ನಯನ್ ಅಂಡ್ ವಿಕ್ಕಿಗೆ ನೆಟ್ಫ್ಲಿಕ್ಸ್ ನಿಂದ ಬಂದಿಲ್ಲವಂತೆ ನೊಟೀಸ್… ಕ್ಲಾರಿಟಿ ಕೊಟ್ಟ ನೆಟ್ಫ್ಲಿಕ್ಸ್…!

ದಕ್ಷಿಣ ಭಾರತದ ಕ್ಯೂಟ್ ಕಪಲ್ಸ್ ನಯನತಾರಾ ಹಾಗೂ ವಿಘ್ನೇಶ್ ಮದುವೆ ಕಳೆದ ಜೂನ್ 9 ರಂದು ಅದ್ದೂರಿಯಾಗಿ ನೆರವೇರಿದೆ. ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ಮದುವೆಯಾಗಿ ಸಂತಸದಿಂದ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಥೈಲ್ಯಾಂಡ್ ನಿಂದ ಹನಿಮೂನ್ ಮುಗಿಸಿ ವಾಪಸ್ಸು ಬಂದಿದ್ದರು. ಮದುವೆಯಾಗಿ ಸರಿಯಾಗಿ ಎರಡು ತಿಂಗಳು ಸಹ ಕಳೆದಿಲ್ಲ ಈ ಸ್ಟಾರ್‍ ಜೋಡಿ ನೊಟೀಸ್ ಗಳನ್ನು ಪಡೆದುಕೊಂಡಿದೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಇದೀಗ ನೆಟ್ ಫ್ಲಿಕ್ಸ್ ಇದಕ್ಕೆ ಕ್ಲಾರಿಟಿ ಕೊಟ್ಟಿದೆ.

ನಯನತಾರಾ ಹಾಗೂ ವಿಘ್ನೇಶ್ ಮದುವೆ ಸಮಾರಂಭದ ವಿಡಿಯೋ ಪ್ರಸಾರದ ಹಕ್ಕನ್ನು ಈ ಹಿಂದೆಯೇ ನೆಟ್ ಫ್ಲಿಕ್ಸ್ ದೊಡ್ಡ ಮೊತ್ತಕ್ಕೆ ಖರೀದಿಸಿತ್ತು. ಈ ಮದುವೆ ಸಮಾರಂಭದ ವಿಡಿಯೋವನ್ನು ಮಾಸ್ಟರ್‍ ಗೌತಮ್ ಮಿನನ್ ಎಂಬುವವರಿಗೆ ನಯನ್ ಅಂಡ್ ವಿಕ್ಕಿ ವಹಿಸಿದ್ದರು. ಸುಮಾರು 25 ಕೋಟಿ ಮೊತ್ತಕ್ಕೆ ನೆಟ್ ಫ್ಲಿಕ್ಸ್ ಮದುವೆ ವಿಡಿಯೋ ಪ್ರಸಾರದ ಹಕ್ಕನ್ನು ಖರೀದಿ ಮಾಡಿತ್ತಂತೆ. ಆದರೆ ನಯನ್ ಹಾಗೂ ವಿಘ್ನೇಶ್ ಮದುವೆಯ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಒಪ್ಪಂದ ಕ್ಯಾನ್ಸಲ್ ಮಾಡಿಕೊಂಡಿದೆ. ಒಪ್ಪಂದ ಮೊತ್ತವನ್ನು ಮರುಪಾವತಿ ಮಾಡುವಂತೆ ನೆಟ್‌ಫ್ಲಿಕ್ಸ್ ನೊಟೀಸ್ ನೀಡಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದವು. ಆದರೆ ಈ ಸುದ್ದಿಗೆ ನೆಟ್ ಫ್ಲಿಕ್ಸ್ ಕ್ಲಾರಿಟಿ ಕೊಟ್ಟಿದ್ದು, ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ.

