ಕನ್ನಡದಲ್ಲಿ ಜೋರಾಯ್ತು ಬ್ಯಾನ್ ರಶ್ಮಿಕಾ ಮಂದಣ್ಣ ಪೋಸ್ಟ್ ಗಳು, ರಶ್ಮಿಕಾ ಅಭಿನಯದ ಸಿನೆಮಾಗಳಿಗೆ ಸಂಕಷ್ಟ ಆಗಲಿದೆಯೇ?

ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನೆಮಾಗಳ ಮೂಲಕ ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಸಹ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡು ನ್ಯಾಷನಲ್ ಕ್ರಷ್ ಆಗಿದ್ದಾರೆ. ದೊಡ್ಡ ಫ್ಯಾನ್ ಫಾಲೋಯಿಂಗ್, ಫೇಂ ಪಡೆದುಕೊಂಡಿರುವ ಈಕೆ ಇದೀಗ ಕನ್ನಡದಲ್ಲಿ ಬ್ಯಾನ್ ರಶ್ಮಿಕಾ ಎಂಬ ವಿರೋಧವನ್ನು ಎದುರಿಸುತ್ತಿದ್ದಾರೆ. ಇದರಿಂದ ರಶ್ಮಿಕಾ ರವರ ಮುಂದಿನ ಸಿನೆಮಾಗಳಿಗೆ ಸಮಸ್ಯೆಯಾಗಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಕಿರಿಕ್ ಹುಡುಗಿ ಎಂತಲೇ ಫೇಮಸ್ ಪಡೆದುಕೊಂಡ ರಶ್ಮಿಕಾ ಮಂದಣ್ಣ ರವರಿಗೆ ಸಿನಿರಂಗದಲ್ಲಿ ಖ್ಯಾತಿ ತಂದುಕೊಟ್ಟಿದ್ದು, ಕಿರಿಕ್ ಪಾರ್ಟಿ ಸಿನೆಮಾ. ಆದರೆ ಆಕೆ ಮಾತ್ರ ಕನ್ನಡ ಸಿನೆಮಾಗಳಿಂದ ಖ್ಯಾತಿ ಪಡೆದುಕೊಂಡು ಕನ್ನಡ ಭಾಷೆಯ ಬಗ್ಗೆ ಅಭಿಮಾನಿ ಹೊಂದಿಲ್ಲ. ಕನ್ನಡ ಸಿನೆಮಾಗಳ ಬಗ್ಗೆ ಕಡಿಮೆ ಮಾಡಿ ನೋಡುತ್ತಾರೆ ಎಂಬೆಲ್ಲಾ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ. ಇದೀಗ ಮತ್ತೆ ರಶ್ಮಿಕಾ ರವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕೆಂಬ ಅಭಿಯಾನ ಜೋರಾಗಿ ಶುರುವಾಗಿದೆ. ಇದಕ್ಕೆ ಕಾರಣ ರಶ್ಮಿಕಾ ಇತ್ತಿಚಿಗೆ ನೀಡಿದ ಸಂದರ್ಶನದಲ್ಲಿ ಕಿರಿಕ್ ಪಾರ್ಟಿ ಸಿನೆಮಾ ಪ್ರೊಡಕ್ಷನ್ ಹೆಸರು ಹೇಳಲು ಹಿಂದೆ ಮುಂದೆ ನೋಡಿದ್ದರು. ಕಿರಿಕ್ ಪಾರ್ಟಿ ಸಿನೆಮಾ ಪ್ರೊಡಕ್ಷನ್ ಹೆಸರನ್ನು ಕೇಳಿದರೇ ಆಕೆ ಆಕ್ಷನ್ ಮಾಡಿ ತೋರಿಸಿದ್ದರು. ಇದರಿಂದ ಕೆರಳಿದ ಕನ್ನಡಿಗರು ಆಕೆಯನ್ನು ಬ್ಯಾನ್ ಮಾಡಬೇಕೆಂದು ಅಭಿಯಾನ ಶುರು ಮಾಡಿದ್ದಾರೆ.

