ಪ್ರಿನ್ಸ್ ಮಹೇಶ್ ಬಾಬು ಬಗ್ಗೆ ಎಮೋಷನಲ್ ಪೋಸ್ಟ್ ಬರೆದ ಪತ್ನಿ ನಮ್ರತಾ..!

ಟಾಲಿವುಡ್ ಸಿನಿರಂಗದಲ್ಲಿ ಮುದ್ದಾದ ಹಾಗೂ ದಂಪತಿ ಎಂದರೇ ಹೀಗಿರಬೇಕು ಎಂದು ಅನೇಕರಿಗೆ ಮಾದರಿಯಾದ ಜೋಡಿ ಮಹೇಶ್ ಬಾಬು ಹಾಗೂ ನಮ್ರತಾ. ಈ ಜೋಡಿ ಅದೆಷ್ಟೋ ಮಂದಿಗೆ ಸ್ಪೂರ್ತಿಯಾಗಿದ್ದಾರೆ. ಫಾದರ್ಸ್ ಡೇ ಅಂಗವಾಗಿ ಮಹೇಶ್ ಬಾಬು ತಮ್ಮ ತಂದೆಗೆ ಪ್ರೀತಿಯಿಂದ ವಿಶ್ ಮಾಡಿದ್ದರು. ಇನ್ನೂ ಮಹೇಶ್ ಬಾಬು ಪತ್ನಿ ನಮ್ರತಾ ಸಹ ಮಹೇಶ್ ಬಾಬು ಬಗ್ಗೆ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಮ್ರತಾ ಬರೆದ ಆ ಪೋಸ್ಟ್ ಬಗ್ಗೆ ತೀಳಿಯೋಣ ಬನ್ನಿ.

ಸುಮಾರು ವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ಬೇಡಿಕೆ ನಟಿಯಾಗಿದ್ದ ನಮ್ರತಾ ಸಾಕಷ್ಟು ಹಿಟ್ ಸಿನೆಮಾಗಳನ್ನು ನೀಡಿದ್ದರು ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಅಂಜಿ ಸಿನೆಮಾದಲ್ಲೂ ಸಹ ನಮ್ರತಾ ನಟಿಸಿ ಶಬ್ಬಾಸ್ ಗಿರಿ ಪಡೆದುಕೊಂಡಿದ್ದರು. ಮಹೇಶ್ ಬಾಬು ಜೊತೆ ವಂಶಿ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಬಳಿಕ ಇವರಿಬ್ಬರ ನಡುವೆ ಸ್ನೇಹ ಶುರುವಾಗಿ ಬಳಿಕ ಪ್ರೀತಿಯಾಗಿ ಬದಲಾಯಿತು. ಈ ಇಬ್ಬರೂ ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಸಹ ನಡೆಸಿದ್ದರು. ಈ ಜೋಡಿ ಪೋಷಕರ ಒಪ್ಪಿಗೆ ಮೇರೆಗೆ ಕಳೆದ 2005 ರಲ್ಲಿ ಸರಳವಾಗಿ ಮದುವೆಯಾದರು. ಆದರೆ ಮದುವೆಯಾದ ಬಳಿಕ ನಮ್ರತಾ ಸಿನೆಮಾಗಳಿಂದ ದೂರವೇ ಉಳಿದರು. ಆದರೆ ನಮ್ರತಾ ಸಿನೆಮಾಗಳಿಗೆ ದೂರವಾದರೂ ಸಹ ಮಹೇರ್ಶ ಬಾಬು ಬ್ಯುಸಿನೆಸ್ ನೋಡಿಕೊಳ್ಳುವುದರ ಜೊತೆಗೆ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ. ಇವರ ಮುದ್ದಿನ ಮಕ್ಕಳಾದ ಗೌತಮ್ ಹಾಗೂ ಸಿತಾರಾ ರವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಮ್ರತಾ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.

ಸಿನೆಮಾಗಳಿಂದ ದೂರ ಉಳಿದರೂ ಸಹ ನಮ್ರತಾ ಪತಿ ಮಹೇಶ್ ಬಾಬು ಎಲ್ಲಾ ಬ್ಯುಸಿನೆಸ್ ಗಳನ್ನು ನೋಡಿಕೊಳ್ಳುತ್ತಾರೆ. ಜೊತೆಗೆ ಮಹೇಶ್ ಬಾಬು ರವರ ಎಂ.ಬಿ. ಫೌಂಡೇಷನ್ ಮೂಲಕ ಆಯೋಜಿಸುವಂತಹ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ನಮ್ರತಾ ಮುಂದಾಳತ್ವದಲ್ಲೇ ನಡೆಯುತ್ತಿರುತ್ತದೆ. ಮಹೇಶ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದು, ಕುಟುಂಬ ನಿರ್ವಹಣೆಯನ್ನು ನಮ್ರತಾ ನೋಡಿಕೊಳ್ಳುತ್ತಾರೆ. ಆ ಮೂಲಕ ಅನೇಕ ಮಂದಿಗೆ ಈ ಜೋಡಿ ಸ್ಪೂರ್ತಿಯಾಗಿ ನಿಂತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಇತ್ತೀಚಿಗೆ ನಮ್ರತಾ ಒಂದು ಎಮೋಷನಲ್ ಪೋಸ್ಟ್ ಬರೆದಿದ್ದಾರೆ. ಸದ್ಯ ಈ ಪೋಸ್ಟ್ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಫಾದರ್ಸ್ ಡೇ ಅಂಗವಾಗಿ ನಮ್ರತಾ ಮಹೇಶ್ ಬಾಬು ಬಗ್ಗೆ ಒಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ತೆಗೆದುಕೊಂಡ ಸೆಲ್ಫಿ ಜೊತೆಗೆ ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ. ನಮ್ರತಾ ಬರೆದುಕೊಂಡಂತೆ ನನ್ನ ಹೃದಯಪೂರ್ವಕವಾದ ಪತಿಗೆ ಹಾಗೂ ನಮ್ಮ ಮುದ್ದಿನ ಮಕ್ಕಳ ತಂದೆಗೆ, ಫಾದರ್ಸ್ ಡೇ ಶುಭಾಷಯಗಳು. ಈ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಂಡಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಸದ್ಯ ನಮ್ರತಾ ಬರೆದುಕೊಂಡ ಈ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Previous articleಕೆಜಿಎಫ್-2 ಸಿನೆಮಾವನ್ನು ಕಾಪಿ ಹೊಡೆಯುತ್ತಿದೆಯೇ ಪುಷ್ಪಾ-2? ಶ್ರೀವಲ್ಲಿ ಸಾವಿಗೆ ಕೆಜಿಎಫ್-2 ಕಾರಣವೇ?
Next articleಥೈಲ್ಯಾಂಡ್ ನಲ್ಲಿ ಹನಿಮೂನ್ ಪ್ಲಾನ್ ಮಾಡಿದ ವಿಕ್ಕಿ-ನಯನತಾರಾ….!