ನಯನತಾರಾ ಹಾಗೂ ವಿಘ್ನೇಶ್ ಮದುವೆಯ ವಿಡಿಯೋ ಪ್ರಸಾರಕ್ಕೆ ನೆಟ್‌ಫ್ಲಿಕ್ಸ್ 25 ಕೋಟಿಗೆ ಖರೀದಿ ಮಾಡಿತ್ತು. ಆದರೆ ನೆಟ್‌ಫ್ಲಿಕ್ಸ್ ಒಪ್ಪಂದ ಕ್ಯಾನ್ಸಲ್ ಮಾಡಿದ್ದು, ಹೊಸ ಜೋಡಿ ದೊಡ್ಡ ಮೊತ್ತವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ನೆಟ್‌ ಫ್ಲಿಕ್ಸ್ ಇದೀಗ ಪರೋಕ್ಷವಾಗಿ ಸ್ಪಷ್ಟನೆಯೊಂದನ್ನು ನೀಡಿದೆ. ನಯನತಾರಾ ಹಾಗೂ ವಿಘ್ನೇಶ್ ರವರ ಪ್ರೀ ವೆಡ್ಡಿಂಗ್ ಪೊಟೋಗಳನ್ನು ಟ್ವಿಟರ್‍ ಮೂಲಕ ಶೇರ್‍ ಮಾಡಿದ ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ನಯನತಾರಾ ಹಾಗೂ ವಿಘ್ನೇಶ್ ನೆಟ್‌ ಫ್ಲಿಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದೆ. ಈ ಕುರಿತು ಟ್ವೀಟ್ ಮಾಡಿದ ನೆಟ್‌ಫ್ಲಿಕ್ಸ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ಟಾರ್‍ ಗಳಂತೆ ಕಾಣಿಸಿಕೊಳ್ಳಿತ್ತಿದ್ದಾರೆ. ಈ ಸಂತೋಷದ ಸಮಯದಲ್ಲಿ ನಾವು ಸಂತಸದಿಂದ ಡ್ಯಾನ್ಸ್ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ನೆಟ್‌ಫ್ಲಿಕ್ಸ್ ಮಾಡಿದ ಟ್ವೀಟ್ ನಿಂದಾಗಿ ನಯನತಾರಾ ಹಾಗೂ ವಿಘ್ನೇಶ್ ಮದುವೆ ಪ್ರಸಾರದ ಕುರಿತಂತೆ ಉಂಟಾಗಿದ್ದ ರೂಮರ್‍ ಗಳಿಗೆ ಬ್ರೇಕ್ ಬಿದ್ದಿದೆ. ಆದರೆ ಮದುವೆಯ ವಿಡಿಯೋ ಯಾವಾಗ ಪ್ರಸಾರವಾಗುತ್ತದೆ ಎಂಬ ವಿಚಾರ ಮಾತ್ರ ಬಹಿರಂಗಪಡಿಸಿಲ್ಲ ನೆಟ್‌ಫ್ಲಿಕ್ಸ್. ಇನ್ನೂ ವಿಡಿಯೋ ಪ್ರಸಾರ ಮಾಡುವ ಬಗ್ಗೆ ತಿಳಿಸಿದ ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ಪ್ರಸಾರದ ದಿನಾಂಕವನ್ನು ಸಹ ಘೋಷಣೆ ಮಾಡಬಹುದಾಗಿದೆ ಎಂದು ತಿಳಿದು ಬಂದಿದೆ.

Previous articleಮೈಂಡ್ ಬ್ಲಾಕ್ ಆಗುವಂತಹ ಹಾಟ್ ಪೊಟೋಸ್ ಶೇರ್ ಮಾಡಿದ ಜಾನ್ವಿ ಕಪೂರ್…!
Next articleರಾಖಿ ಸಾವಂತ್ ಮುಖದಲ್ಲಿ ಮತ್ತೆ ಸಂತಸ, ರಾಖಿ ಜೀವನದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್….!