ಬಿಡುಗಡೆಗೂ ಮುನ್ನವೇ ಡಿಮ್ಯಾಂಡ್ ಹೆಚ್ಚಿಸಿಕೊಂಡ ನಾಂದಿ ಚಿತ್ರ!

ಹೈದರಾಬಾದ್: ಟಾಲಿವುಡ್‌ನ ಕಾಮಿಡಿ ನಟ ಎಂತಲೇ ಗುರ್ತಿಸಿಕೊಂಡ ಅಲ್ಲರಿ ನರೇಶ್ ಸಿನೆಮಾಗಳಂದರೇ ಸಖತ್ ಕಾಮಿಡಿಯಿಂದ ಕೂಡಿರುತ್ತದೆ ಎಂಬ ಭಾವನೆ ಬರುತ್ತದೆ. ಆದರೆ ಇದೀಗ ಎಮೊಷನಲ್ ಚಿತ್ರವೊಂದರಲ್ಲಿ ನರೇಶ್ ನಟಿಸಿದ್ದು, ಈ ಚಿತ್ರ ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿಗಳನ್ನು ಗಳಸಿದೆ ಎನ್ನಲಾಗುತ್ತಿದೆ.

ಟಾಲಿವುಡ್ ಡೈರೆಕ್ಟರ್ ವಿಜಯ್ ಕನಕಮೇಡಲ ಸಾರಥ್ಯದಲ್ಲಿ ಮೂಡಿಬಂದ ನಾಂದಿ ಚಿತ್ರ ಎಮೋಷನಲ್ ಸಿನೆಮಾ ಆಗಿದ್ದು, ಶತಮಾನಂ ಭವತಿ ಚಿತ್ರದ ನಿರ್ದೇಶಕ ಸತೀಶ್ ವಿಗ್ನೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಾಲಿವುಡ್ ನಟಿ ವರಲಕ್ಷ್ಮೀ, ಶರತ್ ಕುಮಾರ್, ಟಾಲಿವುಡ್‌ನ ಪ್ರಿಯದರ್ಶಿನಿ, ಹರೀಶ್ ಸೇರಿದಂತೆ ಹೊಸ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಚಿತ್ರದ ಹಕ್ಕುಗಳನ್ನು ಜಿ ಟಿವಿ ಯವರಿಗೆ ಮಾರಲು ಸಿನೆಮಾತಂಡ ನಿರ್ಧಾರ ಮಾಡಿದೆಯಂತೆ. ಕೆಲವೊಂದು ಮಾಹಿತಿಯ ಪ್ರಕಾರ ಸುಮಾರು ೧೦ ಕೋಟಿಗೆ ಜಿ.ಟಿವಿ ಗೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರಂತೆ ನಿರ್ಮಾಪಕರು. ಈಗಾಗಲೇ ಈ ಕುರಿತು ಮಾತುಕತೆ ಸಹ ನಡೆದಿದ್ದು, ಶೀಘ್ರದಲ್ಲೇ ಅಗ್ರಿಮೆಂಟ್ ಸಹ ಆಗಲಿದೆ ಎನ್ನಲಾಗುತ್ತಿದೆ.

ಈಗಾಗಲೇ ಹಿಂದಿನ ವರ್ಷವೇ ನಾಂದಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ದೊಡ್ಡ ರೇಂಜ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಈ ಬಾರಿ ಡಿಫರೆಂಟ್ ಹಿಟ್ ಹೊಡೆಯಲು ಪ್ಲಾನ್ ಹಾಕಿರುವ ಹಾಗೆ ಟೀಸರ್ ನ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅಂದಹಾಗೆ ಈ ಚಿತ್ರ ಬಹುತೇಕ ಭಾಗ ಜೈಲಿನಲ್ಲಿಯೇ ನಡೆಯುತ್ತದೆಯಂತೆ.

Previous articleನಟ ನಿಖಿಲ್ ಹುಟ್ಟುಹಬ್ಬದ ಸಂಭ್ರಮ: ಹೆಂಡತಿಯೊಂದಿಗೆ ಹುಟ್ಟುಹಬ್ಬ ಆಚರಣೆ
Next article200 ಕೋಟಿ ಗಳಿಸಿದ ಮಾಸ್ಟರ್ ಚಿತ್ರ! 9 ದಿನದಲ್ಲಿ 200 ಕೋಟಿ!