ಒಂದು ಕಾಲ ಇತ್ತು ಸಾರ್! ಮಕ್ಕಳು ಬರೀ ಆಟದ ಮೈದಾನದಲ್ಲಿ ಆಡುತ್ತಿದ್ದರು, ಸ್ನೇಹಿತರ ಜೊತೆ ಬೆರೆಯುತ್ತಿದ್ದರು, ಆಡಲು ಆಟದ ವಸ್ತುಗಳಿದ್ದವು, ನೀರಿನಲ್ಲಿ ಈಜುತಿದ್ದರು, ಮರ ಕೋತಿ ಆಟ, ಕಣ್ಣ ಮುಚ್ಚಾಲೆ, ಬುಗುರಿ ಮತ್ತಿರ ಆಟ ಇದ್ದವು! ಆಡಲು ಮನಸ್ಸು ಯಾವಾಗಲೂ ಉಲ್ಲಾಸದಿಂದ ಇತ್ತು ಯಾವುದೇ ಕಾಯಿಲೆ ಗಳು ಬರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಸ್ಮಾರ್ಟ್ ಫೋನ್ ಬೇಕೆ ಬೇಕು ಅಷ್ಟರ ಮಟ್ಟಿಗೆ ಮೊಬೈಲ್ ಅಭ್ಯಾಸ ಹೆಚ್ಚಾಗಿದೆ. ಕ್ಲಾಸ್ನಲ್ಲಿ ಕುಳಿತು ಮಕ್ಕಳು ಪಾಠ ಕೇಳದೇ ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಈ ಸಂಬಂಧ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜಿನೀಶ್ ಅವರು ಸಿಐಡಿಗೆ ಪತ್ರ ಬರೆದಿದ್ದಾರೆ.
ಬರಿ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡಿದರೆ ಪರ್ವಾಗಿಲ್ಲ ಈಗ ಬೇರೆ ತರ ಗೇಮ್ ಗಳಿಗೆ ಅಡಿ ಆಳಗಿದ್ದರೆ ಏನ್ ಗೇಮ್ ಅದು ಅಂದ್ರೆ ಈಗ ತರಗತಿಯಲ್ಲೇ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದಾರೆ. ಇದು ಶಾಲಾ ಮುಖ್ಯಸ್ಥರ ತಲೆಕೆಡ್ಸಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಸಿ ಎಲ್ಲಂದರೆ ಅಲ್ಲಿ ನೀಲಿ ಚಿತ್ರಗಳನ್ನು ನೋಡಲು ಹೆಚ್ಚಾಗಿದ್ದಾರೆ. ಅಲ್ಲದೆ ಮೊಬೈಲ್ಗೆ ಅಡಿಕ್ಟ್ ಆಗಿರೋದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಮೊಬೈಲ್ನಿಂದ ಮಕ್ಕಳಲ್ಲಿರುವ ಮುಗ್ಧ ಭಾವನೆಗಳು ಕೂಡ ಕಡಿಮೆಯಾಗ್ತಿವೆ. ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಶಾಲಿನಿ ಅವರು ಪತ್ರದಲ್ಲಿ ಬರೆದಿದ್ದಾರೆ.
ಮೊಬೈಲ್ ಬಳಕೆಯನ್ನು ಶಿಕ್ಷಣ ಇಲಾಖೆ ಸೀರಿಯಸ್ಆಗಿ ತೆಗೆದುಕೊಂಡಿದ್ದಲ್ಲದೇ ರಾಜ್ಯದ ಎಲ್ಲ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಆದರೆ ಈ ಬಗ್ಗೆ ನೀವು ಗಮನಹರಿಸಿ ಕೆಲ ಸಲಹೆ ಸೂಚನೆ ಅಥವಾ ಕ್ರಮ ಕೈಗೊಳ್ಳಬೇಕೆಂದು ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಶಾಲಿನಿ ಅವರು ಪತ್ರ ಬರೆದಿದ್ದಾರೆ. ಇದರಲ್ಲಿ ಮೊದಲ ತಪ್ಪು ಪೋಷಕರೂ ಮೊಬೈಲ್ ಮಕ್ಕಳ ಕೈಗೆ ಕೊಟ್ಟಿದ್ದು.
