ಥೈಲ್ಯಾಂಡ್ ನಲ್ಲಿ ನಯನ್ ವಿಕ್ಕಿ ಹನಿಮೂನ್.. ಅಲ್ಲಿನ ರೊಮ್ಯಾಂಟಿಕ್ ಪೊಟೊಸ್ ಸಿಕ್ಕಾಪಟ್ಟೆ ವೈರಲ್ …!

ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ಒಂದಾದ ನಯನತಾರಾ ಹಾಗೂ ವಿಘ್ಣೇಶ್ ಕೆಲವು ದಿನಗಳ ಹಿಂದೆಯಷ್ಟೆ ಮದುವೆಯಾದರು. ಮದುವೆಯಾದ ಕೂಡಲೇ ಈ ಜೋಡಿ ಪ್ರಸಿದ್ದ ತಿರುಮಲ ಸೇರಿದಂತೆ ಅನೇಕ ದೇವಾಲಯಗಳಿಗೆ ಟೆಂಪಲ್ ರನ್ ಮಾಡಿದ್ದರು. ಹನಿಮೂನ್ ಗೆಂದು ಥೈಲ್ಯಾಂಡ್ ಗೆ ಹಾರಿದ ಈ ಜೋಡಿ ಅಲ್ಲಿ ಹನಿಮೂನ್ ಟ್ರಿಪ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಹನಿಮೂನ್ ನಲ್ಲಿರುವ ಈ ಜೋಡಿಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ನಡೆಸಿ ಮದುವೆಯಾದ ಈ ಜೋಡಿ ರಜನಿಕಾಂತ್, ಶಾರುಖ್ ಖಾನ್, ದಳಪತಿ ವಿಜಯ್, ವಿಜಯ್ ಸೇತುಪತಿ ಸೇರಿದಂತೆ ಅನೇಕ ದೊಡ್ಡ ಸೆಲೆಬ್ರೆಟಿಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯಂತೆ ಮದುವೆ ನಡೆಯಿತು. ಮದುವೆಯಾದ ಕೂಡಲೇ ಮನೆಗೂ ಸಹ ಹೋಗದೇ ತಿರುಮಲಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದರು. ಬಳಿಕ ಅಂದು ಕೆಲವು ಕಾರಣಗಳಿಂದ ಈ ಜೋಡಿ ವಿವಾದಕ್ಕೆ ಸಿಲುಕಿತ್ತು. ಬಳಿಕ ವಿಘ್ನೇಶ್ ಬಹಿರಂಗವಾಗಿ ಕ್ಷಮೆ ಕೋರಿ ಈ ವಿವಾದಕ್ಕೆ ತೆರೆ ಎಳೆದರು. ಇನ್ನೂ ಮದುವೆಯಾದ ಬಳಿಕ ಈ ಜೋಡಿ ಅನೇಕ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಸದ್ಯ ಈ ಜೋಡಿ ಹನಿಮೂನ್ ಮೂಡ್ ನಲ್ಲಿದ್ದು, ಹನಿಮೂನ್ ಗಾಗಿ ಥೈಲ್ಯಾಂಡ್ ಗೆ ಹಾರಿದ್ದಾರೆ. ಅಲ್ಲಿನ ಸೌಂದರ್ಯವನ್ನು ಸವಿಯುತ್ತಾ, ತುಂಬಾ ರೊಮ್ಯಾಂಟಿಕ್ ಪೊಟೊಗಳನ್ನು ಶೇರ್‍ ಮಾಡುತ್ತಾ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.

ಇನ್ನೂ ನಯನ್ ಹಾಗೂ ವಿಕ್ಕಿ ರವರಿಗೆ ಸಂಬಂಧಿಸಿದ ಕೆಲವೊಂದು ಹನಿಮೂನ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಮಾನ ನಿಲ್ದಾಣದಲ್ಲಿ ಅಭಿಮಾನಿಯ ಜೊತೆಗೆ ಪೋಸ್ ಕೊಟ್ಟಿದ್ದರು. ಆ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಬ್ಯಾಂಕಾಂಕ್ ನಲ ಒಂದು ಸ್ಟಾರ್‍ ಹೋಟೆಲ್ ನಲ್ಲಿ ಇವರು ತಂಗಿದ್ದಾರೆ ಎನ್ನಲಾಗುತ್ತಿದೆ. ಸುತ್ತಲೂ ನೀರು ಉತ್ತಮವಾದ ಪರಿಸರವಿರುವ ಹೋಟೆಲ್ ನಲ್ಲಿ ತಂಗಿದ್ದಾರೆ ಎನ್ನಲಾಗಿದ್ದು, ಅಲ್ಲಿ ನಯನತಾರಾ ಪ್ರಾಕೃತಿಕ ಸೌಂದರ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಎಲ್ಲವನ್ನು ಬಿಟ್ಟು ಇಬ್ಬರೂ ಏಕಾಂತವಾಗಿ ಎಂಜಾಯ್ ಮಾಡುತ್ತಿದ್ದಾರೆ. ಈ ಹನಿಮೂನ್ ಜೀವನ ಪರ್ಯಂತ ನೆನೆಪಿನಲ್ಲಿರಬೇಕೆಂಬ ಪ್ಲಾನ್ ಅವರು ಮಾಡಿಕೊಂಡಿದ್ದಾರಂತೆ.

ಇನ್ನೂ ನಯನತಾರಾ ಎಲ್ಲೋ ಡ್ರೆಸ್ ನಲ್ಲಿ ಚೇರ್‍ ಮೇಲೆ ಕುಳಿತಿದ್ದು, ವಿಘ್ನೇಶ್ ಆಕೆಗೆ ಮುತ್ತಿಡುತ್ತಿದ್ದಾರೆ. ಇಬ್ಬರೂ ಜೊತೆಗೆ ಕುಳಿತುಕೊಂಡು ಪ್ರೀತಿಯಿಂದ ಮಾತನಾಡಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಚಕ್ಕರ್‍ ಹೊಡೆಯುತ್ತಿವೆ. ಜೊತೆಗೆ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರಿಗೆ ಶುಭಾಷಯಗಳನ್ನು ಕೋರಿದ್ದಾರೆ. ಅಷ್ಟೇ ಅಲ್ಲದೇ ಈ ಪೊಟೋಗಳನ್ನು ಅವರು ಎಲ್ಲೆಡೆ ವೈರಲ್ ಮಾಡಿದ್ದಾರೆ.

Previous articleಮಗನ ಮುಖ ತೋರಿಸಿದ ಕಾಜಲ್ ಅಗರ್ವಾಲ್.. ಕಾಜಲ್ ಮಗ ತುಂಬಾ ಕ್ಯೂಟ್….!
Next articleಶಾರ್ಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಪೋಸ್ ಕೊಟ್ಟ ಅಖಂಡ ಹಿರೋಯಿನ್… ಥೈಸ್ ಸೌಂದರ್ಯ ಪ್ರದರ್ಶನ..!