Film News

ಆ ಲಕ್ಷಣಗಳಿರುವ ವ್ಯಕ್ತಿಯನ್ನೆ ಮದುವೆಯಾಗಲಿದ್ದಾರಂತೆ ನ್ಯಾಷನಲ್ ಕ್ರಷ್ ರಶ್ಮಿಕಾ…!

ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ ಅನೇಕರಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ. ನಟಿ ರಶ್ಮಿಕಾ ಮಂದಣ್ಣ ಮದುವೆಯ ಬಗ್ಗೆ ಸಹ ಅನೇಕ ಸುದ್ದಿಗಳು ಹರಿದಾಡುತ್ತಿವೆ. ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಇಂದಿಗೂ ಸಹ ಹರಿದಾಡುತ್ತಲೇ ಇದೆ. ಅನೇಕ ಬಾರಿ ರಶ್ಮಿಕಾ ನಾವಿಬ್ಬರು ಒಳ್ಳೇಯ ಸ್ನೇಹಿತರು ಎಂದು ಹೇಳಿದ್ದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುವುದು ಕಡಿಮೆಯಾಗಿಲ್ಲ. ಇದೀಗ ರಶ್ಮಿಕಾ ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಹೇಳಿದ್ದಾರೆ.

ಕನ್ನಡ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ ಇತ್ತಿಚಿಗೆ ಎಷ್ಟು ಫೇಮಸ್ ಆದರೋ ಅದೇ ರೀತಿ ವಿಮರ್ಶೆಗೂ ಸಹ ಗುರಿಯಾದರು. ಕನ್ನಡ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡು ಕನ್ನಡವನ್ನೇ ಕೀಳಾಗಿ ನೋಡುತ್ತಿದ್ದಾರೆ ಎಂದು ಅನೇಕ ಕನ್ನಡಿಗರು ಆಕೆಯನ್ನು ಕರ್ನಾಟಕದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು. ಇದರ ಜೊತೆಗೆ ತೆಲುಗು ನಟ ವಿಜಯ್ ದೇವರಕೊಂಡ ಜತೆಗೆ ಲವ್ ಅಫೈರ್‍ ನಡೆಸುತ್ತಿದ್ದಾರೆ ಎಂದು ಸಹ ಸುದ್ದಿಯಾದರು. ಇದಕ್ಕೆ ಬಲ ತುಂಬುವಂತೆ ಅವರಿಬ್ಬರೂ ಅನೇಕ ಬಾರಿ ವೆಕೇಷನ್ ಗೆ ಹೋಗಿದ್ದು, ಇತ್ತಿಚಿಗೆ ವಿಜಯ್ ಕುಟುಂಬದ ಜೊತೆಗೆ ದುಬೈಗೆ ಹೋಗಿದ್ದು, ಮತಷ್ಟು ಸುದ್ದಿಗಳು ಹರಿದಾಡಿದವು.

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಶೀಘ್ರದಲ್ಲೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ರಶ್ಮಿಕಾ ಮಂದಣ್ಣ ತಾನು ಮದುವೆಯಾಗುವ ವ್ಯಕ್ತಿಗೆ ಏನೆಲ್ಲಾ ಗುಣಗಳು ಇರಬೇಕು ಎಂಬುದರ  ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಮದುವೆ ಬಗ್ಗೆ ರಶ್ಮಿಕಾ ಮಾತನಾಡುತ್ತಾ, ನನಗೆ ಇನ್ನೂ ಮದುವೆಯಾಗುವ ವಯಸ್ಸು ಬಂದಿಲ್ಲ. ಆದರೆ ಯಾವ ಗುಣಗಳುಳ್ಳ ಹುಡುಗ ಬೇಕು ಎಂದು ಕೇಳಿದರೇ ಆತನ ಬಳಿ ನಾನು ತುಂಬಾ ಕಂಫರ್ಟ್ ಆಗಿರಬೇಕು. ಅಂತಹ ಗುಣವಿರುವ ವ್ಯಕ್ತಿಯನ್ನೇ ನಾನು ಮದುವೆಯಾಗುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ 1996 ರಲ್ಲಿ ಜನಿಸಿದ್ದು, ಈ ಏಪ್ರಿಲ್ 5 ಬಂದರೇ 26 ನೇ ವಸಂತಕ್ಕೆ ಕಾಲಿಡುತ್ತಾರೆ. ಸದ್ಯ ಆಕೆಯ ಪೋಕಸ್ ಸಿನೆಮಾಗಳ ಮೇಲಿದ್ದು, ಬ್ಯಾಕ್ ಟು ಬ್ಯಾಕ್ ಆಫರ್‍ ಗಳ ಮೂಲಕ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ನಟಿ ರಶ್ಮಿಕಾಗೆ ಈ ಹಿಂದೆ ಸ್ಯಾಂಡಲ್ ವುಡ್ ಸ್ಟಾರ್‍ ನಟ ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಸಹ ನೆರವೇರಿತ್ತು. ಕಿರಿಕ್ ಪಾರ್ಟಿ ಸಿನೆಮಾದ ಸಮಯದಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ 2017 ರಲ್ಲಿ ನಿಶ್ಚಿತಾರ್ಥ ಸಹ ಮಾಡಿಕೊಂಡರು. ಆದರೆ ಕೆಲವೊಂದು ಕಾರಣಗಳಿಂದ ಅವರಿಬ್ಬರ ನಡುವೆ ಬ್ರೇಕಪ್ ಸಹ ಆಗಿತ್ತು. ತೆಲುಗಿನಲ್ಲಿ ಗೀತಾ ಗೋವಿಂದಂ ಸಿನೆಮಾದ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂದು ಈಗಲೂ ಸಹ ಸುದ್ದಿಗಳು ಹರಿದಾಡುತ್ತಲೇ ಇದೆ.

Most Popular

To Top