Film News

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಹುಟ್ಟಹಬ್ಬಕ್ಕಾಗಿ NBK107 ಟೀಸರ್ ಕೊಡುಗೆ…..!

ಟಾಲಿವುಡ್ ನಲ್ಲಿ ಗಾಡ್ ಆಫ್ ಮಾಸ್ ಎಂದೇ ಕರೆಯಲಾಗುವ ನಂದಮೂರಿ ಬಾಲಕೃಷ್ಣ ರವರು ನಿನ್ನೆ (ಜೂನ್ 9) 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಸಿನೆಮಾ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಅಭಿಮಾನಿಗಳು ಸಹ ಶುಭಾಷಯಗಳ ಸುರಿಮಳೆಗೈದಿದ್ದರು. ಇನ್ನೂ ಬಾಲಕೃಷ್ಣ ಹುಟ್ಟುಹಬ್ಬಕ್ಕೆ NBK107 ಸಿನೆಮಾ ತಂಡ ಸಿನೆಮಾದ ಟೀಸರ್‍ ಬಿಡುಗಡೆ ಮಾಡುವ ಮೂಲಕ ಶುಭಾಷಯ ತಿಳಿಸಿದೆ.

ನಟ ಬಾಲಕೃಷ್ಣ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದ ಫೇಮ್ ಹೊಂದಿರುವ ನಟರಾಗಿದ್ದಾರೆ. ನಂದಮೂರಿ ಕುಟುಂಬದಲ್ಲಿ ಜನಿಸಿದ ಬಾಲಕೃಷ್ಣ ಅನೇಕ ಸೂಪರ್‍ ಡೂಪರ್‍ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಇತ್ತೀಚಿಗಷ್ಟೆ ಅವರು ಅಭಿನಯಿಸಿದ ಅಖಂಡ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿತ್ತು. ಇದೇ ಸಂಭ್ರಮದಲ್ಲಿ ಬಾಲಕೃಷ್ಣ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ. NBK107 ದಲ್ಲಿ ಬಾಲಕೃಷ್ಣ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನೆಮಾದ ಪೋಸ್ಟರ್‍ ಮೂಲಕವೇ ದೊಡ್ಡ ಕ್ರೇಜ್ ಹುಟ್ಟಿಸಿದೆ. ಇದೀಗ ಅವರ ಹುಟ್ಟುಹಬ್ಬಕ್ಕೆ ಸಿನಿಮಾತಂಡ ಟೀಸರ್‍ ಸಹ ಬಿಡುಗಡೆ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಟೀಸರ್‍ ನಲ್ಲಿ ಬಾಲಯ್ಯನ ಆಕ್ಷನ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಅಖಂಡ ಸಿನೆಮಾ ಬಳಿಕ ಮತ್ತೊಂದು ಸಿನೆಮಾವನ್ನು ಸೂಪರ್‍ ಹಿಟ್ ಮಾಡುವ ದೃಷ್ಟಿಯಿಂದ ಬಾಲಕೃಷ್ಣ ರವರು ಗೋಪಿಚಂದ್ ಮಲ್ಲಿನೇನಿ ಸಾರಥ್ಯದಲ್ಲಿ NBK107 ಸಿನೆಮಾಗೆ ಒಪ್ಪಿಗೆ ನೀಡಿದ್ದರು. ಮಾಸ್ ಸಿನೆಮಾಗಳನ್ನು ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿರುವ ಗೋಪಿಚಂದ್ ಮಲ್ಲಿನೇನಿ ಬಾಲಕೃಷ್ಣ ರವರಿಗಾಗಿ ಪವರ್‍ ಪುಲ್ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಇನ್ನೂ ಈ ಸಿನೆಮಾಗೆ ಟೈಟಲ್ ಫೈನಲ್ ಆಗಿಲ್ಲ. ಸದ್ಯ ಎನ್.ಬಿ.ಕೆ ಹುಟ್ಟುಹಬ್ಬದ ಅಂಗವಾಗಿ ಸಿನೆಮಾದ ಟೀಸರ್‍ ಬಿಡುಗಡೆ ಮಾಡಲಾಗಿದೆ. ಈ ಟೀಸರ್‍ ನಲ್ಲಿ ಬಾಲಯ್ಯನ ಲುಕ್ ಗೆ ಹಾಗೂ ಪವರ್‍ ಪುಲ್ ಡೈಲಾಗ್ ಗಳಿಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಇನ್ನೂ ಬಾಲಕೃಷ್ಣ ರವರ NBK107 ಸಿನೆಮಾದ ಟೀಸರ್‍ ನಲ್ಲಿ ಡೈಲಾಗ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಒಂದು ಡೈಲಾಗ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಈ ಡೈಲಾಗ್ ಬಗ್ಗೆ ಚರ್ಚೆಗಳೂ ಸಹ ಶುರುವಾಗಿದೆ. ಈ ಟೀಸರ್‍ ನಲ್ಲಿ ಬಾಲಯ್ಯ ಒಂದು ಪವರ್‍ ಪುಲ್ ಡೈಲಾಗ್ ಹೊಡೆದಿದ್ದು, ಅದು ಆಂಧ್ರ ಸರ್ಕಾರಕ್ಕೆ ಹೊಡೆದಂತಿದೆ ಎಂಬ ಚರ್ಚೆಗಳು ಶುರುವಾಗಿದೆ. ಟೀಸರ್‍ ನಲ್ಲಿ ಬಾಲಕೃಷ್ಣ “ನಿಮಗೆ ಗವರ್ನಮೆಂಟ್ ಆರ್ಡರ್‍, ನನಗೆ ದೇವರ ಆರ್ಡರ್‍” ಎಂಬ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಇದು ಸರ್ಕಾರಕ್ಕೆ ಕೊಟ್ಟ ಟಾಂಗ್ ಡೈಲಾಗ್ ಎಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಚಿರು ಇಂಟ್ರಸ್ಟಿಂಗ್ ಕಾಮೆಂಟ್ಸ್, ಸಿನಿರಂಗ ಬಿಟ್ಟು ಬಂದ ಬಳಿಕ ಅದರ ಬೆಲೆ ತಿಳಿಯಿತು ಎಂದ ನಟ…!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟನಾಗಿ ಅನೇಕ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡಿರುವ ಮೆಗಾಸ್ಟಾರ್‍ ಚಿರಂಜೀವಿ ಇಂಡಿಯನ್ ಬೆಸ್ಟ್ ಫಿಲಂ ಪರ್ಸನಾಲಿಟಿ…

