ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಮನೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಭೇಟಿ ನೀಡಿದ್ದಾರೆ. ಇನ್ನೂ ಸಚಿವರ ಭೇಟಿ ಪವನ್ ಒಡೆಯರ್ ರವರ ಇಡೀ ಕುಟುಂಬ ಸಂತೋಷದಿಂದ ಸಂಭ್ರಮಿಸಿದೆ.
ಇತ್ತೀಚಿಗಷ್ಟೆ ನಿರ್ದೇಶಕ ಪವನ್ ಒಡೆಯರ್ ಪತ್ನಿ ಆಪೇಕ್ಷಾ ಪುರೋಹಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪವನ್ ಒಡೆಯರ್ ರವರ ಮನೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಮುದ್ದಾದ ಮಗುವಿಗೆ ಉಡುಗೊರೆ ನೀಡಿ ಶುಭ ಹಾರೈಸಿ, ಮಗುವನ್ನು ಮುದ್ದಾಡಿದ್ದಾರೆ. ಸಚಿವರ ಭೇಟಿಯ ಪೊಟೋಗಳನ್ನು ಪವನ್ ಒಡೆಯರ್ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡು ಅದ್ಬುತ್ವ ವ್ಯಕ್ತಿತ್ವಕ್ಕೆ ಮೂಕನಾಗಿದ್ದೇನೆ ಸರ್, ನಿಮ್ಮ ಎಲ್ಲಾ ಕೆಲಸಗಳ ಒತ್ತಡಗಳ ನಡುವೆಯೂ ನಮ್ಮ ಮನೆಗೆ ಬಂದು, ನನ್ನ ಮಗುವಿಗೆ ಆರ್ಶೀವಾದ ಮಾಡಿದ್ದೀರಿ, ನಿಮಗೆ ನಾನು ಚಿರ ಋಣಿ ಎಂದು ಬರೆದುಕೊಂಡಿದ್ದಾರೆ.
ಪವನ್ ಒಡೆಯರ್ ರವರ ಜನ್ಮದಿನದಂದೇ ಅವರಿಗೆ ಮಗು ಸಹ ಜನಿಸಿದ್ದು, ಈ ವಿಚಾರವನ್ನು ಒಡೆಯರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಸಚಿವ ಸುಧಾಕರ್ ಕೆಲ ಸಮಯ ಪವನ್ ಒಡೆಯರ್ ಕುಟುಂಬದ ಜೊತೆ ಕಳೆದು, ಮಾತುಕತೆ ನಡೆಸಿದ್ದು, ಸಚಿವ ಸುಧಾಕರ್ ಜೊತೆ ಒಡೆಯರ್ ಕುಟುಂಬ ತೆಗೆಸಿಕೊಂಡ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
