Film News

ಯುವರತ್ನ ಚಿತ್ರತಂಡದಿಂದ #MyGuru ಹ್ಯಾಷ್ ಟ್ಯಾಗ್ ಅಭಿಯಾನ

ಬೆಂಗಳೂರು: ಬಹುನಿರೀಕ್ಷಿತ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನೆಮಾದಲ್ಲಿ ಪಾಠಶಾಲೆ ಎಂಬ ಹಾಡಿದ್ದು, ಈ ಹಾಡಿನಲ್ಲಿ ಗುರುವಿನ ಬಗ್ಗೆ ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿರುವಂತೆ ಚಿತ್ರತಂಡ #MyGuru ಹ್ಯಾಷ್‌ಟ್ಯಾಗ್ ಅಭಿಯಾನ ಶುರು ಮಾಡಿದ್ದಾರೆ.

ಇನ್ನೂ ಈ ಅಭಿಯಾನದಲ್ಲಿ ಸಿನೆಮಾ ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದು, ತಮ್ಮ ಗುರುಗಳ ಬಗ್ಗೆ ಈ ಹ್ಯಾಷ್‌ಟ್ಯಾಗ್ ಮೂಲಕ ತಿಳಿಸುತ್ತಿದ್ದಾರೆ. ಎಲ್ಲರ ಜೀವನದಲ್ಲಿ ಒಬ್ಬ ಗುರು ಇರುತ್ತಾರೆ. ಆ ಗುರುವಿನಿಂದಲೇ ಒಳ್ಳೆಯ ಪ್ರಜೆಯಾಗಿ ರೂಪುಗಳೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಗುರುವನ್ನು ನೆನಪಿಸಿಕೊಳ್ಳಲು ಯುವರತ್ನ ಚಿತ್ರತಂಡ ದೊಡ್ಡ ವೇದಿಕೆಯನ್ನೇ ಕಲ್ಪಿಸಿಕೊಟ್ಟಂತಾಗಿದೆ.

ಈ ಅಭಿಯಾನದಲ್ಲಿ ಪುನೀತ್ ರಾಜ್‌ಕುಮಾರ್ ಭಾಗಿಯಾಗಿದ್ದು, ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಕಲಿಸಿಕೊಟ್ಟ ವಿಜಯಲಕ್ಷ್ಮೀ ಗುರುಗಳನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ವಿಜಯಲಕ್ಷ್ಮೀ ರವರ ಜೊತೆಗಿರುವ ಬಾಲ್ಯದ ಪೊಟೋವನ್ನು ಸಹ ಹಂಚಿಕೊಂಡಿದ್ದಾರೆ.

ಇನ್ನೂ ನಟ ಧ್ರುವಾ ಸರ್ಜಾ ಸಹ ಅಭಿಯಾನದಲ್ಲಿ ಭಾಗಿಯಾಗಿದ್ದು, ನನ್ನ ಅಣ್ಣ ನನ್ನ ಗುರು ಎಂದಿದ್ದಾರೆ. ಬಾಳೆಂಬ ಮೊಳಕೆ ಚಿಗುರು ಒಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣನೇ ನನ್ನ ಗುರು ಎಂದು ಚಿರು ಸರ್ಜಾ ರವರನ್ನು ನೆನಪಿಸಿಕೊಂಡಿದ್ದಾರೆ. ಇದೇ ರೀತಿ ಅನೇಕ ಸೆಲೆಬ್ರೆಟಿಗಳು ಈ ಅಭಿಯಾನದಲ್ಲಿ ಭಾಗಿಯಾಗಿದ್ದು ತಮಗೆ ಜೀವನ ರೂಪಿಸಿಕೊಟ್ಟ ಗುರುಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

Trending

To Top