ಸಿಮ್ ಖರೀದಿಸಲು ಹೋದ ನಟಿಗೆ ಅವಮಾನ, ಕಚೇರಿಯಲ್ಲಿ ಕೂಡಿ ಹಾಕಿದ್ರಂತೆ ಯಾಕೆ ಗೊತ್ತಾ?

ಸಿನೆಮಾ ಸೆಲೆಬ್ರೆಟಿಗಳು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಿರುತ್ತಾರೆ. ಜೊತೆಗೆ ಆಗಾಗ ದೌರ್ಜನ್ಯಗಳಂತಹ ಸನ್ನಿವೇಶಗಳೂ ಸಹ ಹೆಚ್ಚಾಗಿ ನಡೆಯುತ್ತಲೇ ಇರುತ್ತವೆ. ಇತ್ತೀಚಿಗೆ ಕೇರಳದಲ್ಲಿ ನಟಿಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿವೆ ಎನ್ನಲಾಗಿದ್ದು, ಮಲಯಾಳಂ ಸಿನಿರಂಗದ ನಟಿಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳಿಂದ ಸಿನಿಪ್ರಿಯರಲ್ಲಿ ಬೇಸರವನ್ನು ಸಹ ಮೂಡಿಸಿದೆ. ಇದೀಗ ಹಾಡಹಗಲೆ ಮಲಯಾಳಂ ನಟಿಯನ್ನು ಕಚೇರಿಯಲ್ಲಿ ಕೂಡಿ ಹಾಕಿದ ಘಟನೆಯೊಂದ ಬೆಳಕಿಗೆ ಬಂದಿದೆ.

ಇತ್ತೀಚಿಗಷ್ಟೆ ಹಗಲಿನಲ್ಲೇ ಖ್ಯಾತ ಮಲಯಾಳಂ ನಟಿಯ ಮೇಲೆ ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದೆ ಸಿನೆಮಾ ಪ್ರಚಾರದ ಸಮಯದಲ್ಲಿ ಸಾನಿಯಾ ಅಯ್ಯಪ್ಪನ್ ಜೊತೆ ಅಭಿಮಾನಿಯೊಬ್ಬ ಕೆಟ್ಟದಾಗಿ ವರ್ತನೆ ಮಾಡಿದ್ದ, ಇನ್ನೂ ಈ ಘಟನೆಗಳು ಹಸಿಯಾಗಿರುವ ಬೆನ್ನಲ್ಲೆ ಮತ್ತೊಬ್ಬ ನಟಿಯ ಮೇಲೆ ದೌರ್ಜನ್ಯ ನಡೆದಿದೆ. ಸಿಮ್ ಖರೀದಿಸಲು ಹೋದಾಗ ಆ ನಟಿಯನ್ನು ಕಚೇರಿಯಲ್ಲಿ ಕೂಡಿಹಾಕಿದ್ದರಂತೆ. ಆಕೆ ಬೇರೆ ಯಾರೂ ಅಲ್ಲ ಮಲಯಾಳಂ ನಟಿ ಅನ್ನಾ ರಾಜನ್ ರವರನ್ನೇ ಕಚೇರಿಯಲ್ಲಿ ಕೂಡಿಹಾಕಿದ್ದರಂತೆ. ಅನ್ನಾ ರಾಜನ್ ಮಲಯಾಳಂನ ಸೂಪರ್‍ ಹಿಟ್ ಸಿನೆಮಾ ಅಂಗಮಲೈ ಡೈರೀಸ್ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ನಟಿಯಾಗಿದ್ದಾರೆ. ಇದೀಗ ಆಕೆ ಟೆಲಿಕಾಂ ಸಂಸ್ಥೆಯ ಸಿಬ್ಬಂದಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಅನ್ನಾ ರಾಜನ್ ಕೇರಳದ ಅಳುವಾದ ಮುನಿಸಿಪಾಲಿಟಿ ಕಚೇರಿ ಬಳಿಯಿರುವ ಟೆಲಿಕಾಂ ಸಂಸ್ಥೆಯೊಂದಕ್ಕೆ ಸಿಮ್ ಖರೀದಿಸಲು ಹೋಗಿದ್ದಾಗ ಈ ಘಟನೆ ನಡೆದಿತ್ತಂತೆ. ಸಿಮ್ ಖರೀದಿಗೆ ಹೋಗಿದ್ದಾಗ ನಟಿ ಹಾಗೂ ಸಿಬ್ಬಂದಿಯ ನಡುವೆ ಜಗಳ ನಡೆದಿದ್ದು, ಈ ವೇಳೆ ನೌಕರ ಅನ್ನಾ ರಾಜನ್ ರನ್ನು ಎಳೆದುಕೊಂಡು ಹೋಗಿ ಕಚೇರಿಯಲ್ಲಿ ಕೂಡಿ ಹಾಕಿದ್ದನಂತೆ. ಬಳಿಕ ನಟಿ ಅಳುವಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಆಕೆಯನ್ನು ರಕ್ಷಣೆ ಮಾಡಿದ್ದರಂತೆ. ಅನ್ನಾ ಕಚೇರಿಯಿಂದ ಹೊರಬಂದ ಬಳಿಕ ಪೊಲೀಸರಿಗೆ ಟೆಲಿಕಾಂ ಸಂಸ್ಥೆಯ ಸಿಬ್ಬಂದಿ ವಿರುದ್ದ ದೂರು ನೀಡಿದ್ದರಂತೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ರಾಜಿ ಸಂಧಾನ ನಡೆಯಿತಂತೆ.

