News

ಮನೆಗೆ ನುಗ್ಗಿದ ದರೋಡೆಕೋರರನ್ನು ಅಟ್ಟಾಡಿಸಿ ಹೊಡೆದ ತಾಯಿ-ಮಗಳು, ಹೆಣ್ಣು ಮಕ್ಖಳ ಧೈರ್ಯಕ್ಕೆ ಮೆಚ್ಚಿ ಪೊಲೀಸರಿಂದ ಸನ್ಮಾನ…..!

ಮನೆಗೆ ನುಗ್ಗಿದ ದರೋಡೆಕೋರನ್ನು ಇಬ್ಬರು ಮಹಿಳೆಯರು ಅಂದರೇ ತಾಯಿ ಹಾಗೂ ಮಗಳು ಇಬ್ಬರೂ ಸೇರಿ ಅಟ್ಟಾಡಿಸಿ ಹೊಡೆದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಹೆಣ್ಣು ಮಕ್ಕಳಿಬ್ಬರ ಧೈರ್ಯ ಹಾಗೂ ಸಾಹಸಕ್ಕೆ ಎಲ್ಲರೂ ಮೆಚ್ಚುತ್ತಿದ್ದು, ಹೈದರಾಬಾಧ್ ಪೊಲೀಸರು ತಾಯಿ ಮಗಳಿಬ್ಬರನ್ನೂ ಸನ್ಮಾನಿಸಿದ್ದಾರೆ.

ಹೈದರಾಬಾದ್ ನ ಬೇಗಂ ಪೇಟೆಯಲ್ಲಿ ಉತ್ತರ ಪ್ರದೇಶದ ಕಾನ್ಪುರ ಮೂಲದ ಇಬ್ಬರು ದರೋಡೆಕೋರರು ಕಳೆದ ಕೆಲವು ದಿನಗಳ ಪಕ್ಕಾ ಪ್ಲಾನ್ ಮಾಡಿ ಡೆಲಿವರಿ ಬಾಯ್ ವೇಷ ಧರಿಸಿ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ದೋಚಲು ಮನೆಯೊಂದಕ್ಕೆ ನುಗ್ಗಿದ್ದರು. ಆದರೆ ಮನೆಯಲ್ಲಿದ್ದ ಇಬ್ಬರೂ ಹೆಂಗಸರು ದರೋಡೆಕೋರರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಪೊಲೀಸರ ಮಾಹಿತಿಯಂತೆ ಇಬ್ಬರು ದರೋಡೆಕೋರರು ಮನೆಯನ್ನು ಮೊದಲೇ ಹುಡುಕಿ ಬಳಿಕ ದರೋಡೆ ಮಾಡಲು ಪ್ಲಾನ್ ಮಾಡಿದ್ದಾರೆ. ದರೋಡೆ ಮಾಡುವ ಹಿಂದಿನ ದಿನ ಮದ್ಯಾಹ್ನ 1 ಗಂಟೆಯ ಸಮಯದಲ್ಲಿ ತನ್ನನ್ನು ಡೆಲಿವರಿ ಬಾಯ್ ಎಂದು ಪರಿಚಯಿಸಿಕೊಂಡು ಮನೆಗೆ ಪ್ರವೇಶಿಸಿದ್ದಾನೆ. ಆ ಮನೆಯ ಯಜಮಾನ ಅಮಿತ್ ಮಹ್ನೋತ್ ಮನೆಯಲ್ಲಿ ಇದ್ದರೂ ಮನೆಯಲ್ಲಿದ್ದ ಎಲ್ಲವನ್ನೂ ಗಮನಿಸಿ ದರೋಡೆಗೆ ಪ್ಲಾನ್ ಮಾಡಿದ್ದಾರೆ ಆರೋಪಿಗಳು.

ಬಳಿಕ ಇಬ್ಬರೂ ದರೋಡೆಕೋರರು ಮನೆಗೆ ನುಗ್ಗಿದ್ದಾರೆ. ಅದರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದಾನೆ, ಮತ್ತೋರ್ವ ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ. ಓರ್ವ ಕಿರಾತಕ ಮನೆಯ ಅಡುಗೆ ಮನೆಗೆ ನೇರವಾಗಿ ನುಗ್ಗಿ ಅಡುಗೆ ಮಾಡುತ್ತಿದ್ದ ಕೆಲಸದಾಕೆಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ ಹಾಕಿದ್ದಾನೆ. ಆಗ ಅಮಿತಾ ಅವರ ಹದಿಹರೆಯದ ಮಗಳು ಮನೆಯೊಳಗೆ ನುಗ್ಗುತ್ತಿದ್ದ ಇನ್ನೊಬ್ಬನನ್ನು ಧೈರ್ಯದಿಂದ ಎದುರಿಸಿದ್ದಾಳೆ. ಅಲ್ಲಿ ಜಗಳ ನಡೆದಿದೆ. ಬಳಿಕ 46 ವರ್ಷದ ತಾಯಿ ಅಮಿತಾ ಕೂಡ ಹೋರಾಟ ಮಾಡಿದ್ದು, ಜೋರಾಗಿ ಕಿತ್ತಾಟ ನಡೆದಿದೆ. ಬಳಿಕ ಆರೋಪಿಯೊಬ್ಬ ಗನ್ ತೆಗೆದು ತಾಯಿ ಹಾಗೂ ಮಗಳನ್ನು ಹೆದರಿಸಲು ಯತ್ನಿಸಿದ್ದಾನೆ. ಅದಕ್ಕೆ ಬಗ್ಗದ ಅವರು ತಮ್ಮಲ್ಲಿನ ಸಮರ ಕಲೆ ಕೌಶಲ್ಯವನ್ನು ಬಳಸಿ ಅವರೊಂದಿಗೆ ಹೋರಾಡಿ ಗನ್ ಕೆಳಗೆ ಬೀಳಿಸಿದ್ದಾರೆ. ಜೊತೆಗೆ ಆತನಿಗೆ ಸರಿಯಾಗಿ ಹೊಡೆದಿದ್ದಾರೆ.

ಇನ್ನೂ ತಮ್ಮ ಕೆಲಸ ಆಗೋಲ್ಲ ಎಂದು ಅರಿತ ದರೋಡೆಕೋರರು ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಸದ್ದು ಕೇಳಿ ಓಡಿ ಬಂದು ಇಬ್ಬರು ಆರೋಪಿಗಳಲ್ಲಿ ಒಬ್ಬನ್ನನ್ನು ಹಿಡಿದಿದ್ದಾರೆ. ಮತ್ತೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಆತನನ್ನು ಸಹ ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ. ಇನ್ನೂ ತಾಯಿ ಮಗಳ ಧೈರ್ಯ ಸಾಹಸಗಳ ವಿಡಿಯೋ ಸೋಷಿಯಲ್ ಮಿಡಿಯಾದಲಲ್‌ಇ ಸಖತ್ ವೈರಲ್ ಆಗುತ್ತಿದೆ. ಪೊಲೀಸರು ಸಹ ಮನೆಗೆ ಬಂದು ತಾಯಿ ಹಾಗೂ ಮಗಳನ್ನು ಸನ್ಮಾನಿಸಿ ಶ್ಲಾಘಿಸಿದ್ದಾರೆ.

Most Popular

To Top