ಮಿಸ್ ಇಂಡಿಯಾ ಸಿನಿ ಶೆಟ್ಟಿಯ ಮನಸ್ಸು ಕದ್ದ ಆ ತೆಲುಗು ನಟ ಯಾರು ಗೊತ್ತಾ?

ಇತ್ತೀಚಿಗೆ ಮುಂಬೈನಲ್ಲಿ ಜಿಯೋ ಕನ್ವೆನ್ಷನ್ ಸೆಂಟರ್‍ ನಲ್ಲಿ ಮಿಸ್ ಫೆಮಿನಾ ಇಂಡಿಯಾ ವರ್ಲ್ಡ್ 2022ರ ವಿಜೇತೆ ಸಿನಿ ಶೆಟ್ಟಿ ಈಗಾಗಲೇ ದೊಡ್ಡ ಮಟ್ಟದಲ್ಲೇ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ದೇಶದ ಹಲವು ರಾಷ್ಟ್ರಗಳಿಂದ ಬಂದಿ 31 ಮಂದಿಯನ್ನು ಎದುರಿಸಿ ಮಿಸ್ ಇಂಡಿಯಾ ಟೈಟಲ್ ಗಳಿಸಿಕೊಂಡು ಮಿಸ್ ಇಂಡಿಯಾ ಕಿರೀಟಾ ಮುಡಿಗೇರಿಸಿಕೊಂಡಿದ್ದಾರೆ. 21 ವರ್ಷದ ಈಕೆಗೆ ಮಾಜಿ ಮಿಸ್ ಇಂಡಿಯಾ ತೆಲಂಗಾಣದ ಮಾನಸ ವಾರಾಣಾಸಿ ಕಿರೀಟವನ್ನು ಹಸ್ತಾಂತರಿಸಿದರು. ಇನ್ನೂ ಆಕೆ ತನಗೆ ಇಷ್ಟವಾದ ತೆಲುಗು ನಟ ಯಾರು ಎಂಬುದರ ಬಗ್ಗೆ ರಿವೀಲ್ ಮಾಡಿದ್ದಾರೆ.

31 ಮಂದಿ ಯುವತಿಯರನ್ನು ಹಿಂದಿಕ್ಕಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಸಿನಿ ಶೆಟ್ಟಿಯ ಅದೃಷ್ಟ ಇದೀಗ ಬದಲಾಗಿದೆ. ಇತ್ತೀಚಿಗೆ ಆಕೆ ಮಿಡಿಯಾ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತುಳು ನಾಡಿನ ಈ ಅಪ್ಸರೇ ನೀಡಿದ ಹೇಳಿಕೆಗಳು ಇದೀಗ ಎಲ್ಲೆಡೆ ಆಸಕ್ತಿಕರವಾಗಿ ಮಾರ್ಪಾಡಾಗಿದೆ. ಈ ಸಂದರ್ಶನದಲ್ಲಿ ಮಾತನಾಡಿದ ಆಕೆ ನಾನು ಟೈಟಲ್ ಗೆದ್ದ ಬಳಿಕ ನನ್ನ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಅವುಗಳನ್ನು ರೀಚ್ ಆಗಲು ತುಂಬಾ ಪ್ರಯತ್ನ ಮಾಡುತ್ತಿದ್ದೇನೆ. ಸದ್ಯ ಮಿಸ್ ವರ್ಲ್ಡ್‌ಗೆ ಸಿದ್ದವಾಗುತ್ತಿದ್ದೇನೆ. ಆ ಸ್ಪರ್ಧೆ ಗಾಗಿ ತುಂಬಾನೆ ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ. ನಾನು ದೇಶದ ಅನೇಕ ರಾಜ್ಯಗಳ ಯುವತಿಯರ ಜೊತೆ ಪೈಪೋಟಿಗೆ ಇಳಿದಿದ್ದೇನೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರತ್ಯೇಕತೆ ಇದೆ. ಕಳೆದ ಎರಡು ವರ್ಷಗಳಿಂದ ಸೌತ್ ಇಂಡಿಯಾದಿಂದಲೇ ಮಿಸ್ ಇಂಡಿಯಾ ಆಗಿರುವುದು ಸಂತಸ ತಂದಿದೆ. ಮಿಸ್ ಇಂಡಿಯಾ ಕಿರೀಟವನ್ನು ಸೌತ್, ನಾರ್ತ್ ಎಂಬ ಬೇಧಭಾವ ಇಲ್ಲದೇ ಯಾರಾದರೂ ಗೆಲ್ಲಬಹುದು ಎಂದಿದ್ದಾರೆ.

