News

ನಟಸಾರ್ವಭೌಮ ತಂಡದ ಸಂಭಾವನೆ ಎಷ್ಟು ಗೊತ್ತ! ಚಿಕ್ಕಣ್ಣ, ರವಿ ಶಂಕರ್, ಅಪ್ಪು ಸಂಭಾವನೆ ನೋಡಿದ್ರೆ ಬೆರಗಾಗ್ತೀರಾ

natasarvabouma-movie

ನಟಸಾರ್ವಭೌಮ ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. ಕಳೆದ ತಿಂಗಳು 7 ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ನಟಸಾರ್ವಭೌಮ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಅಪರ್ಣ , ರವಿ ಶಂಕರ್ , ಚಿಕ್ಕಣ್ಣ ಹಾಗು ಸಾಧು ಕೋಕಿಲ ಅವರು ನಟನೆ ಮಾಡಿದ್ದಾರೆ. ನಟಸಾರ್ವಭೌಮ ಚಿತ್ರವನ್ನು ಪವನ್ ವಡೆಯರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಪವನ್ ವಡೆಯರ್ ಅವರು ಪುನೀತ್ ರಾಜಕುಮಾರ್ ಅವರಿಗೆ ರಣ ವಿಕ್ರಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಷ್ಟಕ್ಕೂ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿರುವ ನಟರಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ನಿಮಗೆಲ್ಲ ಗೊತ್ತಿರೋ ಹಾಗೆ ನಟಸಾರ್ವಭೌಮ ಚಿತ್ರದಲ್ಲಿ ಹಿರಿಯ ನಟಿಯಾದ B ಸರೋಜಾ ದೇವಿ ಅವರು ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ B ಸರೋಜಾ ದೇವಿ ಅವರಿಗೆ ನಟಸಾರ್ವಭೌಮ ನಿರ್ಮಾಪಕರಿಂದ ಬಂದ ಸಂಭಾವನೆ ಬರೋಬ್ಬರಿ 15 ಲಕ್ಷ. ಇದಲ್ಲದೆ ನಟಸಾರ್ವಭೌಮ ಚಿತ್ರದಲ್ಲಿ, ಮತ್ತೊಂದು ಮುಖ್ಯವಾದ ಪಾತ್ರವನ್ನು ಕನ್ನಡದ ಹಿರಿಯ ಪೋಷಕ ನಟ ಶ್ರೀನಿವಾಸ್ ಮೂರ್ತಿ ಅವರು ಮಾಡಿದ್ದಾರೆ. ಶ್ರೀನಿವಾಸ್ ಮೂರ್ತಿ ಅವರಿಗೆ ನಟಸಾರ್ವಭೌಮ ಚಿತ್ರಕ್ಕಾಗಿ ಕೊಟ್ಟ ಸಂಭಾವನೆ ಸುಮಾರು, 10 ಲಕ್ಷ ರೂಪಾಯಿಗಳು.
ಮತ್ತೊಂದು ಕಡೆ, ನಟಸಾರ್ವಭೌಮ ಚಿತ್ರದಲ್ಲಿ ದೊಡ್ಡ ವಿಲ್ಲನ್ ಪಾತ್ರ ಮಾಡಿರುವ ಆರ್ಮುಗಂ ರವಿ ಶಂಕರ್ ಅವರು ನಟಿಸಿದ್ದಾರೆ. ರವಿ ಶಂಕರ್ ಕನ್ನಡದ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ರವಿ ಶಂಕರ್ ಅವರಿಗೆ ಅವರದ್ದೇ ಆದ ಬಹಳ ದೊಡ್ಡ ಅಭಿಮಾನಿ ಬಳಗವೇ ಇದೇ. ಆರ್ಮುಗಂ ರವಿ ಶಂಕರ್ ಅವರಿಗೆ ನಟಸಾರ್ವಭೌಮ ಚಿತ್ರದಲ್ಲಿ ಕೊಟ್ಟ ಸಂಭಾವನೆ ಬರೋಬ್ಬರಿ 45 ಲಕ್ಷ ರೂಪಾಯಿಗಳು! ಕನ್ನಡದ ಬಹು ಬೇಡಿಕೆಯ ಹಾಸ್ಯ ನಟರಲ್ಲಿ ಒಬ್ಬರು ನಮ್ಮ ಚಿಕ್ಕಣ್ಣ ಅವರು. ಇತ್ತೀಚಿಗೆ ಬರುವ ಎಲ್ಲಾ ಕನ್ನಡ ಚಿತ್ರಗಳಲ್ಲಿ ನೀವು ಚಿಕ್ಕಣ್ಣ ಅವರನ್ನು ಕಾಣಬಹುದು. ನಟಸಾರ್ವಭೌಮ ಚಿತ್ರಕ್ಕಾಗಿ ಚಿಕ್ಕಣ್ಣ ಅವರಿಗೆ ಕೊಟ್ಟ ಸಂಭಾವನೆ ಸುಮಾರು 24 ಲಕ್ಷ ರೂಪಾಯಿಗಳು. ಕನ್ನಡದ ಮತ್ತೊಬ್ಬ ಹಾಸ್ಯ ದಿಗ್ಗಜರಾದ ನಮ್ಮ ಸಾಧು ಕೋಕಿಲ ಅವರು ಕೂಡ ನಟಸಾರ್ವಭೌಮ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಮ್ಮ ಸಾಧು ಕೋಕಿಲ ಅವರಿಗೆ ನಟಸಾರ್ವಭೌಮ ಚಿತ್ರದ ಪಾತ್ರಕ್ಕಾಗಿ ಸುಮಾರು 25 ಲಕ್ಷ ರೂಪಾಯಿಗಳು ಸಂಭಾವನೆ ಕೊಟ್ಟಿದ್ದಾರೆ. ಕನ್ನಡದ ಬಹು ಬೇಡಿಕೆಯ ನಟಿ ನಮ್ಮ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಸಾರ್ವಭೌಮ ಚಿತ್ರಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಹೀರೋಯಿನ್ ಆಗಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ನಟಸಾರ್ವಭೌಮ ಚಿತ್ರಕ್ಕಾಗಿ ಬಂದ ಸಂಭಾವನೆ ಬರೋಬ್ಬರಿ 70 ಲಕ್ಷ ರೂಪಾಯಿಗಳು. ಕನ್ನಡದ ನಟಿ ರಮ್ಯಾ ಬಿಟ್ಟರೆ ರಚಿತಾ ರಾಮ್ ಅವರೇ ಇಷ್ಟೊಂದು ಸಂಭಾವನೆ ಪಡೆಯುವ ನಟಿ.
ನಟಸಾರ್ವಭೌಮ ಚಿತ್ರದಲ್ಲಿ ನಿಮಗೆಲ್ಲ ಗೊತ್ತಿರೋ ಹಾಗೆ ಇಬ್ಬರು ಹೀರೋಯಿನ್ ಇದ್ದಾರೆ. ಒಬ್ಬರು ರಚಿತಾ ರಾಮ್ ಹಾಗು ಇನ್ನೊಬ್ಬರು ಮಲಯಾಳಂ ಬೆಡಗಿ ಅಪರ್ಣ. ಅಪರ್ಣ ಅವರು ಕೂಡ ನಟಸಾರ್ವಭೌಮ ಚಿತ್ರದಲ್ಲಿ ಬಹಳ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಪರ್ಣ ಅವರಿಗೆ ನಟಸಾರ್ವಭೌಮ ಚಿತ್ರಕ್ಕಾಗಿ ಬಂದ ಸಂಭಾವನೆ ಬರೋಬ್ಬರಿ 28 ಲಕ್ಷ ರೂಪಾಯಿಗಳು. ಇನ್ನು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಈ ಹಿಂದೆ ಪುನೀತ್ ರಾಜಕುಮಾರ್ ಅವರು ಅಂಜನೀಪುತ್ರ ಎಂಬ ಚಿತ್ರಕ್ಕೆ ಬರೋಬ್ಬರಿ 8 ಕೋಟಿ ಸಂಭಾವನೆ ಪಡೆದಿದ್ದರು. ಈಗ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಸಾರ್ವಭೌಮ ಚಿತ್ರಕ್ಕಾಗಿ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆದಿದ್ದರೆ. ಈ ಹಿಂದೆ ಕನ್ನಡ ನಟರಾದ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 10 ಕೋಟಿ ಸಂಭಾವನೆಯನ್ನು ಪಡೆದಿದ್ದರು.
ಇದಲ್ಲದೆ ಬಲ್ಲ ಮೂಲಗಳ ಪ್ರಕಾರ ನಟಸಾರ್ವಭೌಮ ಚಿತ್ರದ ನಿರ್ದೇಶಕರಾದ ಪವನ್ ವಡೆಯರ್ ಅವರಿಗೆ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಸಂಭಾವನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ನಟಸಾರ್ವಭೌಮ ಚಿತ್ರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಮತ್ತೊಂದೆಡೆ ನಟಸಾರ್ವಭೌಮ ಚಿತ್ರವೂ ಕನ್ನಡ ಅಲ್ಲದೆ, ತಮಿಳು ಹಾಗು ತೆಲುಗು ಭಾಷೆಗೆ ಕೂಡ ಡಬ್ ಆಗಲಿದೆ. ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ, ನಿರ್ದೇಶಕ ಪವನ್ ವಡೆಯರ್ ಅವರಿಗೆ, ಹಾಗು ನಟಸಾರ್ವಭೌಮ ಚಿತ್ರದ ಎಲ್ಲಾ ತಂಡದವರಿಗೆ ಚಿತ್ರದ ಬಿಡುಗಡೆಗೆ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top