ಸಮಂತಾ ನಾಗಚೈತನ್ಯ ವಿಚ್ಛೇಧನ ಕಳೆದ ವರ್ಷ ಮುಖ್ಯ ಸೆಲೆಬ್ರೆಟಿ ವಿಚ್ಛೇಧನವಾಗಿ ಸುದ್ದಿಯಾಗಿತ್ತು. ಇವರಿಬ್ಬರ ವಿಚ್ಛೇಧನ ಸುದ್ದಿ ಈ ವರ್ಷವೂ ಕೂಡ ಮುಂದುವರೆದಿದೆ. ಸಮಂತಾ ಬಗ್ಗೆ ಕೆಟ್ಟ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದಾಗ ಮಾಜಿ ಪತಿ ನಾಗಚೈತನ್ಯ ಮೌನವಾಗಿದ್ದರು.
ಸಮಂತಾ ಬಗ್ಗೆ ಪ್ರಸಾರವಾದ ಯಾವ ವಿಚಾರಕ್ಕೂ ನಾಗಚೈತನ್ಯ ಸ್ಪಂದಿಸಿಲ್ಲ ಹಾಗೂ ಸ್ಪಷ್ಟಣೆ ನೀಡಲಿಲ್ಲ. ಆಗ ನಾಗ್ ಅವರ ಮೌನ ಟೀಕೆಗೆ ಒಳಗಾಯಿತು. ಇದೀಗ ಮೊದಲ ಬಾರಿಗೆ ನಾಗಚೈತನ್ಯ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ್ದಾರೆ. ಇದೀಗ ಅವರ ಹೊಸ ಸಿನಿಮಾ ಬಂಗಾರ್ ರಾಜು ರಿಲೀಸ್ ಗಾಗಿ ಸಿನಿಮಾ ಪ್ರಚಾರಕ್ಕಾಗಿ ಹಲವು ಸಂದರ್ಶನಗಳನ್ನ ನಾಗಚೈತನ್ಯ ನೀಡುತ್ತಿದ್ದಾರೆ.
ಸಂದರ್ಶನ ಒಂದರಲ್ಲಿ ನಾಗಚೈತನ್ಯ ಅವರಿಗೆ ವಿಚ್ಛೇಧನ ಬಗ್ಗೆ ಪ್ರಶ್ನಿಸಿದಾಗ. ಇಬ್ಬರ ಒಳಿತಿಗಾಗಿ ತೆಗೆದುಕೊಂಡ ನಿರ್ಣಯವದು ಎಂದು ಉತರಿಸಿದ್ದಾರೆ. ಆಕೆ ಸಂತೋಷವಾಗಿದ್ದರೆ ನಾನು ಸಂತೋಷವಾಗಿರುತ್ತೇನೆ ಆ ಸಂದರ್ಭದಲ್ಲಿ ವಿಚ್ಛೇಧನ ನಿರ್ಣಯ ಸೂಕ್ತ ಎನಿಸಿತ್ತು. ಆಗಾಗಿ ಈ ತೀರ್ಮಾನವನ್ನ ತೆಗೆದುಕೊಂದಿದ್ದೇವೆ ಎಂದಿದ್ದಾರೆ ನಾಗಚೈತನ್ಯ.