News

2018 ಸಾಲಿನಲ್ಲಿ ಯಾವ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿವೆ! ಯಾವುದು ಫ್ಲಾಪ್ ಆಗಿದೆ, ಇಲ್ಲಿದೆ ಎಕ್ಸ್ಕ್ಲೂಸಿವ್ ಮಾಹಿತಿ

kannada-movies2018

ಇವತ್ತು 2018 ಸಾಲಿನ ಕೊನೆಯ ದಿನ. ಈ ವರ್ಷ ನಮ್ಮ ಕನ್ನಡದಲ್ಲಿ ಸುಮಾರು 220 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಇದೆ ಮೊದಲ ಬಾರಿಗೆ ಒಂದು ವರ್ಷದಲ್ಲಿ ಸುಮಾರು 220 ಕ್ಕೂ ಹೆಚ್ಚು ಚಿತ್ರ ಕನ್ನಡದಲ್ಲಿ ಬಿಡುಗಡೆ ಆಗಿದೆ. ವಿಶೇಷ ಏನಪ್ಪಾ ಅಂದರೆ ಈ ವರ್ಷ ಸುಮಾರು 40 % ಕ್ಕೂ ಹೆಚ್ಚು ಚಿತ್ರಗಳು ಗೆದ್ದಿವೆ. ಇದು ನಿಜಕ್ಕೂ ಖುಷಿ ಪಡುವ ವಿಷ್ಯ ಎಂದೇ ಹೇಳಬಹುದು. ಈ ವರ್ಷ ಯಾವ ಯಾವ ಕನ್ನಡ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ, ಸೂಪರ್ ಹಿಟ್ ಆಗಿವೆ, ಯಾವ ಯಾವ ಚಿತ್ರಗಳು ಫ್ಲಾಪ್ ಆಗಿವೆ ಗೊತ್ತ! ಇಲ್ಲಿದೆ ಎಕ್ಸ್ಕ್ಲೂಸಿವ್ ಮಾಹಿತಿ! ತಪ್ಪದೆ ಪೂರ್ತಿ ಸುದ್ದಿ ಓದಿರಿ ಹಾಗು ಇದನ್ನು ಆದಷ್ಟು ಶೇರ್ ಮಾಡಿರಿ
KGF – ಈ ವರ್ಷದ ಅತೀ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರ ಎಂದರೆ ಅದು KGF . KGF ಚಿತ್ರ ಇದೆ ತಿಂಗಳು 21 ಕ್ಕೆ ಇಡೀ ದೇಶದಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಈಗಲೂ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ವಶಿಷ್ಠ, ಅನಂತ್ ನಾಗ್ ಅವರು ನಟಿಸಿದ್ದಾರೆ. KGF ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಗಳಿಸಿದ ಮೊಟ್ಟ ಮೊದಲ ಕನ್ನಡ ಚಿತ್ರ KGF ಆಗಿದೆ. TAGARU : ಈ ಚಿತ್ರವನ್ನು ನಾವು ಪ್ರಸ್ತಾಪ ಮಾಡಿಲ್ಲ ಅಂದ್ರೆ ನಮಗೆ ಪಾಪ ಬರುತ್ತದೆ! ಅದೇ ಕನ್ನಡದ ಈ ವರ್ಷದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ಟಗರು. ಟಗರು ಚಿತ್ರವನ್ನು ಕನ್ನಡದ ಅದ್ಭುತ ನಿರ್ದೇಶಕ ಸೂರಿ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಶಿವಣ್ಣ, ಡಾಲಿ ಧನಂಜಯ್, ವಶಿಷ್ಠ ಹಾಗು ಮನಿವ್ತಾ ಅವರು ನಟಿಸಿದ್ದರು. ಕನ್ನಡದ ಹೆಮ್ಮೆಯ ಚಿತ್ರ ಟಗರು ಚಿತ್ರವನ್ನು ಕರ್ನಾಟಕ ಅಲ್ಲದೆ, ಹೊರ ರಾಜ್ಯಗಳಲ್ಲಿ ಕೂಡ ಜನ ಹಾಡಿ ಹೊಗಳಿದ್ದರು. ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ಟಗರು ಚಿತ್ರವನ್ನು ಹೊಗಳಿದ್ದರು.
THE VILLAIN : 2018 ಸಾಲಿನ ಮತ್ತೊಂದು ಬಹಳಷ್ಟು ಸೌಂಡು ಮಾಡಿದ ಚಿತ್ರ ವೆಂದರೆ ಅದುವೇ ಜೋಗಿ ಪ್ರೇಮ್ ನಿರ್ದೇಶನ “ದಿ ವಿಲನ್” . ದಿ ವಿಲನ್ ಚಿತ್ರದಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಶಿವಣ್ಣ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಹಾಲಿವುಡ್ ನಟಿ ಅಮಿ ಜ್ಯಾಕ್ಸನ್ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ದಿ ವಿಲನ್ ಚಿತ್ರ ಬಿಡುಗಡೆ ಆಗಿ ಗಲ್ಲಾ ಪೆಟ್ಟಿಗೆ ಯಲ್ಲಿ ಅಂದುಕೊಂಡಷ್ಟು ಗಳಿಕೆ ಮಾಡಲಿಲ್ಲವಾದರೂ, ಚಿತ್ರದ ಓಪನಿಂಗ್ ಬಹಳ ಭರ್ಜರಿ ಆಗಿತ್ತು. ಶಿವಣ್ಣ ಹಾಗು ಸುದೀಪ್ ಅವರು ಅಭಿಮಾನಿಗಳು ಈ ಚಿತ್ರವನ್ನು ಹಾಡಿ ಹೊಗಳಿದ್ದರು. hiriya sarkari prathamika shale kasaragodu : ಕನ್ನಡದ ಮತ್ತೊಬ್ಬ ಹೆಮ್ಮೆಯ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನದ ಹಿರಿಯ ಸರ್ಕಾರೀ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಈ ವರ್ಷ ಪ್ರತಿಯೊಬ್ಬ ಕನ್ನಡಿಗರು ನೋಡಿ, ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರ ಈ ವರ್ಷದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ಎಂದೇ ಹೇಳಬಹುದು. hiriya sarkari prathamika shale kasaragodu ಚಿತ್ರದಲ್ಲಿ ಅನಂತ್ ನಾಗ್ ಅವರು ವಿಶೇಷ ಪಾತ್ರವನ್ನು ಮಾಡಿದ್ದಾರೆ.
AYOGYA : S. Mahesh Kumar ನಿರ್ದೇಶನದ ಅಯೋಗ್ಯ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಅಯೋಗ್ಯ ಕನ್ನಡ ಚಿತ್ರದಲ್ಲಿ ಸತೀಶ್ ನೀನಾಸಂ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಅಯೋಗ್ಯ ಚಿತ್ರ ಗಲ್ಲ ಪೆಟ್ಟಿಗೆಯಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದೆ. GULTOO : Janardhan ಚಿಕ್ಕಣ್ಣ ನಿರ್ದೇಶನದ gultoo ಚಿತ್ರ ಕನ್ನಡ ಚಿತ್ರ ರಸಿಕರ ಮನಗೆದಿದ್ದಾರೆ. gultoo ಚಿತ್ರದಲ್ಲಿ Naveen ಶಂಕರ್, Sonu ಗೌಡ, ಅವಿನಾಶ್, Rangayana ರಘು, Pawan ಕುಮಾರ್ ಅವರು ನಟಿಸಿದ್ದಾರೆ. ಕನ್ನಡ ಚಿತ್ರ GULTOO ಸೈಬರ್ ಕ್ರೈಂ ಬಗ್ಗೆ ಒಂದು ಅದ್ಭುತವಾದ ಸಂದೇಶವನ್ನು ಚಿತ್ರದಲ್ಲಿ ನಿರ್ದೇಶಕರು ನೀಡಿದ್ದಾರೆ.
VICTORY 2 : Hari ಸಂತೋಷ್ ನಿರ್ದೇಶನದ ಶರಣ್ ಅಭಿನಯದ ವಿಕ್ಟರಿ ೨ ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ನಮ್ಮ ಶರಣ್ ಅವರ ಜೊತೆ ಸಾಧು ಕೋಕಿಲ, ಅರ್ಮುಗಂ ರವಿ ಶಂಕರ್, ಅಸ್ಮಿತಾ ಸೂದ್, ಅವರು ನಟಿಸಿದ್ದಾರೆ. ವಿಕ್ಟರಿ 2 ಚಿತ್ರದ “ನಾವ್ ಮನೆಗ್ ಹೋಗೋದಿಲ್ಲ” ಹಾಡು ಕೂಡ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ವೈರಲ್ ಆಗಿತ್ತು. Ambi Ning Vayassaytho : ಇದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಅಭಿನಯದ ಕೊನೆಯ ಚಿತ್ರ. ಅಂಬಿ ನಿಂಗ್ ವಯಸ್ಸಾಯಿತೋ ಚಿತ್ರವನ್ನು Gurudatta ಗಾಣಿಗ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಜಾಕ್ ಮಂಜು ಹಾಗು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಇದು ಒಂದು! ಅಂಬಿ ಅವರ ನಿಧನದ ನಂತರ ನಿರ್ಮಾಪಕರು ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಿದ್ದರು. ನೋಡಿದ್ರಲ್ಲಾ ಸ್ನೇಹಿತರೆ! ಇವೆ ಈ ವರ್ಷದ ಕನ್ನಡದ ಸೂಪರ್ ಹಿಟ್ ಚಿತ್ರಗಳು. ಈ ವರ್ಷದ ಬೆಸ್ಟ್ ಸಿನಿಮಾ ಸಾಲಿನಲ್ಲಿ ಮೊದಲು ಬರುವುದು ರಾಕಿಂಗ್ ಸ್ಟಾರ್ ಯಶ್ ಅವರ KGF ಚಿತ್ರ. ಇಡೀ ಕನ್ನಡಿಗರು ಹೆಮ್ಮೆ ಪಡುವಂತೆ ಇಡೀ ದೇಶವೇ ನಮ್ಮ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದ KGF ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಸಲಾಂ! ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪುನೀತ್ ರಾಜಕುಮಾರ್ ಅವರ ಯಾವ ಸಿನಿಮಾ ಕೂಡ ಬಿಡುಗಡೆ ಆಗಿಲ್ಲ! ದರ್ಶನ್ ಅವರ ಸಿನಿಮಾ ಇದ್ದರೆ ಅದು ಈ ಲಿಸ್ಟ್ ನಲ್ಲಿ ತಪ್ಪದೆ ಇರುತ್ತಿತ್ತು.

Trending

To Top