Kannada Reality Shows

ತೆಲುಗು ಭಾಷೆಯ ನಾಗಭೈರವಿ ಅವತಾರದಲ್ಲಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಶ್ವಿನಿ!

ಸಧ್ಯಕ್ಕೆ ಕಿರುತೆರೆ ಲೋಕದಲ್ಲಿ ಹೆಚ್ಚಿನ ಬೇಡಿಕೆ ಇರುವ ಧಾರಾವಾಹಿ ಗಟ್ಟಿಮೇಳ. ಈ ಧಾರಾವಾಹಿಯ ಬಹುತೇಕ ಎಲ್ಲಾ ಪಾತ್ರಗಳನ್ನು ಸಹ ಕನ್ನಡ ಕಿರುತೆರೆ ಪ್ರಿಯರು ಇಷ್ಟಪಟ್ಟಿದ್ದಾರೆ. ವೇದಾಂತ್, ಅಮೂಲ್ಯ, ಆರತಿ, ವಿಕ್ರಾಂತ್, ಪರಿ ಎಲ್ಲಾ ಪಾತ್ರಗಳು ಸಹ ಕರ್ನಾಟಕದ ಪ್ರತಿ ಮನೆಯಲ್ಲೂ ಸಹ ಬಹಳ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿರುವ ನಟಿ ಅಶ್ವಿನಿ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಾಧಾ ರಮಣ ಧಾರಾವಾಹಿಯಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು, ಇವರ ಮುಗ್ಧ ನಟನೆಯನ್ನು ಎಲ್ಲರೂ ಇಷ್ಟಪಟ್ಟಿದ್ದರು. ರಾಧಾ ರಾಮಣದಲ್ಲಿ ನಟಿಸುವಾಗಲೇ ಗಟ್ಟಿಮೇಳ ಧಾರಾವಾಹಿಯ ಆಫರ್ ಸಿಕ್ಕಿದ ಕಾರಣ ಎರಡು ಧಾರಾವಹಿಗಳಲ್ಲಿಯೂ ನಟಿಸುತ್ತಿದ್ದರು ಅಶ್ವಿನಿ.

ಗಟ್ಟಿಮೇಳ ಧಾರಾವಾಹಿಯ ಆರತಿ ಪಾತ್ರ, ಮನೆಯ ದೊಡ್ಡ ಅಕ್ಕ, ಇದರಲ್ಲೂ ಸಹ ಬಹಳ ಹೋಮ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅಶ್ವಿನಿ. ಪೂಜೆ ಪುನಸ್ಕಾರ ಮಾಡಿ, ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಪಾತ್ರ ಇದಾಗಿದೆ. ಗಟ್ಟಿಮೇಳ ಧಾರಾವಾಹಿಯ ಜೊತೆಗೆ ಮತ್ತೊಂದು ಧಾರಾವಾಹಿಯಲ್ಲಿ ನಟಿಸಲು ಗ್ರೀ’ನ್ ಸಿ’ಗ್ನಲ್ ನೀಡಿದ್ದಾರೆ ಅಶ್ವಿನಿ. ಅಶ್ವನಿ ನಟಿಸುತ್ತಿರುವ ಮತ್ತೊಂದು ಧಾರಾವಾಹಿ ಯಾವುದು ? ಅದರ ಕಥೆ ಏನು ? ತಿಳಿಯಲು ಮುಂದೆ ಓದಿ..

