Film News

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ವರ್ಷಕ್ಕೆ ನೀಡಲಿದ್ದಾರೆ ಗುಡ್ ನ್ಯೂಸ್

ಬೆಂಗಳೂರು: ಕನ್ನಡ ಸಿನಿರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲೊಬ್ಬರಾದ ಅರ್ಜುನ್ ಜನ್ಯ ರವರು ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಲಿದ್ದಾರಂತೆ.

ಹೌದು ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತಿ ಪಡೆದಿರುವ ಅರ್ಜುನ್ ಜನ್ಯ ರವರು ಜನವರಿ ೧ ರಂದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಜನ್ಯ ರವರು ನನ್ನ ಮೊದಲ ಭಕ್ತಿಗೀತೆಗಳ ಆಲ್ಬಂ ಬಿಡುಗಡೆ ಮಾಡುತ್ತಿರುವುದ ಸಂತಸ ತಂದಿದೆ ಎಂದಿದ್ದಾರೆ.

ಇಲ್ಲಿಯವರೆಗೂ ಕೇವಲ ಕಮರ್ಷಿಯಲ್ ಚಿತ್ರಗಳಿಗೆ ಮಾತ್ರ ಸಂಗೀತ ನೀಡುತ್ತಿದ್ದ ಅರ್ಜುನ್ ಜನ್ಯ ರವರು ಮೊದಲ ಬಾರಿ ಭಕ್ತಿ ಗೀತೆಗಳ ಕಡೆ ಗಮನ ಹರಿಸಿದ್ದಾರೆ. ಸಂಪೂರ್ಣವಾಗಿ ದೇವರ ಕುರಿತ ಆಲ್ಬಂ ರಚನೆ ಮಾಡಿದ್ದು, ಓಂ ಶಕ್ತಿ ದೇವರ ಬಗ್ಗೆ ಆಲ್ಬಂ ರಚನೆ ಮಾಡಿದ್ದು, ಹೊಸ ವರ್ಷಕ್ಕೆ ಲೋಕಾರ್ಪಣೆ ಮಾಡುತ್ತಿದ್ದಾರೆ.

ಸುಮಾರು ೧೫ ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ಸಂಗೀತ ನಿರ್ದೇಶಕನಾಗಿರುವ ಅರ್ಜುನ್ ಜನ್ಯ ರವರು ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತಿ ಗಳಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಿಗೆ ಬೇಡಿಕೆಯ ಸಂಗೀತ ನಿರ್ದೇಶಕರಾಗಿ ಬದಲಾಗಿ ಬಿಟ್ಟಿದ್ದಾರೆ ಜನ್ಯ ರವರು. ಕೋಟಿಗೊಬ್ಬ-೩, ಮದಗಜ, ರಾಜಮಾರ್ತಾಂಡ, ಗಾಳಿಪಟ-೨, ರಾಬರ್ಟ್, ವಿಂಡೋ ಸೀಟ್ ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ ಅರ್ಜುನ್ ಜನ್ಯ.

Trending

To Top