ನಟಿ ರಶ್ಮಿಕಾ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಆಕೆಯನ್ನು ನ್ಯಾಷನಲ್ ಕ್ರಷ್ ಎಂತಲೂ ಸಹ ಕರೆಯಲು ಪ್ರಾರಂಭಿಸಲಾಯಿತು. ಆಕೆ ಅಷ್ಟು ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಳ್ಳಲು ಕನ್ನಡದ ಕಿರಿಕ್ ಪಾರ್ಟಿ ಸಿನೆಮಾ ಎಂದರೇ ತಪ್ಪಾಗಲಾರದು. ಇನ್ನೂ ರಶ್ಮಿಕಾ ಸದ್ಯ ಕನ್ನಡ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನೆಮಾದ ಪ್ರೊಡಕ್ಷನ್ ಹೌಸ್ ಹೆಸರನ್ನು ಹೇಳಲಾಗದೆ ಸಜ್ಞೆ ಮಾಡುವ ಮೂಲಕ ತಿಳಿಸಿದ್ದರು. ಇದಕ್ಕೆ ತಕ್ಕ ಉತ್ತರವನ್ನೂ ಸಹ ರಿಷಬ್ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೋಲ್ ಸಹ ಆಗಿತ್ತು. ಇನ್ನೂ ರಶ್ಮಿಕಾ ರವರ ಮುಂದಿನ ಸಿನೆಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಬಾಯ್ಕಟ್ ರಶ್ಮಿಕಾ ಎಂಬ ಪೋಸ್ಟರ್‍ ಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿವೆ.

ಇನ್ನೂ ಕರ್ನಾಟಕದಲ್ಲಿ ರಶ್ಮಿಕಾ ಅಭಿನಯದ ಸಿನೆಮಾಗಳು ಬ್ಯಾನ್ ಮಾಡಲಾಗುತ್ತದೆ ಎಂಬ ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಕಾರಣದಿಂದ ರಶ್ಮಿಕಾ ರವರ ಮುಂದಿನ ಸಿನೆಮಾಗಳಿಗೆ ಸಂಕಷ್ಟ ಎದುರಾಗಬಹುದೇ ಎಂಬ ಅನುಮಾನ ಸಹ ಹುಟ್ಟಿಕೊಂಡಿದೆ. ಇನ್ನೂ ಬಿಗ್ ಬಜೆಟ್ ಹಾಗೂ ಬಹುನಿರೀಕ್ಷಿತ ಸಿನೆಮಾಗಳಾದ ಪುಷ್ಪಾ-2 ಹಾಗೂ ವಾರಿಸು ಸಿನೆಮಾಗಳ ಶೂಟಿಂಗ್ ಸಹ ಭರದಿಂದ ಸಾಗುತ್ತಿತ್ತು. ಇದೀಗ ಬಾಯ್ಕಟ್ ರಶ್ಮಿಕಾ ಎಂಬ ಅಭಿಯಾನದಿಂದ ದೊಡ್ಡ ಹೊಡೆತ ಬೀಳಲಿದೆ ಎಂಬ ಭೀತಿ ಆ ಸಿನೆಮಾ ತಂಡಗಳಲ್ಲಿ ಕಾಡುತ್ತಿದೆ. ಅಷ್ಟೇಅಲ್ಲದೇ ಇದರಿಂದ ರಶ್ಮಿಕಾ ರವರನ್ನ ಮುಂದಿನ ಸಿನೆಮಾಗಳಿಗೆ ಆಯ್ಕೆ ಮಾಡಿಕೊಳ್ಳಲು ನಿರ್ಮಾಪಕರು ಹಿಂದೇಟು ಹಾಕಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

Previous articleಗುಣಮುಖರಾಗಲು ತುಂಬಾ ಶ್ರಮಿಸುತ್ತಿದ್ದಾರೆ ಪೂಜಾ ಹೆಗ್ಡೆ, ವೈರಲ್ ಆದ ವಿಡಿಯೋ…!
Next articleಮತ್ತೆ ತಾಯಿಯಾಗಲಿದ್ದಾರಂತೆ ಸ್ಟಾರ್ ಸಿಂಗರ್ ಸುನಿತಾ? ವೈರಲ್ ಆದ ಸುದ್ದಿ…!