ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಸಮಂತಾ ಮತ್ತು ನಾಗಚೈತನ್ಯ ಜೋಡಿ ಕೂಡ ಒಂದು. ಈ ಜೋಡಿ ವಿಚ್ಛೇಧನ ಪಡೆಯುವ ವಿಷಯ ಕೇಳಿ ಎಲರಿಗೂ ಅಚ್ಚರಿಯಾಗಿತ್ತು. ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಸಮಂತಾ ಅಂತ್ಯ ಆಡಿದ್ದಾಗ, ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಈ ವಿಚಾರದ ಬಗ್ಗೆ ನಾಗಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಇದು ವರೆಗೂ ಎಲ್ಲೂ ಸಹ ಮಾತನಾಡಿರಲಿಲ್ಲ.
ಇದೀಗ ಮೊದಲ ಬಾರಿಗೆ ಮಗನ ಡಿವರ್ಸ್ ಬಗ್ಗೆ ತಂದೆ ನಾಗಾರ್ಜುನ ಮೌನ ಮುರಿದಿದ್ದಾರೆ. ನಾಗಚೈತನ್ಯ ಮತ್ತು ಸಮಂತಾ ಬೇರೆ ಬೇರೆ ಆದಾಗ ತಮ್ಮ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನ ವಿವರಿಸಿದ್ದಾರೆ. ಸಂಕ್ರಾಂತಿ ಪ್ರಯುಕ್ತ ಬಂಗಾರ್ ರಾಜು ಸಿನಿಮಾ ತೆರೆ ಕಂಡಿದೆ ಈ ಸಿನಿಮಾದ ಪ್ರಚಾರದ ವೇಳೆ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಫ್ಹಸ್ಟ್ ಪೋಸ್ಟ್ ಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ನಾಗಾರ್ಜುನ ಕೆಲವು ವಿಚಾರಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.
ವಿಚ್ಛೇಧನ ಸುದ್ದಿ ಘೋಷಣೆ ಆಗುವ ಮುನ್ನವೇ ಸೋಷಿಯಲ್ ಮಿಡಿಯಾದಲ್ಲಿ ಅನೇಕ ಅಂತೆ ಕಂತೆಗಳು ಹರಿದಾಡುತ್ತಿದ್ದವು. ಡಿವರ್ಸ್ ಸುದ್ದಿ ಅಧಿಕೃತವಾದ ಬಳಿಕವೂ ಗಾಸಿಪ್ ಗಳು ನಿಲ್ಲಲೇ ಇಲ್ಲ. ಆದರೆ ಆ ಯಾವ ವಿಚಾರದ ಬಗ್ಗೆಯೂ ನಾಗಚೈತನ್ಯ ಮಾತನಾಡುತ್ತಿರಲಿಲ್ಲ. ಮಗನ ಆ ಮೌನವನ್ನ ನಾಗಾರ್ಜುನ ಇಷ್ಟ ಪಟ್ಟರಂತೆ. ಆ ಎಲ್ಲಾ ಸಂದರ್ಭದಲ್ಲಿ ಅವನು ಅಷ್ಟೊಂದು ಶಾಂತವಾಗಿರುವುದಕ್ಕೆ ನನಗೆ ಅವನ ಮೇಲೆ ಹೆಮ್ಮೆ ಇದೆ ಎಂದು ನಾಗಾರ್ಜುನ ಹೇಳಿಕೊಂಡಿದ್ದಾರೆ. ಎಲ್ಲಾ ತಂದೆಯ ರೀತಿ ನಾನು ಕೂಡ ಅವನ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಅವನಿಗೆ ಮಾತ್ರ ನನ್ನ ಬಗ್ಗೆ ಚಿಂತೆ ಎಂದು ಹೇಳಿಕೊಂಡಿದ್ದಾರೆ.