Film News

ಸ್ಯಾಮ್ ಜಾಮ್ ಶೋ ನಲ್ಲಿ ನಾಗಚೈತನ್ಯ ರನ್ನು ಕಾಡಿಸಿದ ಸಮಂತಾ!

ಹೈದರಾಬಾದ್: ಖ್ಯಾತ ನಟಿ ಸಮಂತಾ ಅಕ್ಕಿನೇನಿ ನಡೆಸುತ್ತಿರುವ ಸ್ಯಾಮ್ ಜಾಮ್ ಟಾಕ್ ಶೋ ಭಾರಿ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಸಮಂತಾ ರವರ ಪತಿ ನಾಗಚೈತನ್ಯರವನ್ನು ಪ್ರಶ್ನೆಗಳ ಮೂಲಕ ಕಾಡಿಸಿದ್ದಾರೆ.

ನಟಿ ಸಮಂತಾ ನಡೆಸುತ್ತಿರುವ ಸ್ಯಾಮ್ ಜಾಮ್ ಶೋ ನಲ್ಲಿ ತೆಲುಗು ಸಿನೆಮಾರಂಗದ ಖ್ಯಾತ ನಟ-ನಟಿಯರನ್ನು ಸಂದರ್ಶನ ಮಾಡುವುದು, ಅವರನ್ನು ಪ್ರಶ್ನೆಗಳ ಮೂಲಕ ಕಾಡಿಸುವುದು, ಕಾಲೆಳೆಯುವುದು ನಡೆಯುತ್ತದೆ. ಇನ್ನೂ ಈ ಶೋ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಮಾಲೀಕತ್ವದ ಆಹಾ ಒಟಿಟಿನಲ್ಲಿ ಮೂಡಿಬರುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರ ಸಂದರ್ಶನಗಳನ್ನು ಮಾಡಿದಂತಹ ಸಮಂತಾ ಇದೀಗ ತಮ್ಮ ಪತಿಯನ್ನು ಇಂಟರ್‌ವ್ಯೂ ಮಾಡಲಿದ್ದಾರೆ. ಈ ಕುರಿತು ಪ್ರೊಮೊ ರಿಲೀಸ್ ಆಗಿದ್ದು, ಪ್ರೊಮೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಪ್ರೊಮೋ ನಲ್ಲಿರುವಂತೆ ಸಮಂತಾ ನಾಗಚೈತನ್ಯ ರವರನ್ನು ಅಡುಗೆ ವಿಚಾರ, ಮನೆ ನಿರ್ವಹಣೆ, ಹುಡುಗಿಯರ ಜೊತೆ ಡೇಟಿಂಗ್ ಸೇರಿದಂತೆ ಅನೇಕ ವಿಚಾರಗಳನ್ನು ಕೇಳಿದ್ದಾರೆ. ಇನ್ನೂ ಇವರಿಬ್ಬರ ಸಂದರ್ಶನದ ಶೋ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಪತಿ ನಾಗಚೈತನ್ಯ ರವರ ಸಂದರ್ಶನದ ಮೂಲಕ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನೂ ಈ ಸಂದರ್ಶನ ಜನವರಿ ೮ ರಂದು ಪ್ರಸಾರವಾಗಲಿದೆ.

ಇನ್ನೂ ನಟಿ ಸಮಂತಾ ಈ ಶೋ ನಡೆಸಿಕೊಡಲು 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಕಳೆದ ದೀಪಾವಳಿ ಹಬ್ಬದಿಂದ ಈ ಶೋ ಪ್ರಾರಂಭವಾಗಿದ್ದು, ಈ ಶೋ ನಲ್ಲಿ ಟಾಲಿವುಡ್ ನ ಸ್ಟಾರ್ ಕಲಾವಿದರಾದ ಮೆಗಾಸ್ಟಾರ್ ಚಿರಂಜೀವಿ, ತಮನ್ನಾ, ರಾಣಾ ದಗ್ಗುಬಾಟಿ, ಅಲ್ಲುಅರ್ಜುನ್, ವಿಜಯ್ ದೇವರಕೊಂಡ, ರಕುಲ್ ಪ್ರೀತ್ ಸಿಂಗ್, ಸೈನಾ ನೆಹವಾಲ್ ಸೇರಿದಂತೆ ಅನೇಕರ ಸಂದರ್ಶನವನ್ನು ಸಮಂತಾ ಮಾಡಿದ್ದಾರೆ.

Trending

To Top