ಇನ್ನೂ ನನಗೆ ನನ್ನ ತಂದೆ ತಾಯಿಯವರೇ ಸ್ಪೂರ್ತಿ. ಇನ್ನೂ ವಿದ್ಯಾಭ್ಯಾಸದಲ್ಲೂ ಸಹ ನನಗೆ ತುಂಬಾ ಒಳ್ಳೆಯ ರೆಕಾರ್ಡ್ ಇದೆ. ನಾನು ಚಿಕ್ಕಂದಿನಿಂದಲೇ ಹಿಂದಿ ಸಿನೆಮಾಗಳಿಗೆ ಅಭಿಮಾನಿಯಾಗಿದ್ದೇನೆ. ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯರಾದ ಐಶ್ವರ್ಯ ರೈ ಹಾಗೂ ಪ್ರಿಯಾಂಕಾ ಚೋಪ್ರಾ ರವರಂತೆ ಆಗಲು ತುಂಬಾ ಆಸೆ ಪಟ್ಟಿದ್ದೇನೆ. ನನಗೆ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಎಂದರೇ ತುಂಬಾನೆ ಇಷ್ಟ ಎಂದಿದ್ದಾರೆ. ಇನ್ನೂ ಟಾಲಿವುಡ್ ನಲ್ಲಿ ನನಗೆ ವಿಜಯ್ ದೇವರಕೊಂಡ ಎಂದರೇ ತುಂಬಾನೆ ಇಷ್ಟ ಎಂದು ಹೇಳುವ ಮೂಲಕ ವಿಜಯ್ ದೇವರಕೊಂಡ ಜೊತೆ ಸಿನೆಮಾ ಮಾಡುವ ಬಯಕೆಯನ್ನು ಪರೋಕ್ಷವಾಗಿ ಹೇಳಿದಂತಿದೆ. ಇನ್ನೂ ನಾನು ಮಿಸ್ ಇಂಡಿಯಾ ಸ್ಪರ್ಧೆಗೆ ಹೋಗುತ್ತೇನೆ ಎಂದಾಗ ನಮ್ಮ ಪೋಷಕರು ತುಂಬಾನೆ ಭಯ ವ್ಯಕ್ತಪಡಿಸಿದರು. ಬಳಿಕ ಧೈರ್ಯ ತುಂಬಿದರು. ಪ್ರತಿ ಯುವತಿಗೆ ಆತ್ಮವಿಶ್ವಾಸ ಎಂಬುದು ತುಂಬಾನೆ ಮುಖ್ಯವಾಗಿದೆ. ಹೊಸ ವಿಚಾರಗಳನ್ನು ತಿಳಿಯಲು ಸದಾ ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಇನ್ನೂ ರೌಡಿ ಹಿರೋ ವಿಜಯ್ ದೇವರಕೊಂಡ ಲೈಗರ್‍ ಸಿನೆಮಾದ ನ್ಯೂಡ್ ಪೊಟೋ ಒಂದು ರಿಲೀಸ್ ಆಗಿತ್ತು. ಈ ಪೊಟೋಗೆ ಟಾಲಿವುಡ್, ಬಾಲಿವುಡ್ ನಲ್ಲೂ ಸಹ ಅನೇಕ ನಟಿಯರು ಆತನ ಪೋಸ್ ಗೆ ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮಿಸ್ ಇಂಡಿಯಾ ಸಿನಿ ಶೆಟ್ಟಿ ಸಹ ವಿಜಯ್ ದೇವರಕೊಂಡ ಎಂದರೇ ತುಂಬಾ ಇಷ್ಟ ಎಂದು ಹೇಳಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ.

Previous articleಶಾರ್ಟ್ ಡ್ರೆಸ್ ನಲ್ಲಿ ಶಾಕ್ ಕೊಟ್ಟ ನಟಿ ಭೂಮಿಕಾ….! ಬೈಕ್ ಮೇಲೆ ಮಲಗಿ ಹಾಟ್ ಭಂಗಿಮದಲ್ಲಿ ಪೋಸ್..!
Next articleಸೂರ್ಯನಿಗೆ ಹೀಟ್ ಹೆಚ್ಚಿಸುವಂತೆ ಹಾಟ್ ಪೋಸ್ ಕೊಟ್ಟ ಪ್ರಿಯಾಂಕಾ ಜವಾಲ್ಕಾರ್…!