ನಾಗಚೈತನ್ಯ ಹೊಸ ಸಿನೆಮಾದಲ್ಲಿ ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷರಂತೆ!

ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ವಂಶದ ನಾಗ ಚೈತನ್ಯರವರ ಹೊಸ ಸಿನೆಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ರವರ ಅಭಿಮಾನಿ ಸಂಘದ ಅಧ್ಯಕ್ಷರಾಗಲಿದ್ದಾರಂತೆ.

ಖ್ಯಾತ ನಿರ್ದೇಶಕ ವಿಕ್ರಮ್ ಹಾಗೂ ನಾಗಚೈತನ್ಯ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಎರಡನೇ ಚಿತ್ರ ಥ್ಯಾಂಕ್ ಯೂ ಚಿತ್ರದಲ್ಲಿ ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷರಾಗಿ ನಟಿಸಲಿದ್ದಾರೆ. ಈಗಾಗಲೇ ನಿರ್ದೇಶಕ ವಿಕ್ರಮ್ ಮನಂ, 24, 13ಬಿ ಮೊದಲಾದ ಸಿನೆಮಾಗಳನ್ನು ಮಾಡಿ ಸಾಕಷ್ಟು ಹೆಸರು ಗಳಿಸಿದ್ದು, ಇದೀಗ ಥ್ಯಾಂಕ್ ಯೂ ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಸಹ ಪ್ರಾರಂಭವಾಗಿದ್ದು, ಚಿತ್ರದಲ್ಲಿ ನಾಗಚೈತನ್ಯ ರವರು ಅಭಿರಾಮ್ ಎಂಬ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಇನ್ನೂ ಥ್ಯಾಂಕ್ ಯೂ ಚಿತ್ರದ ಶೂಟಿಂಗ್ ಚಿತ್ರಮಂದಿರದಲ್ಲಿ ನಡೆಯುತ್ತಿದ್ದು, ಅಲ್ಲಿ ಮಹೇಶ್ ಬಾಬು ಸಿನೆಮಾ ಬಿಡುಗಡೆಯಾಗಿರುತ್ತದೆ. ಅಲ್ಲಿ ಅಭಿಮಾನಿಗಳು ಶುಭಾಶಯ ಕೋರುವ ಪೋಸ್ಟರ್ ಗಳನ್ನು ಹಾಕಿದ್ದು, ಅದರಲ್ಲಿ ನಾಗ ಚೈತನ್ಯ ಪೊಟೊ ಸಹ ಇರುತ್ತದೆ ಜೊತೆಗೆ ಪೊಟೋ ಕೆಳಗೆ ಅಭಿರಾಮ್ ಎಂತಲೂ ಬರೆಯಲಾಗಿರುತ್ತದೆ. ಅಷ್ಟೇ ಅಲ್ಲದೇ ನಾಗಚೈತನ್ಯ ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷರೂ ಸಹ ಆಗಿರುತ್ತಾರೆ.

ಇನ್ನೂ ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದು, ಐಶ್ವರ್ಯಾ ಲಕ್ಷ್ಮೀ, ಅವಿಕಾ ಗೋರ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.

Previous articleಪತ್ನಿಯ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ವಿಶ್ ಮಾಡಿದ ಕಿಚ್ಚ
Next articleತಮಿಳುನಾಡು ಸರ್ಕಾರದ ಆದೇಶ ಹಿಂಪಡೆಯಲು ಕೇಂದ್ರ ಸರ್ಕಾರ ಸೂಚನೆ!