ಡಿವೋರ್ಸ್ ವಿಚಾರವನ್ನು ಬಿಡಿ, ನಾನು ಸಮಂತಾರನ್ನು ತುಂಬಾ ಗೌರವಿಸುತ್ತೇನೆ ಎಂದ ನಾಗಚೈತನ್ಯ…!

ಟಾಲಿವುಡ್ ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಒಂದಾಗಿದೆ. ಮದುವೆಯಾದ ಕೆಲವು ವರ್ಷಗಳ ಕಾಲ ತುಂಬಾ ಸಂತೋಷದಿಂದ ಅನ್ಯೋನ್ಯತೆಯಿಂದ ಈ ಜೋಡಿ ದಿಡೀರ್‍ ನೇ ವಿಚ್ಚೇದನ ಪಡೆದುಕೊಳ್ಳಲು ಘೋಷಣೆ ಮಾಡಿದರು. ಈ ವಿಚಾರ ಇಡೀ ಟಾಲಿವುಡ್ ಮಾತ್ರವಲ್ಲದೇ ಎಲ್ಲರಿಗೂ ಶಾಕಿಂಗ್ ಸುದ್ದಿಯಾಗಿತ್ತು. ಅವರು ವಿಚ್ಚೇದನ ಪಡೆದುಕೊಂಡು ತಿಂಗಳುಗಳು ಕಳೆಯುತ್ತಿದ್ದರೂ ಸಹ ಅವರು ವಿಚ್ಚೇದನ ಪಡೆದುಕೊಳ್ಳಲು ನಿಖರ ಕಾರಣ ಮಾತ್ರ ಇಂದಿಗೂ ಸಹ ರಿವೀಲ್ ಆಗಿಲ್ಲ. ಜೊತೆಗೆ ಅಭಿಮಾನಿಗಳು ಮಾದ್ಯಮಗಳೂ ಸಹ ಈ ಕುರಿತು ಸಮಂತಾ ಹಾಗೂ ನಾಗಚೈತನ್ಯರನ್ನು ಕೇಳುತ್ತಲೇ ಇದ್ದಾರೆ. ಇದೀಗ ನಾಗಚೈತನ್ಯ ಎಮೋಷನಲ್ ಆಗಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ನಟಿ ಸಮಂತಾ ವಿಚ್ಚೇದನದ ಬಳಿಕ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ಆಗಿ ಹವಾ ಸೃಷ್ಟಿ ಮಾಡಿಕೊಂಡಿದ್ದಾರೆ. ಆದರೆ ನಾಗಚೈತನ್ಯ ಇನ್ನೂ ಖ್ಯಾತಿ ಗಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಇತ್ತಿಚಿಗೆ ಬಾಲಿವುಡ್ ನ ನಿರ್ದೇಶಕ ಕರಣ್ ಜೋಹರ್‍ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ನಲ್ಲೂ ಸಹ ಸಮಂತಾ ರವರನ್ನು ವಿಚ್ಚೇದನದ ಬಗ್ಗೆ ಕೇಳಿದ್ದರು. ಆಗಲೂ ಸಹ ಸಮಂತಾ ನಿಖರ ಕಾರಣ ತಿಳಿಸಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್‍ ನಿಮ್ಮ ಪತಿ ನಾಗಚೈತನ್ಯ ಎಂದರೇ, ಎಕ್ಸ್ ಹಸ್ಬೆಂಡ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಾಗಚೈತನ್ಯ ರವರಿಗೂ ಸಹ ಡಿವೋರ್ಸ್ ಬಗ್ಗೆ ಪದೇ ಪದೇ ಕೇಳುತ್ತಿದ್ದಾರೆ. ಇದಕ್ಕೆ ಬೇಸರ ವ್ಯಕ್ತಪಡಿಸಿದ ಚೈತು ಈ ವಿಚಾರವನ್ನು ಇಲ್ಲಿಗೇ ಬಿಟ್ಟು ಬಿಡಿ ಎಂದಿದ್ದಾರೆ.

ನಟ ನಾಗಚೈತನ್ಯ ರವರನ್ನು ಡಿವೋರ್ಸ್ ಬಗ್ಗೆ ಪದೇ ಪದೇ ಕೇಳುತ್ತಿದ್ದು, ಇದಕ್ಕೆ ಆತ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ನಾಗಚೈತನ್ಯ ಬೇರೆಯವರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇರುತ್ತದೆ. ಆದರೆ ಅದು ನಮಗೆ ಹಿಂಸೆ ಕೊಡುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಸಮಂತಾ ರವರನ್ನು ತುಂಬಾ ಗೌರವಿಸುತ್ತೇನೆ. ಸಮಂತಾ ಮತ್ತು ನನ್ನ ನಡುವೆ ಏನು ನಡೆಯಿತು, ವಿಚ್ಚೇದನ ಯಾಕೆ ಆಯಿತು ಎಂಬುದು ನಮಗೆ ಮಾತ್ರ ಗೊತ್ತಿದೆ. ಕಲ್ಪಿತವಾದ ಎಲ್ಲಾ ವಿಚಾರಗಳೂ ಸುಳ್ಳು. ಸಮಂತಾ ಎಲ್ಲವನ್ನೂ ದಾಟಿ ಮುಂದೆ ಹೋಗಿದ್ದಾರೆ. ನಾನಿನ್ನು ಅದರಿಂದ ಮುಂದೆ ಹೋಗುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಪಾಡಿಗೆ ನನ್ನನ್ನು ಬಿಡಿ. ಎಲ್ಲರ ಬದುಕಿನಲ್ಲಿ ನಡೆಯುವಂತಹುದೇ ನಮ್ಮ ಜೀವನದಲ್ಲೂ ಸಹ ನಡೆದಿದೆ. ಇದಕ್ಕೆ ಅನಗತ್ಯ ಚರ್ಚೆಗಳು, ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ದಯವಿಟ್ಟು ವಿಚ್ಚೇದನ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ.

ಸದ್ಯ ಸಮಂತಾ ಸಾಲು ಸಾಲು ಸಿನೆಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಸಿನೆಮಾಗಳ ಜೊತೆಗೆ ಬಾಲಿವುಡ್ ಸಿನೆಮಾಗಳಲ್ಲೂ ಸಹ ಆಕೆ ನಟಿಸುತ್ತಾ ಪುಲ್ ಫಾರ್ಮನಲ್ಲಿದ್ದಾರೆ. ಇನ್ನೂ ನಾಗಚೈತನ್ಯ ಸಹ ಥ್ಯಾಂಕ್ ಯೂ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡಿದ್ದರು. ಆದರೆ ಆತ ಅಂದುಕೊಂಡಷ್ಟು ರೀತಿಯಲ್ಲಿ ಸಿನೆಮಾ ಸಕ್ಸಸ್ ಆಗಿಲ್ಲ. ಬಾಲಿವುಡ್ ನ ಅಮೀರ್‍ ಸಿಂಗ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Previous articleಎಮೋಷನಲ್ ರೀಲ್ಸ್ ಶೇರ್ ಮಾಡಿದ ಮೋಹಕ ತಾರೆ ನಟಿ ರಮ್ಯಾ, ಫೀಲಿಂಗ್ ರೀಲ್ಸ್ ಮಾಡಿದ್ದಾದರೂ ಏಕೆ?
Next articleಪ್ರೆಗ್ನೆನ್ಸಿ ಬಗ್ಗೆ ಸೋನಮ್ ಕಪೂರ್ ಮಾಡಿದ ಪೋಸ್ಟ್ ಸಖತ್ ವೈರಲ್…!