ಹುಟ್ಟು ಹಬ್ಬದ ಸಂಭ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಹುಟ್ಟಹಬ್ಬಕ್ಕಾಗಿ NBK107 ಟೀಸರ್ ಕೊಡುಗೆ…..!

ಟಾಲಿವುಡ್ ನಲ್ಲಿ ಗಾಡ್ ಆಫ್ ಮಾಸ್ ಎಂದೇ ಕರೆಯಲಾಗುವ ನಂದಮೂರಿ ಬಾಲಕೃಷ್ಣ ರವರು ನಿನ್ನೆ (ಜೂನ್ 9) 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಸಿನೆಮಾ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಅಭಿಮಾನಿಗಳು ಸಹ ಶುಭಾಷಯಗಳ ಸುರಿಮಳೆಗೈದಿದ್ದರು. ಇನ್ನೂ ಬಾಲಕೃಷ್ಣ ಹುಟ್ಟುಹಬ್ಬಕ್ಕೆ NBK107 ಸಿನೆಮಾ ತಂಡ ಸಿನೆಮಾದ ಟೀಸರ್‍ ಬಿಡುಗಡೆ ಮಾಡುವ ಮೂಲಕ ಶುಭಾಷಯ ತಿಳಿಸಿದೆ.

ನಟ ಬಾಲಕೃಷ್ಣ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದ ಫೇಮ್ ಹೊಂದಿರುವ ನಟರಾಗಿದ್ದಾರೆ. ನಂದಮೂರಿ ಕುಟುಂಬದಲ್ಲಿ ಜನಿಸಿದ ಬಾಲಕೃಷ್ಣ ಅನೇಕ ಸೂಪರ್‍ ಡೂಪರ್‍ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಇತ್ತೀಚಿಗಷ್ಟೆ ಅವರು ಅಭಿನಯಿಸಿದ ಅಖಂಡ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿತ್ತು. ಇದೇ ಸಂಭ್ರಮದಲ್ಲಿ ಬಾಲಕೃಷ್ಣ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ. NBK107 ದಲ್ಲಿ ಬಾಲಕೃಷ್ಣ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನೆಮಾದ ಪೋಸ್ಟರ್‍ ಮೂಲಕವೇ ದೊಡ್ಡ ಕ್ರೇಜ್ ಹುಟ್ಟಿಸಿದೆ. ಇದೀಗ ಅವರ ಹುಟ್ಟುಹಬ್ಬಕ್ಕೆ ಸಿನಿಮಾತಂಡ ಟೀಸರ್‍ ಸಹ ಬಿಡುಗಡೆ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಟೀಸರ್‍ ನಲ್ಲಿ ಬಾಲಯ್ಯನ ಆಕ್ಷನ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಅಖಂಡ ಸಿನೆಮಾ ಬಳಿಕ ಮತ್ತೊಂದು ಸಿನೆಮಾವನ್ನು ಸೂಪರ್‍ ಹಿಟ್ ಮಾಡುವ ದೃಷ್ಟಿಯಿಂದ ಬಾಲಕೃಷ್ಣ ರವರು ಗೋಪಿಚಂದ್ ಮಲ್ಲಿನೇನಿ ಸಾರಥ್ಯದಲ್ಲಿ NBK107 ಸಿನೆಮಾಗೆ ಒಪ್ಪಿಗೆ ನೀಡಿದ್ದರು. ಮಾಸ್ ಸಿನೆಮಾಗಳನ್ನು ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿರುವ ಗೋಪಿಚಂದ್ ಮಲ್ಲಿನೇನಿ ಬಾಲಕೃಷ್ಣ ರವರಿಗಾಗಿ ಪವರ್‍ ಪುಲ್ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಇನ್ನೂ ಈ ಸಿನೆಮಾಗೆ ಟೈಟಲ್ ಫೈನಲ್ ಆಗಿಲ್ಲ. ಸದ್ಯ ಎನ್.ಬಿ.ಕೆ ಹುಟ್ಟುಹಬ್ಬದ ಅಂಗವಾಗಿ ಸಿನೆಮಾದ ಟೀಸರ್‍ ಬಿಡುಗಡೆ ಮಾಡಲಾಗಿದೆ. ಈ ಟೀಸರ್‍ ನಲ್ಲಿ ಬಾಲಯ್ಯನ ಲುಕ್ ಗೆ ಹಾಗೂ ಪವರ್‍ ಪುಲ್ ಡೈಲಾಗ್ ಗಳಿಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಇನ್ನೂ ಬಾಲಕೃಷ್ಣ ರವರ NBK107 ಸಿನೆಮಾದ ಟೀಸರ್‍ ನಲ್ಲಿ ಡೈಲಾಗ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಒಂದು ಡೈಲಾಗ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಈ ಡೈಲಾಗ್ ಬಗ್ಗೆ ಚರ್ಚೆಗಳೂ ಸಹ ಶುರುವಾಗಿದೆ. ಈ ಟೀಸರ್‍ ನಲ್ಲಿ ಬಾಲಯ್ಯ ಒಂದು ಪವರ್‍ ಪುಲ್ ಡೈಲಾಗ್ ಹೊಡೆದಿದ್ದು, ಅದು ಆಂಧ್ರ ಸರ್ಕಾರಕ್ಕೆ ಹೊಡೆದಂತಿದೆ ಎಂಬ ಚರ್ಚೆಗಳು ಶುರುವಾಗಿದೆ. ಟೀಸರ್‍ ನಲ್ಲಿ ಬಾಲಕೃಷ್ಣ “ನಿಮಗೆ ಗವರ್ನಮೆಂಟ್ ಆರ್ಡರ್‍, ನನಗೆ ದೇವರ ಆರ್ಡರ್‍” ಎಂಬ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಇದು ಸರ್ಕಾರಕ್ಕೆ ಕೊಟ್ಟ ಟಾಂಗ್ ಡೈಲಾಗ್ ಎಂದು ಎಲ್ಲೆಡೆ ವೈರಲ್ ಆಗುತ್ತಿದೆ.

Previous articleಪುಷ್ಪಾ-2 ಸಿನೆಮಾಗೆ ನಟ ಅಲ್ಲು ಅರ್ಜುನ್ ಪಡೆದುಕೊಳ್ಳಲಿದ್ದಾರಂತೆ ಬರೊಬ್ಬರಿ ನೂರು ಕೋಟಿ ಸಂಭಾವನೆ…!
Next articleಬಿಡುಗಡೆಯಾಯ್ತು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ.. ಒಳ್ಳೆಯ ರೆಸ್ಪಾನ್ಸ್ ಗಳಿಸಿಕೊಂಡ ಚಾರ್ಲಿ….