2 hours ago

ತಂದೆ ನೋಡಿದ ಹುಡುಗನನ್ನೇ ಮದುವೆಯಾಗಲಿದ್ದಾರಂತೆ ಸ್ಟಾರ್ ನಟಿ ಕೀರ್ತಿ ಸುರೇಶ್…!

ಸಿನಿರಂಗದ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಅವರ ವೈಯುಕ್ತಕ ವಿಚಾರಗಳಂತೂ ಬಿರುಗಾಳಿಯಂತೆ ಹಬ್ಬುತ್ತಿರುತ್ತದೆ. ಆ ಸುದ್ದಿ…

15 hours ago

ಶ್ರುತಿ ಹಾಸನ್ ಸೆಲ್ಫಿ ನೋಡಿ ಶಾಕ್ ಆದ ಅಭಿಮಾನಿಗಳು, ಸ್ಟಾರ್ ನಟಿಯ ಮುಖಕ್ಕೆ ಏನಾಗಿದೆ?

ಸದ್ಯ ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳ ಮೂಲಕ ಮುನ್ನುಗ್ಗುತ್ತಿರುವ ನಟಿಯರಲ್ಲಿ ಶ್ರುತಿ ಹಾಸನ್…

16 hours ago

ಭರ್ಜರಿ ಆಫರ್ ಗಿಟ್ಟಿಸಿಕೊಂಡ ಸ್ಯಾಂಡಲ್ ವುಡ್ ಬ್ಯೂಟಿ ಶ್ರೀಲೀಲಾ, ಸ್ಟಾರ್ ನಟನೊಂದಿಗೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡ ಬ್ಯೂಟಿ….!

ಇತ್ತೀಚಿಗೆ ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಜೋರು ಸಾಗುತ್ತಿದೆ. ಈ ಹಾದಿಯಲ್ಲೇ ಕನ್ನಡದ ನಟಿ ಶ್ರೀಲೀಲಾ ಸಹ ಪೆಳ್ಳಿಸಂದD…

18 hours ago

ಕೆಂಪು ಬಣ್ಣದ ಸೀರೆಯಲ್ಲಿ ರೆಡ್ ಮಿರ್ಚಿಯಂತೆ ಸ್ಪೈಸಿ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೇಯಾ…!

ಸೀನಿಯರ್‍ ಬ್ಯೂಟಿ ಶ್ರೆಯಾ ಶರಣ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಸದ್ದು ಮಾಡುತ್ತಿದ್ದಾರೆ. ನಟಿ ಶ್ರೆಯಾ ಫಸ್ಟ್…

20 hours ago

ಹನ್ಸಿಕಾ ಭರ್ಜರಿಯಾಗಿ ಎಂಜಾಯ್ ಮಾಡುತ್ತಿದ್ದಾರೆ ಬ್ಯಾಚಿಲರ್ ಪಾರ್ಟಿ, ಮದುವೆಗೂ ಮುಂಚೆ ಹಾಟ್ ಟ್ರೀಟ್ ಕೊಟ್ಟ ಆಪಲ್ ಬ್ಯೂಟಿ….!

ಸೌತ್ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡಿರುವ ಹನ್ಸಿಕಾ ಮೊಟ್ವಾನಿ ಮದುವೆಗೆ ದಿನಗಣನೆ ಶುರುವಾಗಿದೆ. ಅಲ್ಲು ಅರ್ಜುನ್ ಜೊತೆಗೆ…

21 hours ago