರದಲ್ಲಿ ಈ ಸಿನೆಮಾದಲ್ಲಿ ನಟಿಸಲಿದ್ದಾರೆ. ಲೇಡಿ ಓರಿಯೆಂಟೆಂಡ್ ಸಿನೆಮಾ ಇದಾಗಲಿದ್ದು. ಈ ಪಾತ್ರಕ್ಕೆ ನಯನತಾರಾ ಶೂಟ್ ಆಗುತ್ತಾರೆ ಎಂದು ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಸಿನೆಮಾ ಸಹ ನಿರ್ಮಾಣವಾಗಲಿದೆ ಎಂಬೆಲ್ಲಾ ಸುದ್ದಿಗಳು ಪಾದರಸದಂತೆ ಹರಿದಾಡತೊಡಗಿತು. ಆದರೆ ಈ ಸುದ್ದಿಗಳು ಸುಳ್ಳು ಎಂದು ಧೋನಿ ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದೂ ಸಹ ಮನವಿ ಮಾಡಿದೆ.

ಈ ಸುಳ್ಳು ಸುದ್ದಿ ಕುರಿತು ಧೋನಿ ಎಂಟರ್‌ಟೈನ್‌ಮೆಂಟ್ ಟೀಂ ಪ್ರತಿಕ್ರಿಯೆ ನೀಡಿದ್ದು, ದಯವಿಟ್ಟು ಇಂತಹ ರೂಮರ್‍ ಗಳನ್ನು ನಂಬಬೇಡಿ. ಸದ್ಯ ನಮ್ಮ ಟೀಮ್ ದೊಡ್ಡ ಪ್ರಾಜೆಕ್ಸ್ ಒಂದರ ನಿಮಿತ್ತ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಸಹ ನೀಡುತ್ತೇವೆ. ಅಲ್ಲಿಯವರೆಗೂ ಯಾವುದೇ ರೀತಿಯ ಸುದ್ದಿಗಳನ್ನು ಹರಡಬೇಡಿ ಎಂದು ಮನಚವಿ ಮಾಡಿದ್ದು, ಅಸಲಿಗೆ ಈ ಸುಳ್ಳು ಸುದ್ದಿ ಹೇಗೆ ಹುಟ್ಟಿಕೊಂಡಿದೆ ಎಂಬುದು ತಿಳಿದಿಲ್ಲ ಎಂದು ಟೀಮ್ ತಿಳಿಸಿದೆ.

- Advertisement -

You May Like

More