ನಟಿ ಅಶ್ವಿನಿ ನಟಿಸುತ್ತಿರುವ ಮತ್ತೊಂದು ಧಾರಾವಾಹಿಯ ಹೆಸರು, ನಾಗಭೈರವಿ. ಹೆಸರೇ ಬಹಳ ಇಂಟೆರೆಸ್ಟಿಂಗ್ ಆಗಿದೆ. ಈ ಧಾರಾವಾಹಿಯಲ್ಲಿ ಎರಡು ಬೇರೆ ಬೇರೆ ಶೇ’ಡ್ ಇರುವ ಪಾತ್ರದಲ್ಲಿ ನಟಿಸಲಿದ್ದಾರೆ ಅಶ್ವನಿ. ಒಂದು ನಾಗದೇವತೆ ಪಾತ್ರ ಹಾಗೂ ಬುಡಕಟ್ಟು ಜನಾಂಗದ ಹು’ಡುಗಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಶ್ವಿನಿ ಪೋಸ್ಟ್ ಮಾಡಿದ್ದು, ಅಶ್ವನಿ ಅವರ ಹೊಸ ಲುಕ್ ನೋಡಿ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ನಾಗಭೈರವಿ ತೆಲುಗು ಸೀರಿಯಲ್ ಆಗಿದ್ದು, ಈ ಮೂಲಕ ಟಾಲಿವುಡ್ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದ್ದಾರೆ ಅಶ್ವಿನಿ. ಅಶ್ವನಿ ಅಭಿನಯಿಸುತ್ತಿರುವ ಪಾತ್ರ ಬಹಳ ವಿಶೇಷವಾಗಿದ್ದು, ಇದರಲ್ಲಿ ಸಾ’ಹಸ ದೃಶ್ಯಗಳು ಸಹ ಇರಲಿದೆಯಂತೆ, ಹೆಸರಾಂತ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಸಾಹಸ ಹೇಳಿಕೊಟ್ಟಿದ್ದ ಅದೇ ಮಾಸ್ಟರ್ ಅಶ್ವಿನಿ ಅವರಿಗೂ ಸಹ ಫೈ’ಟ್ಸ್ ಹೇಳಿಕೊಡುತ್ತಿದ್ದಾರಂತೆ.

ಲಾಕ್ ಡೌನ್ ಶುರುವಾಗುವ ಮೊದಲೇ ಅಶ್ವಿನಿ ಅವರಿಗೆ ಈ ಪಾತ್ರದ ಆಫರ್ ಬಂದಿದ್ದು, ಲಾಕ್ ಡೌನ್ ಸಮಯದಲ್ಲಿ ಪಾತ್ರಕ್ಕಾಗಿ 7 ಕೆಜಿ ತೂ’ಕ ಇಳಿಸಿಕೊಂಡಿದ್ದಾರಂತೆ. ಈ ಪಾತ್ರ ಅಶ್ವಿನಿ ಅವರ ಕಿರುತೆರೆ ಕೆರಿಯರ್ ನಲ್ಲಿ ಮೈ’ಲಿಗಲ್ಲಾಗಿ ಅವರ ವೃತ್ತಿ ಜೀವನದಲ್ಲಿ ತಿರುವು ನೀಡುವ ಎಲ್ಲಾ ಸಾಧ್ಯತೆಗಳಿವೆ. ಈ ಪಾತ್ರ ಬಹಳ ವಿಶೇಷವಾಗಿ ಇರುವುದರಿಂದ ನಾಗಭೈರವಿ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಹಾಗೂ ಸಮಯ ನೀಡುತ್ತಿದ್ದಾರೆ ಅಶ್ವಿನಿ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದ್ದು, ತಂಡದವರು ಅಶ್ವಿನಿ ಅವರ ನಟನೆ ಹಾಗೂ ಪರ್ಫಾರ್ಮೆನ್ಸ್ ಅನ್ನು ಇಷ್ಟಪಟ್ಟು ಮೆಚ್ಚುಗೆ ಸೂಚಿಸಿದ್ದಾರಂತೆ. ಇಂತಹ ಒಂದು ಪಾತ್ರ ಸಿಕ್ಕಿರುವುದು ಅಶ್ವಿನಿ ಅವರಿಗೆ ಬಹಳ ಖುಷಿ ನೀಡಿದೆಯಂತೆ. ಗಟ್ಟಿಮೇಳ ಹಾಗೂ ನಾಗಭೈರವಿ ಎರಡು ಧಾರಾವಹಿಗಳಲ್ಲೂ ನಟಿಸಲಿದ್ದಾರೆ ಅಶ್ವಿನಿ.

Trending

To Top