ಇನ್ನೂ ಸಿನೆಮಾ ಸೆಲೆಬ್ರೆಟಿಗಳಿಗೆ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಮಿತೀಮೀರಿ ನಡೆಯುತ್ತಿರುತ್ತವೆ. ಸದ್ಯ ಅನ್ನಾ ರಾಜನ್ ಗೆ ಟೆಲಿಕಾಂ ಸಿಬ್ಬಂದಿ ಕೂಡಿ ಹಾಕಿದ ವಿಚಾರ ಹೊರಬಂದಿದೆ. ಇನ್ನೂ ಅನ್ನಾ ರಾಜನ್ ಅಂಗಮಲೈ ಡೈರಿಸ್ ಸಿನೆಮಾದ ಮೂಲಕ ಕಳೆದ 2017 ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ವೇಲಿಪಡಿಂತೆ, ಪುಸ್ತಕಂ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಮಲಯಾಳಂನಲ್ಲಿ ಭರ್ಜರಿಯಾಗಿ  ಪ್ರದರ್ಶನ ಕಂಡ ಅಯ್ಯುಪ್ಪನುಂ ಕೋಶೀಯಂ ಸಿನೆಮಾದಲ್ಲೂ ಸಹ ಅನ್ನಾ ರಾಜನ್ ಬಣ್ಣ ಹಚ್ಚಿದ್ದರು. ಈ ಸಿನೆಮಾದಲ್ಲಿ ಪೃಥ್ವಿರಾಜ್ ಹೆಂಡತಿಯ ಪಾತ್ರವನ್ನು ಪೋಷಣೆ ಮಾಡಿದ್ದರು ಅನ್ನಾ ರಾಜನ್.

Previous articleಸಾಲಿಡ್ ಗ್ಲಾಮರ್ ಪ್ರದರ್ಶನ ಮಾಡುವ ಮೂಲಕ ಕ್ಯೂಟ್ ಪೋಸ್ ಕೊಟ್ಟ ಸ್ಟಾರ್ ಆಂಕರ್ ಅನಸೂಯ…!
Next articleಕ್ಲೋಜಪ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ಡೆಲ್ಲಿ ಬ್ಯೂಟಿ ರಾಶಿ ಖನ್ನಾ…!