News

(video)ನಟಸಾರ್ವಭೌಮ ಚಿತ್ರ ನೋಡಿ ಪ್ರೇಕ್ಷಕ ಪ್ರಭು ಫುಲ್ ಖುಷ್! 200 ಡೇಸ್ ಪಕ್ಕಾ ಅಂದ್ರು ಅಭಿಮಾನಿಗಳು

natasarvabouma-review

ನಿಮಗೆಲ್ಲ ಗೊತ್ತಿರೋ ಹಾಗೆ, ನಟಸಾರ್ವಭೌಮ ಚಿತ್ರ ಇಂದು ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ! ನಟಸಾರ್ವಭೌಮ ಚಿತ್ರದ ಶೋಗಳು ನೆನ್ನೆ ರಾತ್ರಿ ಇಂದಾನೆ ಹೌಸೆಫುಲ್ ಆಗಿ ಪ್ರದರ್ಶನ ಕಾಣಿತ್ತು! ಇದೆ ಮೊದಲ ಬಾರಿಗೆ, ಒಂದು ಕನ್ನಡ ಚಿತ್ರಕ್ಕೆ ಬರೋಬ್ಬರಿ 24 ಗಂಟೆಗಳು ಶೋಗಳು ಹಾಕಿದ್ದಾರೆ. ಪುನೀತ್ ರಾಜಕುಮಾರ್ ಅವರ ನಟಸಾರ್ವಭೌಮ ಚಿತ್ರವನ್ನು ನೋಡಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ! ಅಪ್ಪು ಅವರನ್ನು, ನಿರ್ದೇಶಕ ಪವನ್ ವಡೆಯರ್ ಅವರನ್ನು, ರಚಿತಾ ರಾಮ್ ಅವರನ್ನು ಹಾಡಿ ಹೊಗಳಿದ್ದಾರೆ! ನಟಸಾರ್ವಭೌಮ ಚಿತ್ರವನ್ನು ನೋಡಿ ಪ್ರೇಕ್ಷಕ ಪ್ರಭು ಸಕತ್ ಖುಷ್ ಆಗಿದ್ದಾರೆ! ನಟಸಾರ್ವಭೌಮ ಚಿತ್ರ 200 ಡೇಸ್ ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು! ಅಭಿಮಾನಿಗಳು ಚಿತ್ರದ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಟಸಾರ್ವಭೌಮ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ನಟಸಾರ್ವಭೌಮ ಚಿತ್ರವನ್ನು ನಮ್ಮ ಪವನ್ ವಡೆಯರ್ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಅಪರ್ಣ ಪರಮೇಶ್ವರನ್ ಅವರು ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ಇಡೀ ಭಾರತದಲ್ಲಿ ಒಂದು ಚಿತ್ರಕ್ಕೆ ಬಿಡುಗಡೆಯ ದಿನ ಬರೋಬ್ಬರಿ 24 ಘಂಟೆಗಳ ಕಾಲ ಶೋಗಳು ಇವೆ! ನೆನ್ನೆ ರಾತ್ರಿನೇ ಇಡೀ ಕರ್ನಾಟಕದಲ್ಲಿ ನಟಸಾರ್ವಭೌಮ ಚಿತ್ರಗಳನ್ನು ಹಲವಾರು ಜನ ನೋಡಿದ್ದಾರೆ! ಸಿನೆಮಾವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಕೂಡ ನಟಸಾರ್ವಭೌಮ ಚಿತ್ರವನ್ನು ಹಾಡಿ ಹೊಗಳಿದ್ದಾನೆ!
ನಟಸಾರ್ವಭೌಮ ಚಿತ್ರವನ್ನು ನಮ್ಮ ರಾಕ್ ಲೈನ್ ವೆಂಕಟೇಶ್ ಅವರು ರಾಕ್ ಲೈನ್ ಪ್ರೋಡ್ಯೂಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ನಟಸಾರ್ವಭೌಮ ಚಿತ್ರದ ಪ್ರತಿ ಒಂದು ಫ್ರೇಮ್ ನಲ್ಲಿ ಆ RICHNESS ಕಾಣಬಹುದು! ಇದು ಒಂದು ದೊಡ್ಡ ಬಜೆಟಿನ ಕನ್ನಡ ಚಿತ್ರ! ಪವನ್ ವಡೆಯರ್ ಅವರು ಬಹಳ ಅಚ್ಚು ಕಟ್ಟಾಗಿ ನಟಸಾರ್ವಭೌಮ ಚಿತ್ರವನ್ನು ಶುರುವಿನಿಂದ ಕೊನೆಯ ತನಕ ಜನರಿಗೆ ಎಲ್ಲೂ ಕೂಡ ನಿರಾಸೆ ಆಗದೆ ಇರುವ ತರ ನೋಡಿಕೊಂಡಿದ್ದಾರೆ! ಪವನ್ ವಡೆಯರ್ ಅವರ ನಿರ್ದೇಶನಕ್ಕೆ ಒಂದು ಸಲಾಂ! ಈ ಹಿಂದೆ ಪವನ್ ವಡೆಯರ್ ಅವರು ಪುನೀತ್ ರಾಜಕುಮಾರ್ ಅವರಿಗೆ ರಾಣಾ ವಿಕ್ರಮ ಎಂಬ ಚಿತ್ರವನ್ನು ಮಾಡಿದ್ದರು.
ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್, ರಚಿತಾ ರಾಮ್ ಹಾಗು ಅಪರ್ಣ ಅವರು ಅಲ್ಲದೆ ನಮ್ಮ ಆರ್ಮುಗಂ ರವಿ ಶಂಕರ್ ಅವರು ಕೂಡ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ನಟನೆ ಬಗ್ಗೆ ಮಾತಾಡೋ ಹಾಗೆ ಇಲ್ಲ! ಇದಲ್ಲದೆ ಅಪ್ಪು ಅವರ ಮೈ ನೆವೆರೆಳಿಸುವ ಆಕ್ಷನ್ ಸೀನ್ ಗಳು ಈ ಚಿತ್ರದ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಇದಲ್ಲದೆ DANCE WITH APPU ಹಾಗು OPEN THE BOTTLE ಹಾಡಿನಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಡಾನ್ಸ್ ಅನ್ನು ನೋಡಲು ಎರಡು ಕಣ್ಣು ಸಾಲದು! ಅಷ್ಟು ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಚಿತ್ರದಲ್ಲಿ ಅಪ್ಪು ಅವರ ಕೈಯಲ್ಲಿ ಇರುವ ಒಂದು ತಾಯಿತ ಬಹಳ ಮುಖ್ಯವಾಗಿರುತ್ತದೆ, ಅದು ನೀವು ಸಿನೆಮಾವನ್ನು ನೋಡಿದ ಮೇಲೆ ತಿಳಿದುಕೊಳ್ಳಬಹುದು.
ನಟಸಾರ್ವಭೌಮ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮಲಯಾಳಂ ನಟಿಯಾದ ಅಪರ್ಣ ಅವರು ಕೂಡ ಬಹಳ ಚನ್ನಾಗಿ ನಟಿಸಿದ್ದಾರೆ. ಅಪರ್ಣ ಅವರು ಮಲಯಾಳಂ ಮೂಲದ ನಟಿ ಆದ್ದರಿಂದ ಅವರಿಗೆ ಬೇರೆ ಅವರು ವಾಯ್ಸ್ ಅನ್ನು ಕೊಟ್ಟಿದ್ದಾರೆ. ವಿಲ್ಲನ್ ಆಗಿ ರವಿ ಶಂಕರ್ ಅವರ ಪರ್ಫಾರ್ಮೆನ್ಸ್ ಬಗ್ಗೆ ದೂಸರಾ ಮಾತಿಲ್ಲ! ಇದಲ್ಲದೆ ಹಿರಿಯ ನಟಿ B ಸರೋಜಾ ದೇವಿ ಅವರು ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ಇದಲ್ಲದೆ ಕನ್ನಡದ ಹಿರಿಯ ನಟರಾದ ಅಚ್ಯುತ್ ಕುಮಾರ್ ಅವರು ಒಂದು ಸ್ವಾಮೀಜಿಯ ಪಾತ್ರವನ್ನು ಮಾಡಿ ಸಕತ್ ಹಾಸ್ಯವನ್ನು ಕೊಟ್ಟಿದ್ದಾರೆ. ಸದ್ಯ ನಟಸಾರ್ವಭೌಮ ಚಿತ್ರ ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ಇದಲ್ಲದೆ ಪಕ್ಕದ ರಾಜ್ಯಗಳಲ್ಲಿ ಕೂಡ ನಟಸಾರ್ವಭೌಮ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಗಳು ಇವೆ ಎಂದು ತಿಳಿದು ಬಂದಿದೆ. ನಟಸಾರ್ವಭೌಮ ಚಿತ್ರ ಹೊರ ದೇಶಗಳಲ್ಲಿ ಮುಂದಿನ ವಾರ ತೆರೆಕಾಣಲಿದೆ ಎಂದು ಚಿತ್ರ ತಂಡದವರು ತಿಳಿಸಿದ್ದಾರೆ. ಒಟ್ಟಿನಲ್ಲಿ ನಟಸಾರ್ವಭೌಮ ಒಂದು ಪಕ್ಕಾ ಮಾಸ್ ಹಾಗು ಕ್ಲಾಸ್ ಸಿನಿಮಾ! ಎಲ್ಲಾ ವರ್ಗದ ಜನರು ಕೂಡ ಈ ಚಿತ್ರವನ್ನು ಸಕತ್ ಎಂಜಾಯ್ ಮಾಡಬಹುದು! ತಪ್ಪದೆ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿರಿ! ಒಂದೊಳ್ಳೆ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top